ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ನೌಕರಿಗೆ ಕರಾವಳಿ ಯುವಕರ ನಿರಾಸಕ್ತಿ

ಅಭ್ಯರ್ಥಿಗಳ ಆಕರ್ಷಿಸಲು ಸೇನೆ, ಜಿಲ್ಲಾಡಳಿತ ಜಂಟಿ ಯತ್ನ
Last Updated 7 ಮಾರ್ಚ್ 2017, 9:40 IST
ಅಕ್ಷರ ಗಾತ್ರ
ಮಂಗಳೂರು: ಸೇನೆಯ ವಿವಿಧ ಹುದ್ದೆಗಳ ಭರ್ತಿಗೆ ನಡೆಯುವ ನೇಮಕಾತಿ ರ್‍ಯಾಲಿಗಳಲ್ಲಿ ಅರ್ಜಿ ಸಲ್ಲಿಸುತ್ತಿರುವ ಕರಾ ವಳಿ ಯುವಕರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ. ಈ ಕಾರಣದಿಂದ ಕರಾ ವಳಿ ಯುವಕರನ್ನು ಸೇನಾ ನೌಕರಿಗಳತ್ತ ಸೆಳೆಯಲು ಮಂಗಳೂರಿನ ಸೇನಾ ನೇಮಕಾತಿ ಕಚೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಜಂಟಿ ಪ್ರಯತ್ನ ಆರಂಭಿಸಿವೆ.
 
ಸೇನೆಯ ಐದು ವರ್ಗದ ಸೈನಿಕ ಹುದ್ದೆಗಳ ಭರ್ತಿಗಾಗಿ  ಮೇ 12ರಿಂದ 18ರವರೆಗೆ ವಿಜಯಪುರದ ಸೈನಿಕ ಶಾಲೆ ಯಲ್ಲಿ ಸೇನಾ ನೇಮಕಾತಿ ರ್‍ಯಾಲಿ ನಡೆಯಲಿದೆ.

ಮಂಗಳೂರು ಸೇನಾ ನೇಮಕಾತಿ ಕಚೇರಿಯಿಂದ ನಡೆಯುವ ಈ ರ್‍ಯಾಲಿ ಯಲ್ಲಿ ದಕ್ಷಿಣ ಕನ್ನಡ ಸೇರಿದಂತೆ 11 ಜಿಲ್ಲೆಗಳ ಯುವಕರು ಭಾಗವಹಿಸಲು ಅವಕಾಶವಿದೆ. ಕೆಲವು ವರ್ಷಗಳಿಂದ ಸೇನಾ ನೇಮಕಾತಿ ರ್‍ಯಾಲಿಗೆ ಹಾಜರಾಗು ತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿ ಗಳ ಸಂಖ್ಯೆ ತೀವ್ರವಾಗಿ ಇಳಿಕೆಯಾಗಿರು ವುದನ್ನು ಮನಗಂಡಿರುವ ಸೇನಾ ನೇಮ ಕಾತಿ ಕಚೇರಿಯು, ಯುವಕರನ್ನು ಆಕರ್ಷಿಸಲು ಜಿಲ್ಲಾಡಳಿತದ ಜೊತೆ ಸೇರಿ ಮಾಹಿತಿ ಪ್ರಚಾರಕ್ಕೆ ಮುಂದಾಗಿದೆ.
 
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ ಅವರೊಂದಿಗೆ ಸೋಮವಾರ ಜಂಟಿ ಪತ್ರಿ ಕಾಗೋಷ್ಠಿ ನಡೆಸಿದ ಕಚೇರಿಯ ನಿರ್ದೇ ಶಕ ಕರ್ನಲ್‌ ಪ್ರಶಾಂತ್‌ ಪೇಟ್ಕರ್‌, 2015ರಲ್ಲಿ ನಡೆದ ಸೇನಾ ನೇಮಕಾತಿ ರ್‍ಯಾಲಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 134 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. 2016 ರಲ್ಲಿ ಈ ಸಂಖ್ಯೆ 34ಕ್ಕೆ ಕುಸಿದಿದೆ. ಜಿಲ್ಲೆಯ ಹೆಚ್ಚಿನ ಯುವಕರನ್ನು ಸೇನಾ ನೇಮಕಾತಿ ಯತ್ತ ಸೆಳೆಯುವ ಉದ್ದೇಶದಿಂದ ಜಿಲ್ಲಾ ಡಳಿತದ ನೆರವಿನಲ್ಲಿ ಕಾಲೇಜುಗಳಲ್ಲಿ ಮಾಹಿತಿ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾ ಗಿದೆ’ ಎಂದರು.
 
ಇತ್ತೀಚಿನ ದಿನಗಳಲ್ಲಿ ಸೇನಾ ನೇಮ ಕಾತಿಗೆ ರಾಜ್ಯದಲ್ಲಿ ನಡೆಯುತ್ತಿರುವ ರ್‍ಯಾಲಿಗಳಲ್ಲಿ ಭಾಗವಹಿಸುವವರಲ್ಲಿ ವಿಜ ಯಪುರ, ಬಾಗಲಕೋಟೆ, ಗದಗ ಮತ್ತು ಧಾರವಾಡ ಜಿಲ್ಲೆಯವರ ಸಂಖ್ಯೆ ಶೇಕಡ 80ರಷ್ಟಿರುತ್ತದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಹೆಚ್ಚಿನ ಯುವ ಕರು ಸೈನಿಕರಾಗಲು ಆಸಕ್ತಿ ತೋರುತ್ತಿ ದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಇತರೆ ಭಾಗ, ದಕ್ಷಿಣ ಕನ್ನಡ, ಉಡುಪಿ, ಶಿವ ಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಯುವಕರು ಆಸಕ್ತಿ ತೋರುತ್ತಿಲ್ಲ ಎಂದು ಹೇಳಿದರು.
 
ಸೈನಿಕರಿಗೆ ನೀಡುವ ವೇತನ ಮತ್ತು ಇತರೆ ಸೌಲಭ್ಯಗಳ ಕುರಿತು ಯುವಕರಿಗೆ ಮಾಹಿತಿ ಕೊರತೆ ಇದ್ದಂತಿದೆ. ಸೈನಿಕರಿಗೆ ತಿಂಗಳಿಗೆ ₹ 25,000 ವೇತನದ ಜೊತೆ ಬಟ್ಟೆ, ಪಡಿತರ, ವಸತಿ, ವೈದ್ಯಕೀಯ ಸೌಲಭ್ಯ, ಉಚಿತ ರೈಲ್ವೆ ಪ್ರಯಾಣದ ಸೌಲ ಭ್ಯಗಳನ್ನು ನೀಡಲಾಗುತ್ತಿದೆ. ಸೈನಿಕರು ಮತ್ತು ಅವರ ಕುಟುಂಬಗಳಿಗೆ ಪಿಂಚಣಿ ನೀಡಲಾಗುತ್ತದೆ. ಈ ಎಲ್ಲ ಮಾಹಿತಿ ಯನ್ನು ಯುವಕರಿಗೆ ಒದಗಿಸುವ ಮೂಲಕ ಅವರನ್ನು ನೇಮಕಾತಿ ರ್‍ಯಾಲಿ ಗಳತ್ತ ಆಕರ್ಷಿಸಲು ತಮ್ಮ ಕಚೇರಿ ಮುಂ ದಾಗಿದೆ ಎಂದರು.
 
ಐದು ಹುದ್ದೆಗಳಿಗೆ ನೇಮಕಾತಿ: ‘ಜನರಲ್‌ ಡ್ಯೂಟಿ ಸೋಲ್ಜರ್‌ (ಎಸ್‌ಎಸ್‌ ಎಲ್‌ಸಿ), ಸೋಲ್ಜರ್‌– ಟೆಕ್ನಿಕಲ್‌ (10+ 2/ ಪಿಯುಸಿ), ಸೋಲ್ಜರ್‌– ನರ್ಸಿಂಗ್‌ ಅಸಿಸ್ಟೆಂಟ್‌ (10+2/ ಪಿಯುಸಿ), ಸೋಲ್ಜರ್‌– ಕ್ಲರ್ಕ್‌/ ಸ್ಟೋರ್‌ ಕೀಪರ್‌ ಟೆಕ್ನಿಕಲ್‌ (10+2/ ಪಿಯುಸಿ) ಮತ್ತು ಸೋಲ್ಜರ್‌– ಟ್ರೇಡ್ಸ್‌್ಮನ್‌ (ಎಸ್‌ಎಸ್‌ ಎಲ್‌ಸಿ) ಹುದ್ದೆಗಳ ನೇಮಕಾತಿಗಾಗಿ ಈ ರ್‍ಯಾಲಿ ನಡೆಯಲಿದೆ. ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವ ಣಗೆರೆ, ಗದಗ, ಹಾವೇರಿ, ಚಿಕ್ಕಮಗ ಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅವಿ ವಾಹಿತ ಅಭ್ಯರ್ಥಿಗಳು ಈ ನೇಮಕಾತಿ ರ್‍ಯಾಲಿಯಲ್ಲಿ ಭಾಗವಹಿಸಬಹುದು’ ಎಂದು ಪೇಟ್ಕರ್‌ ತಿಳಿಸಿದರು.
 
ದೈಹಿಕ ಸಾಮರ್ಥ್ಯ ಮತ್ತು ವೈದ್ಯ ಕೀಯ ಪರೀಕ್ಷೆಗಳು ವಿಜಯಪುರದಲ್ಲಿ ನಡೆಯುತ್ತವೆ. ಲಿಖಿತ ಪರೀಕ್ಷೆಯನ್ನು ಮಂಗಳೂರಿನ ಕೂಳೂರಿನಲ್ಲಿರುವ ಸೇನಾ ನೇಮಕಾತಿ ಕಚೇರಿಯಲ್ಲಿ ನಡೆಸ ಲಾಗುವುದು. ಆಸಕ್ತ ಅಭ್ಯರ್ಥಿಗಳು ಮಾರ್ಚ್‌ 12ರಿಂದ ಏಪ್ರಿಲ್‌ 25ರ ನಡು ವಿನ ಅವಧಿಯಲ್ಲಿ www.joinindian army.nic.in ವೆಬ್‌ಸೈಟ್‌ನಲ್ಲಿ ತಮ್ಮ ಹೆಸರನ್ನು ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT