ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿಗಿಂತ ಮೊದಲೇ ಸೇವಾ ಪರಿಕಲ್ಪನೆ

Last Updated 10 ಮಾರ್ಚ್ 2017, 8:52 IST
ಅಕ್ಷರ ಗಾತ್ರ

ಕೊರಟಗೆರೆ: ಗಾಂಧೀಜಿ ಗಿಂತ ಮೊದಲೇ ಶ್ರಮದಾನದಂತಹ ಸೇವಾ ಪರಿಕಲ್ಪನೆ ನಮ್ಮ ಹಳ್ಳಿಯ ಜನರಿಗಿತ್ತು ಎಂದು ಮಾಜಿ ಸಚಿವ ಸಿ. ವೀರಣ್ಣ ತಿಳಿಸಿದರು.

ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ಪಟ್ಟಣದ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿರುವ ಎನ್‌ಎಸ್‌ಎಸ್‌ ವಾರ್ಷಿಕ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಶಾಸಕ ಪಿ.ಆರ್. ಸುಧಾಕರ್ ಲಾಲ್ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಂಯಮ ಮತ್ತು ಸೇವಾ ಮನೋಭಾವವನ್ನು ಉನ್ನತ ಶಿಕ್ಷಣದ ಮೂಲಕ ಪಡೆದು ಉನ್ನತ ಮಟ್ಟದ ಉದ್ಯೋಗ ಗಳಿಸಿ, ಮರಳಿ ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕ ಹಿಂತಿರುಗಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಕ್ಕಮಹಾದೇವಿ, ಪ್ರೇಮಾ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಮಾರಾಜು, ಗ್ರಾಮಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ, ಉಪಾಧ್ಯಕ್ಷೆ ಪವಿತ್ರಾ, ಪ್ರಾಂಶುಪಾಲ ಹನುಮಂತರೆಡ್ಡಿ, ಎನ್‌ಎಸ್‌ಎಸ್‌ ಅಧಿಕಾರಿಗಳಾದ ಡಾ. ಓ.ನಾಗರಾಜು, ತಿರುಮಲೇಶ್‌ಬಾಬು, ಶಾಂತಕುಮಾರಿ, ಪ್ರಾಧ್ಯಾಪಕರಾದ ಎಂ.ಬಿ.ನಾಗರಾಜು, ಡಾ. ಶೀವನಂಜಯ್ಯ, ಅನ್ವರ್‌ಬಾಷಾ, ಡಾ. ರಾಜಾರೆಡ್ಡಿ, ಶಿವರಾಜು, ಅನುಪಮ, ಅನಸೂಯ, ಹರಿದಾಸ್‌, ಡಾ. ತಿಪ್ಪೇಸ್ವಾಮಿ, ಮುಖಂಡರಾದ ಅಶ್ವತ್ಥನಾರಾಯಣರಾಜು, ಚಂದ್ರಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT