ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚರಾಜ್ಯ ಚುನಾವಣೆ: ಗೋವಾದಲ್ಲಿ ಅತಿ ಹೆಚ್ಚು ‘ನೋಟಾ’ ಆಯ್ಕೆ

Last Updated 11 ಮಾರ್ಚ್ 2017, 12:15 IST
ಅಕ್ಷರ ಗಾತ್ರ

ಗೋವಾ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೋವಾ ಮತದಾರರು ಅತಿ ಹೆಚ್ಚು 'ನೋಟಾ' (ಎನ್ಒಟಿಎ – ಮೇಲಿನವರಲ್ಲಿ ಯಾರೂ ಇಲ್ಲ) ಆಯ್ಕೆ ಮಾಡಿದ್ದಾರೆ.

ಭಾರತೀಯ ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಗೋವಾದಲ್ಲಿ ಶೇ.1.2ರಷ್ಟು ಮತದಾರರು ನೋಟಾ ಆಯ್ಕೆ ಮಾಡಿದ್ದಾರೆ.

ಇನ್ನೂ ಉತ್ತರಾಖಂಡದಲ್ಲಿ ಶೇ.1 ರಷ್ಟು ಮತದಾರರು ನೋಟಾ ಒತ್ತಿದ್ದಾರೆ.

ಬಿಜೆಪಿ ಹೆಚ್ಚು ಸ್ಥಾನ ಪಡೆದಿರುವ ಉತ್ತರ ಪ್ರದೇಶದಲ್ಲಿ ಶೇ.0.9, ಪಂಜಾಬ್‌ನಲ್ಲಿ ಶೇ.0.7, ಮಣಿಪುರದಲ್ಲಿ ಶೇ.0.5 ನೋಟಾ ದಾಖಲಾಗಿದೆ.

ಉತ್ತರ ಪ್ರದೇಶದ 403 ಸ್ಥಾನಗಳಲ್ಲಿ 4,800 ಅಭ್ಯರ್ಥಿಗಳು, ಪಂಜಾಬ್‌ನ 117 ಸ್ಥಾನಗಳಿಗೆ 1,100 ಅಭ್ಯರ್ಥಿಗಳು, ಉತ್ತರಾಖಂಡದ 70 ಸ್ಥಾನಗಳಿಗೆ 600ಕ್ಕೂ ಹೆಚ್ಚು ಹಾಗೂ ಗೋವಾದ 40 ಸ್ಥಾನಗಳಲ್ಲಿ 250 ಅಬ್ಯರ್ಥಿಗಳು, ಮಣಿಪುರದ 70 ಸ್ಥಾನಗಳಿಗೆ 100 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT