ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಪಣ್ಣ ಜೋಡಿಗೆ ನಿರಾಸೆ

Last Updated 11 ಮಾರ್ಚ್ 2017, 19:44 IST
ಅಕ್ಷರ ಗಾತ್ರ

ಇಂಡಿಯಾನ ವೆಲ್ಸ್‌ : ಪುರುಷರ ಡಬಲ್ಸ್‌ ವಿಭಾಗದಲ್ಲಿ ಭರವಸೆ ಎನಿಸಿದ್ದ ಭಾರತದ ರೋಹನ್‌ ಬೋಪಣ್ಣ ಮತ್ತು ಉರುಗ್ವೆಯ ಪ್ಯಾಬ್ಲೊ ಕ್ಯುವಾಸ್‌ ಅವರು ಎಟಿಪಿ ಇಂಡಿಯಾನ ವೆಲ್ಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಆರಂಭಿಕ ಸುತ್ತಿನಲ್ಲೇ ನಿರಾಸೆ ಕಂಡರು.

ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಮತ್ತು ವಿಕ್ಟರ್‌ ಟ್ರೊಯಿಕಿ ಅವರು 2–6, 6–3, 10–7 ರಲ್ಲಿ ಭಾರತ ಮತ್ತು ಉರುಗ್ವೆಯ ಜೋಡಿಗೆ ಸೋಲುಣಿಸಿದರು. 1 ಗಂಟೆ 6 ನಿಮಿಷ ನಡೆದ ಪಂದ್ಯದಲ್ಲಿ ಮೊದಲ ಸೆಟ್‌ನಲ್ಲಿ ಭಾರತ ಮತ್ತು ಉರುಗ್ವೆಯ ಜೋಡಿ ಮಿಂಚಿತು. ಎರಡನೇ ಸೆಟ್‌ನಲ್ಲಿ ಸರ್ಬಿಯಾದ ಆಟಗಾರರು ತಿರುಗೇಟು ನೀಡಿದರು. 

‘ಟೈ ಬ್ರೇಕರ್‌’ ಹಣಾಹಣಿಯ ಶುರುವಿನಿಲ್ಲೂ ಎರಡೂ ಜೋಡಿ ಗೇಮ್‌ ಗೆಲ್ಲಲು ಜಿದ್ದಿಗೆ ಬಿದ್ದಂತೆ ಸೆಣಸಿದವು. ಹೀಗಾಗಿ 7–7ರಲ್ಲಿ ಸಮಬಲ ಕಂಡು ಬಂದಿತ್ತು. ಆ ಬಳಿಕ ಪುಟಿದೆದ್ದ ನೊವಾಕ್‌ ಮತ್ತು ವಿಕ್ಟರ್‌ ಸತತ ಮೂರು ಪಾಯಿಂಟ್ಸ್‌ ಹೆಕ್ಕಿ ಗೆಲುವು ಒಲಿಸಿಕೊಂಡರು.

ಎಡ್ಮಂಡ್‌ಗೆ ಗೆಲುವು: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಬ್ರಿಟನ್‌ನ ಕೈಲ್‌ ಎಡ್ಮಂಡ್‌ ಜಯ ಪಡೆದರು. ಆರಂಭಿಕ ಸುತ್ತಿನ ಪಂದ್ಯದಲ್ಲಿ ಎಡ್ಮಂಡ್‌ 6–1, 6–3ರಲ್ಲಿ ಪೋರ್ಚುಗಲ್‌ನ ಗ್ಯಾಸ್ಟಾವೊ ಎಲಿಯಾಸ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT