ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮಕ್ಕಳಂತೆ ವರ್ತನೆ: ಬೊಳುವಾರು

Last Updated 13 ಮಾರ್ಚ್ 2017, 6:15 IST
ಅಕ್ಷರ ಗಾತ್ರ

ಬಂಟ್ವಾಳ: ನರೇಂದ್ರ ಮೋದಿ ಅವರಿಗೆ ಹುಟ್ಟದೇ ಇದ್ದರೂ, ನಾವೆಲ್ಲ ಮೋದಿ ಅವರ ಮಕ್ಕಳಂತೆ ವರ್ತನೆ ಮಾಡುತ್ತಿದ್ದೇವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಬಂಡಾಯ ಸಾಹಿತಿ ಬೊಳುವಾರು ಮೊಹಮ್ಮದ್ ಕುಂಞ ಹೇಳಿದರು.

ಬಂಟ್ವಾಳ ತಾಲ್ಲೂಕಿನ ಸಾಹಿತ್ಯಕ ಸಾಂಸ್ಕೃತಿಕ ವೇದಿಕೆ ‘ಅಭಿರುಚಿ ಜೋಡುಮಾರ್ಗ’ದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಬೊಳು ವಾರು ಸಾಹಿತ್ಯ- ಮುಖಾಮುಖಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ತಮ್ಮ ಸಾಹಿತ್ಯ ಜೀವನದ ಅನುಭವ ಹಂಚಿಕೊಂಡರು.

‘1980ರಲ್ಲಿ ನಾನು ಕತೆ ಬರೆಯುವುದಕ್ಕೆ ಆರಂಭ ಮಾಡಿದೆ.  ಆಗ ಗದ್ಯ ಸಾಹಿತ್ಯದಲ್ಲಿ ಮುಸ್ಲಿಮರು ಪರಿಚಯಿಸಿಕೊಂಡಿರಲಿಲ್ಲ. ಮುಸ್ಲಿಮರು ಎಂದರೆ ಗುಮ್ಮ ಇದ್ದಂತೆ. ಅವರ ಮನೆ ಯಲ್ಲಿ ಖಡ್ಗ ಇದೆ, ಎಂದು ಭಾವಿಸಿದ್ದರು. ಅವರೂ ಕೂಡ ಎಲ್ಲರ ಹಾಗೆಯೇ ಎಂದು ಜಗತ್ತಿಗೆ ತಿಳಿಸುವ ಉದ್ದೇಶ ದಿಂದ ಕತೆ ಬರೆಯುವುದಕ್ಕೆ ಆರಂಭ ಮಾಡಿದೆ ಎಂದು ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಯಾರೂ ಕೂಡಾ ಅರ್ಜಿ ಹಾಕಿ ಹುಟ್ಟುವುದಿಲ್ಲ. ಅರ್ಜಿ ಹಾಕಿ ಹುಟ್ಟುತ್ತಿದ್ದರೆ, ನಾವೆಲ್ಲ ಮೋದಿ ಅವರ ಮಕ್ಕಳಾಗುತ್ತಿದ್ದೇವು. ಮೋದಿ ಅವರಿಗೆ ಮಕ್ಕಳು ಹುಟ್ಟದೇ ಇದ್ದರೂ, ನಾವೆಲ್ಲ ಮೋದಿ ಅವರಂತೆ  ವರ್ತನೆ ಮಾಡುತ್ತಿದ್ದೇವೆ ಎಂದು  ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಬೊಳುವಾರ್ ಚರ್ಚೆಗೆ ಬ್ರೇಕ್: ಸಂವಾ ದದ ನಡುವೆ ಸಭಿಕರೊಬ್ಬರು ಏಕರೂ ಪದ ನಾಗರಿಕ ಸಂಹಿತೆ ಯಾಕೆ ಜಾರಿ ಗೊಳ್ಳುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ಹೊರಟ ಬೊಳುವಾರ ರನ್ನು ತಡೆದ ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರು, ‘ನೀವು ನಿಮ್ಮ ಕತೆ, ಕಾದಂಬರಿ ಬಗ್ಗೆ ಮಾತ್ರ ಚರ್ಚಿಸಿ. ನಿಮ್ಮ ಸಾಹಿತ್ಯ ವನ್ನು ನಾವೆಲ್ಲ ಅತ್ಯಂತ ಗೌರವದಿಂದ ಕಾಣುತ್ತೇವೆ. ಅದರ ಹೊರತು, ಬೇರಾವ ವಿಚಾರಗಳು ಇಲ್ಲಿ ಚರ್ಚೆ ಮಾಡಬೇಡಿ ಎಂದು ಸಲಹೆ ನೀಡಿದರು. ಏರ್ಯರ ಸೂಚನೆ ಪಾಲಿಸಿದ ಬೊಳುವಾರು, ಸಾಹಿ ತ್ಯ ಮೀಮಾಂಸೆ ಮಾತ್ರ ಚರ್ಚಿಸಿ ಸಂವಾ ದಕ್ಕೆ ಪೂರ್ಣ ವಿರಾಮ ನೀಡಿದರು.

ಸೌಮ್ಯವಾದ ಬೊಳುವಾರ್!: ಇತ್ತೀಚಿನ ದಿನಗಳಲ್ಲಿ ಬೊಳುವಾರು ಮೊಹಮ್ಮದ್ ಕುಂಞ ಅವರ ಕೃತಿಗಳನ್ನು ಗಮನಿಸಿ ದರೆ, ಅವರ ಹಿಂದಿನ ಬಂಡಾಯದ ಧ್ವನಿ ಸೌಮ್ಯವಾಗುತ್ತಾ ಹೋಗುತ್ತಿದೆ ಎನ್ನುವ ಸಂದೇಹ ಎದುರಾಗುತ್ತದೆ ಎನ್ನುವ ಚಿಂತಕ ಡಾ.ಕೆ. ಮಹಾಲಿಂಗ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಳುವಾರ್, 1960ರ ಹೊತ್ತಿಗೆ ಮುಸ್ಲಿಂ ಹೆಣ್ಮಕ್ಕಳು ಶಾಲೆಗೆ ಮುಖ ಹಾಕಿ ನೋಡುತ್ತಿರಲಿಲ್ಲ. ಆಗ ನನ್ನ ಅಕ್ಕ ಇಡೀ ಪುತ್ತೂರಿನಿಂದ ಶಾಲೆಗೆ ಹೋಗುತ್ತಿದ್ದ ಏಕೈಕ ಹೆಣ್ಮಗಳು. ಈಗ ನನ್ನ ಸಮುದಾ ಯದ ಹೆಣ್ಮಕ್ಕಳು ಹೆಗಲಿಗೆ ಟ್ಯಾಪ್ ನೇತಾಡಿಸಿಕೊಂಡು ವಿಮಾನ ದಲ್ಲಿ ಹಾರುತ್ತಿರುವುದನ್ನು ಗಮನಿಸಿದಾಗ, 25 ವರ್ಷ ಹಿಂದೆ ಬರೆದ ನನ್ನ ‘ಜಿಹಾದ್’ ಈಗ ಯಶಸ್ವಿ ಆಗಿದೆ  ಎನ್ನುವ ವಿಶ್ವಾಸ ಮೂಡುತ್ತದೆ ಎಂದು ಉತ್ತರಿಸಿದರು.

ಬೊಳುವಾರ್ ಕಾದಂಬರಿಗಳ ಕುರಿತು ಬೆಟ್ಟಂಪಾಡಿ ಸರ್ಕಾರಿ  ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ  ಡಾ. ವರದರಾಜ ಚಂದ್ರಗಿರಿ, ಬೊಳುವಾರರ ಕಥೆಗಳ ಕುರಿತು ಮಂಗಳೂರು ಸಂತ ಅಲೋಶಿಯಸ್ ಸಂಧ್ಯಾ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ. ಮಹಾಲಿಂಗ ವಿಚಾರ ಮಂಡಿಸಿದರು.

ಸಾಹಿತಿ ರಾಧೇಶ ತೋಳ್ಪಾಡಿ ಸ್ವಾಗತಿಸಿ, ಹಿರಿಯ ಕಲಾವಿದ ಮಹಾಬ ಲೇಶ್ವರ ಹೆಬ್ಬಾರ್ ವಂದಿಸಿದರು. ಉಪನ್ಯಾಸಕ ಚೇತನ್ ಮುಂಡಾಜೆ ಅವರು ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಬಹುಭಾಷಾ ಕವಿ ಮೊಹಮ್ಮದ್ ಬಡ್ಡೂರು, ವಿಮರ್ಶಕ ಅಬ್ದುಲ್ ರಹಿಮಾನ್ ಅಡ್ಯನಡ್ಕ, ಡಾ. ವೀಣಾ ತೋಳ್ಪಾಡಿ, ಸಾಮಾಜಿಕ ಮುಂದಾಳು ಪಿ.ಎ. ರಹೀಂ, ಯುವ ಬರಹಗಾರ ಜಬ್ಬಾರ್ ಪೊನ್ನೋಡಿ ಚರ್ಚೆಯಲ್ಲಿ ಪಾಲ್ಗೊಂಡರು.

ಕಲ್ಲು ಬಿಸಾಕಿದವರು ಪ್ರಶಂಸಿದರು!
25ವರ್ಷಗಳ ಹೆಣ್ಮಕ್ಕಳ ಸ್ವಾತಂತ್ರ್ಯದ ಕುರಿತಾಗಿ ಬರೆದ ಜಿಹಾದ್ ಬಗ್ಗೆ ಅಲ್ಲೋಲ-ಕಲ್ಲೋಲ ಉಂಟಾಗಿ ನಾನು ಜೈಲು ವಾಸ ಅನುಭವಿಸಿದೆ. ಆ ದಿನದಲ್ಲಿ ನನ್ನ ಮೇಲೆ ಹಲ್ಲೆಯೂ ನಡೆದಿತ್ತು. ನನ್ನ ಮೇಲೆ ಕಲ್ಲು ಬಿಸಾಕಿದ್ದ ಒಬ್ಬ ವ್ಯಕ್ತಿ, ಬೆಂಗಳೂರಿನಲ್ಲಿ ನಡೆದ ನನ್ನ ಸ್ವಾತಂತ್ರ್ಯದ ಓಟ-ಕೃತಿಯ ಕುರಿತಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮುಸ್ಲಿಂ ಹೆಣ್ಮಕ್ಕಳು ಇಂದು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಸಲು ಬೊಳುವಾರರ ಜಿಹಾದ್ ಕಾರಣ ಎಂದಾಗ, ಮನದಲ್ಲಿ ತೃಪ್ತಿ ಭಾವ ಮೂಡಿತು ಎಂದು ಬೊಳುವಾರು ಮೊಹಮ್ಮದ್ ಕುಂಞ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT