ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

70 ಮಾನವಸಹಿತ ಲೆವಲ್ ಕ್ರಾಸಿಂಗ್‌

Last Updated 16 ಮಾರ್ಚ್ 2017, 4:50 IST
ಅಕ್ಷರ ಗಾತ್ರ

ಮೈಸೂರು: ಲೆವಲ್‌ ಕ್ರಾಸಿಂಗ್‌ಗಳಲ್ಲಿ ಸಂಭವಿಸುವ ಅಪಘಾತಗಳನ್ನು ತಡೆ ಯಲು ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಮುಂದಾಗಿದ್ದು, ಈ ವರ್ಷ 70 ಮಾನವಸಹಿತ ಲೆವಲ್‌ ಕ್ರಾಸಿಂಗ್‌ ನಿರ್ಮಿಸುವ ಯೋಜನೆಗೆ ಚಾಲನೆ ನೀಡಿದೆ.

ಈಗಾಗಲೇ 35 ಲೆವಲ್‌ ಕ್ರಾಸಿಂಗ್‌ ಕಾಮಗಾರಿಗಳು ಶುರುವಾಗಿವೆ. ಮೈಸೂರು– ಅರಸೀಕೆರೆ, ಮೈಸೂರು– ಚಾಮರಾಜನಗರ, ಬೀರೂರು–ತಾಳಗುಪ್ಪ, ಚಿಕ್ಕಜಾಜೂರು– ರಾಯದುರ್ಗ... ಈ ನಾಲ್ಕು ಕಡೆ ಕಾಮಗಾರಿಗಳು ಪ್ರಗತಿ ಯಲ್ಲಿವೆ. ಗೇಟು ಅಳವಡಿಸುವುದರಿಂದ ಹಿಡಿದು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾ ಗುತ್ತಿದೆ. ಇದರಲ್ಲಿ ಈಗಾಗಲೇ 5 ಕಡೆ ಗೇಟುಗಳನ್ನು ಅಳವಡಿಸಲಾಗಿದ್ದು, ಕಾರ್ಯಾರಂಭಗೊಂಡಿವೆ. ಜತೆಗೆ, 30 ಕಡೆ ಗೇಟುಗಳನ್ನು ಅಳವ ಡಿಸುವುದರ ಜತೆಗೆ, ಕೆಳಸೇತುವೆಗಳನ್ನು ನಿರ್ಮಿಲಾಗುತ್ತಿದೆ. ಉಳಿದ 35 ಕಾಮಗಾರಿಗಳು ಏಪ್ರಿಲ್‌ನಿಂದ ಆರಂಭವಾಗುತ್ತವೆ.

ಇದರಲ್ಲಿ ನಗರದಲ್ಲಿರುವ ಮೈಸೂರು– ಬೆಳಗೊಳ ಮಧ್ಯದ ಲೆವಲ್‌ ಕ್ರಾಸಿಂಗ್‌ ಸಂಖ್ಯೆ 5 ಹಾಗೂ ಅಶೋಕಪುರಂ ಲೆವಲ್‌ ಕ್ರಾಸಿಂಗ್‌ ಸಂಖ್ಯೆ 1ಅನ್ನು ಪರಿವರ್ತಿಸುವ ಕಾರ್ಯ ಈ ವರ್ಷ ನಡೆಯಲಿದೆ. ಮೈಸೂರು– ಬೆಳಗೊಳ ಮಧ್ಯದಲ್ಲಿರುವ ಲೆವಲ್‌ ಕ್ರಾಸಿಂಗ್‌ನಲ್ಲಿ ನಿತ್ಯ 30 ಸಾವಿರ ವಾಹನ ಸಂಚರಿ ಸುತ್ತಿವೆ. ಕಲಾಮಂದಿರದ ಬಳಿಯ ಕ್ರಾಸಿಂಗ್‌ನಲ್ಲಿ ನಿತ್ಯ ಸುಮಾರು 4 ಸಾವಿರ ವಾಹನಗಳು ಸಂಚರಿಸುತ್ತಿವೆ. ಇದಕ್ಕಾಗಿ ವಾಹನಗಳ ಸಂಚಾರಕ್ಕೆ ಕೆಳಸೇತುವೆ ನಿರ್ಮಿಸಲಾಗುವುದು. ಈ ಎರಡೂ ಕಾಮಗಾರಿಗಳು ₹100 ಕೋಟಿ ವೆಚ್ಚ ದಲ್ಲಿ ನಡೆಯಲಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ರೈಲು ಹಳಿಗಳಿಗೆ ಸಮಾನಾಂತರ ವಾಗಿರಸ್ತೆ ಇರುವ ಲೆವಲ್ ಕ್ರಾಸಿಂಗ್, ಅದರಲ್ಲೂ ಮಾನವರಹಿತ ಕ್ರಾಸಿಂಗ್‌ ಗಳಲ್ಲಿ ಅಪಘಾತಗಳೇ ಹೆಚ್ಚು. ಸಾವುಂಟಾದರೆ ಇಲ್ಲವೆ, ಶಾಶ್ವತವಾಗಿ ಅಂಗವಿಕಲರಾದರೆ ಪ್ರತಿಯೊಬ್ಬರಿಗೆ ₹ 4 ಲಕ್ಷ ಪರಿಹಾರವನ್ನು ರೈಲ್ವೆ ಇಲಾಖೆ ನೀಡಬೇಕು. ಇದಕ್ಕಾಗಿ ಮಾನವಸಹಿತ ಲೆವಲ್‌ ಕ್ರಾಸಿಂಗ್‌ಗಳನ್ನು 2018–19ರೊಳಗೆ ನಿರ್ಮಿಸಬೇಕೆಂದು ರೈಲ್ವೆ ಇಲಾಖೆ ಆದೇಶಿಸಿದೆ.

ಈ ನಿಟ್ಟಿನಲ್ಲಿ ಮೇಲುಸೇತುವೆ, ಕೆಳಸೇತುವೆ ಅಲ್ಲದೆ, ಸುರಂಗ ಮಾರ್ಗ (ಸಬ್‌ ವೇ), ರೈಲು ಹಳಿಗಳ ಹತ್ತಿರ ರಸ್ತೆ... ಹೀಗೆ ಪರ್ಯಾಯವಾಗಿ ಮಾರ್ಗಗಳ ಮೂಲಕ ಮಾನವರಹಿತ ಲೆವಲ್‌ ಕ್ರಾಸಿಂಗ್‌ಗಳಿಗೆ ಅಂತ್ಯ ಹಾಡಲು ರೈಲ್ವೆ ಇಲಾಖೆ ಸಜ್ಜಾಗಿದೆ.

**

ಕೆಳಸೇತುವೆ ಅಗತ್ಯ
‘ಕಲಾಮಂದಿರದ ಬಳಿಯ ಮಾನವಸಹಿತ ರೈಲ್ವೆ ಕ್ರಾಸಿಂಗ್‌ ಬದಲು ಕೆಳಸೇತುವೆಯಾದರೆ ಸಾರ್ವಜನಿಕರಿಗೆ ಅನುಕೂಲ ವಾಗಲಿದೆ’ ಎನ್ನುತ್ತಾರೆ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್‌.ತುಕಾರಾಮ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT