ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗನಿಗೆ ವೋಲ್ವೊ ಪ್ರಶಸ್ತಿ

Last Updated 18 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಮಾಣ ಯಂತ್ರೋಪಕರಣ ತಯಾರಿಕಾ ಕಂಪೆನಿ ವೋಲ್ವೊ ಸಿ.ಇ ಇಂಡಿಯಾ, ಭಾರಿ ಯಂತ್ರೋಪಕರಣ ನಿರ್ವಾಹಕರಿಗೆ ಆಯೋಜಿಸಿದ್ದ  ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಕನ್ನಡಿಗ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಕಂಪೆನಿಯ ಪ್ರಧಾನ ಕಚೇರಿಯಲ್ಲಿ ಮೂರು ದಿನಗಳಿಂದ ಈ ಸ್ಪರ್ಧೆ ನಡೆಯುತ್ತಿದ್ದು, ಗುರುವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ರಾಜ್ಯದ ಭೀಮಪ್ಪ ಕೆ.ಎಸ್‌. ಅವರು ವಿಜೇತರಾಗಿ ಹೊರಹೊಮ್ಮಿದರು. ರಾಜಸ್ತಾನದ ನರೇಂದ್ರ ಸಿಂಗ್ ಮೊದಲ ರನ್ನರ್‌ ಅಪ್‌ ಆದರು.

ಭೀಮಪ್ಪ ಅವರು ‘ವೋಲ್ವೊ ಆಪರೇಟರ್ ಚಾಂಪಿಯನ್ ಟ್ರೋಫಿ’ ಮತ್ತು ₹5 ಲಕ್ಷ ಮತ್ತು ಸಿಂಗ್  ₹2 ಲಕ್ಷ  ಬಾಚಿಕೊಂಡರು. ಪ್ರಾದೇಶಿಕ ಹಂತಗಳ ವಿಜೇತರಾಗಿದ್ದ  ಒಂಬತ್ತು ನಿರ್ವಾಹಕರು ಅಂತಿಮ ಸುತ್ತಿಗೆ ಅರ್ಹತೆ ಪಡೆದಿದ್ದರು.

ಭಾರಿ ಯಂತ್ರೋಪಕರಣಗಳ ಉತ್ತಮ ಚಾಲನೆ ಮತ್ತು ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ಭಾಗವಾಗಿ ಕಂಪೆನಿ ಈ ಸ್ಪರ್ಧೆಯನ್ನು ವಿಶ್ವದಾದ್ಯಂತ ನಡೆಸುತ್ತದೆ.

‘ಕಟ್ಟಡ ನಿರ್ಮಾಣ ಉದ್ಯಮದಲ್ಲಿ ಕೌಶಲ ಅಭಿವೃದ್ಧಿಯ ಮಹತ್ವದ ಬಗ್ಗೆ ಗಮನ ಸೆಳೆಯಲು ಮತ್ತು ಯಂತ್ರೋಪಕರಣ ನಿರ್ವಾಹಕರ   ಪಾತ್ರದ ಮಹತ್ವದ ಕುರಿತು ಮನವರಿಕೆ ಮಾಡಿಕೊಡಲು ಈ ಸ್ಪರ್ಧೆ ಯಶಸ್ವಿಯಾಗಿದೆ’ ಎಂದು  ವೋಲ್ವೊ ಜಿ.ಇ ಇಂಡಿಯಾ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಡಿಮಿಟ್ರೋವ್‌ ಕೃಷ್ಣನ್ ಹೇಳಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ‘ಈ ಸ್ಪರ್ಧೆಗೆ ಉದ್ಯಮದಿಂದ ನಿರೀಕ್ಷೆ ಮೀರಿ ಪ್ರತಿಕ್ರಿಯೆ ದೊರೆತಿದೆ’ ಎಂದರು.   ಎನ್‌ಎಸ್‌ಡಿಸಿ ಸಿಎಸ್‌ಆರ್‌ ವಿಭಾಗದ ಮುಖ್ಯಸ್ಥ  ಗೌರವ್ ಕಪೂರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT