, ಹಿಜಾಬ್ ಧರಿಸಿ ಬಾಸ್ಕೆಟ್‍‍ಬಾಲ್ ಆಡಬಾರದೆಂದು ಬಾಲಕಿಗೆ ತಾಕೀತು | ಪ್ರಜಾವಾಣಿ
ಪಂದ್ಯದಿಂದ ಕೈ ಬಿಟ್ಟ ಅಧಿಕಾರಿಗಳು

ಹಿಜಾಬ್ ಧರಿಸಿ ಬಾಸ್ಕೆಟ್‍‍ಬಾಲ್ ಆಡಬಾರದೆಂದು ಬಾಲಕಿಗೆ ತಾಕೀತು

ಬಾಸ್ಕೆಟ್‍ಬಾಲ್ ಕ್ರೀಡಾಕೂಟದ 24 ಪಂದ್ಯಗಳಲ್ಲಿ ಈ ಬಾಲಕಿ ಹಿಜಾಬ್ ಧರಿಸಿಯೇ ಆಟವಾಡಿದ್ದಳು. ಆದರೆ ಫೈನಲ್ ಪಂದ್ಯದಲ್ಲಿ ಈಕೆಯನ್ನು ಕೈ ಬಿಡಲಾಗಿದೆ.

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಹಿಜಾಬ್ ಧರಿಸಿ ಬಾಸ್ಕೆಟ್‍ಬಾಲ್ ಆಡಬಾರದೆಂದು 16ರ ಹರೆಯದ ಬಾಲಕಿಗೆ ತಾಕೀತು ನೀಡಿ, ಪಂದ್ಯದಿಂದ ಕೈಬಿಡಲಾಗಿದೆ.

ಅಮೆರಿಕದ ಮೇರಿಲ್ಯಾಂಡ್‍ನಲ್ಲಿರುವ ವಾಟ್ಕಿನ್ಸ್ ಮಿಲ್  ಹೈಸ್ಕೂಲ್ ವಿದ್ಯಾರ್ಥಿನಿ, ಬಾಸ್ಕೆಟ್ ಬಾಲ್ ಆಟಗಾರ್ತಿ 16ರ ಹರೆಯದ  ಜೆ ನಾನ್ ಹಯೇಸ್ ಅವರಿಗೆ ಶಾಲಾ ಅಧಿಕೃತರು ಈ ರೀತಿ ತಾಕೀತು ನೀಡಿದ್ದಾರೆ.

ಬಾಸ್ಕೆಟ್‌‍ಬಾಲ್ ಕ್ರೀಡಾಕೂಟದ 24 ಪಂದ್ಯಗಳಲ್ಲಿ ಈ ಬಾಲಕಿ ಹಿಜಾಬ್ ಧರಿಸಿಯೇ ಆಟವಾಡಿದ್ದಳು .ಆದರೆ ಫೈನಲ್ ಪಂದ್ಯದಲ್ಲಿ ಈಕೆಯನ್ನು ಕೈ ಬಿಡಲಾಗಿದೆ.

ಪ್ರಸ್ತುತ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸುವುದಕ್ಕೆ ಹಿಜಾಬ್ ತೊಂದರೆಯಾಗುತ್ತದೆ. ಆದರೆ ಈಗ ಬೇರೆ ಯಾವ ಮಾರ್ಗವೂ ಇಲ್ಲ. ಹಾಗಾಗಿ ಆಕೆಯನ್ನು ಪಂದ್ಯದಿಂದ ಹೊರಗಿಡಲಾಗಿದೆ ಎಂದು ಕೋಚ್ ಹೇಳಿದ್ದಾರೆ.

ಶಾಲಾ ಅಧಿಕೃತರ ಈ ನಿರ್ಧಾರ ನನಗೆ ತುಂಬಾ ನೋವು ಕೊಟ್ಟಿದೆ ಎಂದು ವಿದ್ಯಾರ್ಥಿ ಹೇಳಿದ್ದಾಳೆ.

ಹೀಗೆ ಹಿಜಾಬ್ ಧರಿಸಿ ಆಟದಲ್ಲಿ ಪಾಲ್ಗೊಳ್ಳಲು ನ್ಯಾಯಾಲಯದಿಂದ ವಿಶೇಷ ಅನುಮತಿ ಪಡೆಯಬೇಕಿದೆ. ಆದರೆ ಇದನ್ನು ವಿದ್ಯಾರ್ಥಿ ಗಂಭೀರವಾಗಿ ಪರಿಗಣಿಸದೆ 24 ಪಂದ್ಯಗಳನ್ನು ಆಡಿದ್ದಾಳೆ ಎಂದು ಶಾಲಾ ಅಧಿಕಾರಿಗಳು ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಇಸ್ಲಾಮಾಬಾದ್‌
ಭಾರತೀಯ ಸೇನಾಧಿಕಾರಿಗೆ ಗೌರವ: ಪಾಕ್‌ ಖಂಡನೆ

ಕಾಶ್ಮೀರದಲ್ಲಿ ಯುವಕನೊಬ್ಬನನ್ನು ಜೀಪಿಗೆ ಕಟ್ಟಿ ಕರೆದೊಯ್ದು, ಕಲ್ಲು ತೂರುವವರ ವಿರುದ್ಧ ಮಾನವ ಗುರಾಣಿಯಂತೆ ಬಳಸಿದ್ದ ಸೇನಾಧಿಕಾರಿ ಲೀತುಲ್‌ ಗೊಗೋಯ್‌ ಅವರನ್ನು ಗೌರವಿಸಿದ ಭಾರತದ ಕ್ರಮವನ್ನು...

26 May, 2017

ವಿಶ್ವಸಂಸ್ಥೆ
ಸೇನಾ ವೀಕ್ಷಕರನ್ನು ಗುರಿಯಾಗಿಸಿ ದಾಳಿ ಆರೋಪದಲ್ಲಿ ಹುರುಳಿಲ್ಲ

ಗಡಿ ನಿಯಂತ್ರಣ ರೇಖೆ ಬಳಿ ವಿಶ್ವಸಂಸ್ಥೆಯ ಸೇನಾ ವೀಕ್ಷಕರನ್ನು ಗುರಿಯಾಗಿಸಿ ಭಾರತದ ಪಡೆಗಳು ದಾಳಿ ನಡೆಸಿವೆ ಎಂಬ ಪಾಕಿಸ್ತಾನ ಆರೋಪವನ್ನು ವಿಶ್ವಸಂಸ್ಥೆ ತಳ್ಳಿಹಾಕಿದೆ.

26 May, 2017
ಫಿಲಿಪ್ಪೀನ್ಸ್‌ ನಗರಕ್ಕೆ ಉಗ್ರರ ಮುತ್ತಿಗೆ

ಮರಾವಿ
ಫಿಲಿಪ್ಪೀನ್ಸ್‌ ನಗರಕ್ಕೆ ಉಗ್ರರ ಮುತ್ತಿಗೆ

26 May, 2017

ಲಾಹೋರ್‌
‘ಸಚಿನ್‌ ಎ ಬಿಲಿಯನ್‌ ಡ್ರೀಮ್ಸ್‌’ ಪಾಕ್‌ನಲ್ಲಿ ಬಿಡುಗಡೆ?

ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌  ಅವರ ಜೀವನಾಧಾರಿತ ‘ಸಚಿನ್‌: ಎ  ಬಿಲಿಯನ್‌   ಡ್ರೀಮ್ಸ್‌’  ಚಲನಚಿತ್ರವನ್ನು, ಸೆನ್ಸಾರ್‌ ಮಂಡಳಿ ಅನುಮತಿ ನೀಡಿದರೆ ಪ್ರದರ್ಶಿಸಲು ಪಾಕಿಸ್ತಾನದ ಪ್ರದರ್ಶಕರು ಉತ್ಸುಕರಾಗಿದ್ದಾರೆ. ...

26 May, 2017

ವಾಷಿಂಗ್ಟನ್
ಪ್ಯಾರಿಸ್ ಒಪ್ಪಂದ ಹಿಂದೆ ಸರಿಯದಿರಿ

ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯದಂತೆ ಡೆಮಾಕ್ರಟಿಕ್ ಪಕ್ಷದ 36 ಸಂಸದರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಒತ್ತಾಯಿಸಿದ್ದಾರೆ.

26 May, 2017