ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏಂಜೆಲಾ ಜತೆ ಹಸ್ತಲಾಘವಕ್ಕೆ ಟ್ರಂಪ್ ನಿರಾಕರಿಸಿಲ್ಲ’

Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಬರ್ಲಿನ್ : ಕಳೆದ ವಾರ ಶ್ವೇತಭವನಕ್ಕೆ ಭೇಟಿ ನೀಡಿದ್ದ ಜರ್ಮನಿ ಛಾನ್ಸಲರ್ ಏಂಜೆಲಾ ಮರ್ಕೆಲ್ ಅವರಿಗೆ ಹಸ್ತಲಾಘವ ನೀಡಲು ಟ್ರಂಪ್ ನಿರಾಕರಿಸಿದರು ಎಂಬ ವರದಿಯನ್ನು ಮಾಧ್ಯಮ ಕಾರ್ಯದರ್ಶಿ ಸೀನ್ ಸ್ಪೈಸರ್ ಅಲ್ಲಗಳೆದಿದ್ದಾರೆ. 
 
ಪ್ರವೇಶದ್ವಾರದಲ್ಲಿ ಹಸ್ತಲಾಘವ ಮಾಡಿ ಓವಲ್ ಕಚೇರಿ ಒಳಗೆ ಹೋದ ಇಬ್ಬರೂ ಚರ್ಚೆಗೆ ಕುಳಿತರು. ಆಗ ಏಂಜೆಲಾ ಅವರು ಮತ್ತೊಮ್ಮೆ ಹಸ್ತಲಾಘವ ಮಾಡುವ ಬಗ್ಗೆ ಹೇಳಿದ್ದು  ಟ್ರಂಪ್ ಅವರಿಗೆ ಕೇಳಿಸಲಿಲ್ಲ ಅಥವಾ ಅವರು ನಿರ್ಲಕ್ಷಿಸಿದರು ಎಂದು ವರದಿಯಾಗಿತ್ತು. 
 
30 ನಿಮಿಷಗಳ ಮಾತುಕತೆಯಲ್ಲಿ ಟ್ರಂಪ್ ಒಮ್ಮೆಯೂ ಏಂಜೆಲಾ ಅವರ ಜತೆ ಕಣ್ಣಿಟ್ಟು ಮಾತನಾಡಲಿಲ್ಲ ಎಂದು ಜರ್ಮನಿ ಪತ್ರಿಕೆ ಬೈಲ್ ವರದಿ ಮಾಡಿದೆ. 
 
‘ನಿರಾಶ್ರಿತರಿಗೆ ಆಶ್ರಯ ಕಲ್ಪಿಸುವ ಮೂಲಕ ಏಂಜಲಾ ಮರ್ಕೆಲ್‌ ಅವರು ತಪ್ಪು ಮಾಡಿದ್ದಾರೆ’, ‘ಜರ್ಮನಿಯನ್ನು ಅವರು ಹಾಳು ಮಾಡುತ್ತಿದ್ದಾರೆ’ ಎಂದು ಟ್ರಂಪ್ ಅವರು ಚುನಾವಣೆ ವೇಳೆ ಆರೋಪಿಸಿದ್ದರು. ಅಮೆರಿಕ ಜೊತೆಗಿನ ಸಂಬಂಧ ಸರಿಪಡಿಸುವ ಉದ್ದೇಶದಿಂದ ಛಾನ್ಸೆಲರ್‌ ಅವರು ಇದೇ ಮೊದಲ ಬಾರಿಗೆ ಟ್ರಂಪ್ ಅವರನ್ನು ಭೇಟಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT