ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ನೀರು ಬಳಸೋಣ...

Last Updated 21 ಮಾರ್ಚ್ 2017, 19:59 IST
ಅಕ್ಷರ ಗಾತ್ರ

1993ರಿಂದ ಮಾರ್ಚ್ 22ರಂದು ವಿಶ್ವ ಜಲ ದಿನ ಆಚರಣೆ ಮಾಡಲಾಗುತ್ತಿದೆ. ನೀರು ವ್ಯರ್ಥವಾಗುವುದನ್ನು ತಡೆಯುವುದು ಈ ಬಾರಿಯ ಆಶಯ. ಭೂಮಿಯ ಶೇ 71ರಷ್ಟು ಭಾಗ ನೀರಿನಿಂದಲೇ ಆವೃತವಾಗಿದ್ದರೂ ನಮ್ಮ ಉಪಯೋಗಕ್ಕೆ ಸಿಗುವುದು ಶೇ 0.2 ರಷ್ಟು ಮಾತ್ರ.

ಅದನ್ನೂ ನಾವು ಅತಿಯಾಗಿ ಬಳಸುತ್ತಿದ್ದೇವೆ. ಭೂಮಿಯ ಒಡಲನ್ನು ಬಗೆಬಗೆದು ಅಂತರ್ಜಲ ಬರಿದು ಮಾಡುತ್ತಿದ್ದೇವೆ. ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ 

ದಿನಗಳು ಭೀಕರವಾಗಿರುತ್ತವೆ. ಆಕಾಶದಿಂದ ಬೀಳುವ ನೀರನ್ನು ಭೂಮಿಗೆ ಇಂಗಿಸೋಣ. ಎಲ್ಲರಿಗೂ ಶುದ್ಧ ನೀರು ಸಿಗುವಂತೆ ಮಾಡೋಣ. ಇದು ‘ಪ್ರಜಾವಾಣಿ’ಯ ಕಾಳಜಿ. ‘ನೀರ ನೆಮ್ಮದಿಯ ನಾಳೆ’ ಗಳಿಗಾಗಿ  ಜಾಗೃತಿ ಮೂಡಿಸಲು ಇಂದಿನ ಸಂಚಿಕೆಯನ್ನು ರೂಪಿಸಿದ್ದೇವೆ. ಜಲತಜ್ಞ ಶ್ರೀ ಪಡ್ರೆ ಅವರು  ಸಂಚಿಕೆಯ ಅತಿಥಿ ಸಂಪಾದಕರು. ನಮ್ಮ ಈ ಅಭಿಯಾನದಲ್ಲಿ ನೀವೂ ಕೈಜೋಡಿಸಿ.         –ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT