ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಹೆಚ್ಚಳಕ್ಕೆ ನೈಸರ್ಗಿಕ ಪರಿಹಾರ

ಕಿಂಡಿ ಅಣೆಕಟ್ಟು, ಇಂಗುಗುಂಡಿಯ ಮೂಲಕ ಜೀವಜಲ ಸಮೃದ್ಧಿ
Last Updated 22 ಮಾರ್ಚ್ 2017, 7:02 IST
ಅಕ್ಷರ ಗಾತ್ರ

ಬ್ರಹ್ಮಾವರ: ಇಲ್ಲಿನ ಬಾರ್ಕೂರು ಕೂಡ್ಲಿ ಯ ಹಲವಾರು ಕುಟುಂಬಗಳು ಏಳೆಂಟು ವರ್ಷಗಳ ಹಿಂದೆ ಜನವರಿ ತಿಂಗಳಿನಿಂ ದಲೇ ನೀರಿನ ಅಭಾವ ಎದುರಿಸುವ ಪರಿಸ್ಥಿತಿ ಇತ್ತು. ಬೇಸಿಗೆ ಬಂತೆಂದರೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿಕೊಂಡು ನೀರನ ಸಮಸ್ಯೆ ಪರಿಹರಿಸಿಕೊಳ್ಳುತ್ತಿದ್ದರು.

ಆದರೆ, 7 ವರ್ಷದ ಹಿಂದೆ ಕೂಡ್ಲಿ ಶ್ರೀನಿವಾಸ ಉಡುಪರ ಮನೆಯ ಸಮೀಪ ಹರಿಯುವ ಚಿಕ್ಕ ತೋಡಿಗೆ ಕಟ್ಟು ಹಾಕಿದ ನಂತರ ನೀರು ಸಂಗ್ರಹಣೆಯಾಗಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆತಿದೆ.

ಕೂಡ್ಲಿ ಪರಿಸರದಲ್ಲೇ ಹತ್ತಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ಮಾಡಲಾ ಗಿದ್ದು, ಇದರಿಂದಲೂ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿದೆ. ಕೃಷಿಕರು ಸುಗ್ಗಿಯೊಂದಿಗೆ ಮೆಣಸು ಮತ್ತು ಇನ್ನಿತರ ತರಕಾರಿ ಬೆಳೆಯನ್ನು ಮಾರ್ಚ್‌ ಅಂತ್ಯದವರೆಗೂ ಬೆಳೆಸುತ್ತಿದ್ದಾರೆ.

ಇಂಗುಗುಂಡಿ ಸರದಾರ ಸೀತಾರಾಮ ಶೆಟ್ಟಿ: ಬಾರ್ಕೂರಿನ ನಿವೃತ್ತ ಪ್ರಾಂಶುಪಾಲ ಸೀತಾರಾಮ ಶೆಟ್ಟಿ ಇಂಗುಗುಂಡಿಗಳ ಸರದಾರ ಎಂದರೆ ತಪ್ಪಾಗಲಾರದು. 10ವರ್ಷಗಳಿಂದ ಉಡುಪಿ ಜಿಲ್ಲೆಯ ಶಾಲಾ ಕಾಲೇಜು, ಮನೆಗಳಲ್ಲಿ ನೂರಾರು ಇಂಗು ಗುಂಡಿಗಳನ್ನು ನಿರ್ಮಿಸಲು ಸಲಹೆ, ಸೂಚನೆ, ಮಾರ್ಗದರ್ಶನ ನೀಡುತ್ತಿರುವ ಇವರು ಬಾರ್ಕೂರು ಪರಿ ಸರದಲ್ಲಿಯೇ ನೂರಾರು ಇಂಗು ಗುಂಡಿ ಗಳನ್ನು ನಿರ್ಮಿಸಿ ,ಅನೇಕರ ನೀರಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ.

ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಸಹಯೋಗದಲ್ಲಿ ಮಳೆ ನೀರು ಕೊಯ್ಲು ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗುತ್ತಿರುವ ಇವರು ಮಳೆ ನೀರು ಸಂಗ್ರಹದ ಅತ್ಯಂತ ಅಮೂಲ್ಯ ವ್ಯವಸ್ಥೆ ಗಳಾದ ಕೆರೆ, ಮದಗ, ಜಲಾಶಯಗಳ ಹೂಳೆತ್ತುವಿಕೆ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಮಾಡುತ್ತಿದ್ದಾರೆ.

‘ಜಿಲ್ಲೆಯಲ್ಲಿ ಪ್ರತಿವರ್ಷ ಮಳೆಗಾಲ ದಲ್ಲಿ 500ಕ್ಕೂ ಹೆಚ್ಚು ಟಿ.ಎಂ.ಸಿ ನೀರು ಸಂಗ್ರಹವಾಗುತ್ತಿದೆ. ಇದರಲ್ಲಿ ನಮಗೆ ಕೇವಲ 50ಟಿ.ಎಂ.ಸಿ ನೀರು ಸಾಕು. ಆದರೆ, ಈ ನೀರೇ ನಮಗೆ ಸಿಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರತಿ ಮನೆ, ಗ್ರಾಮದಲ್ಲಿ ಜಲಮರುಪೂರಣ ವ್ಯವಸ್ಥೆಯ ಬಗ್ಗೆ ನಾವು ಎಚ್ಚೆತ್ತುಕೊ ಳ್ಳದಿದ್ದರೆ, ಭವಿಷ್ಯದಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ಹೇಳುತ್ತಾರೆ ಸೀತಾರಾಮ ಶೆಟ್ಟಿ.

ಮಳೆ ನೀರನ್ನು ಹಳ್ಳ, ಚರಂಡಿಗಳಿಗೆ ಹರಿದು ಬಿಡದೆ ಸಂಗ್ರಹಿಸಿದರೆ ಯಾರೂ ಕೂಡಾ ಯಾವತ್ತೂ ಪರದಾಡಬೇಕಾದ ಪರಿಸ್ಥಿತಿ ಬರುವುದಿಲ್ಲ. ಕಡಿಮೆ ಖರ್ಚಿ ನಲ್ಲಿ ಮನೆಯ ಸುತ್ತಮುತ್ತ ಇಂಗು ಗುಂಡಿ ಮಾಡುವ ಮೂಲಕ, ಮೇಲ್ಚಾವಣಿಯ ನೀರನ್ನು ಮಳೆ ಸಂಗ್ರಹಿಸಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬಹುದು ಎಂಬುದು ಅವರ ಸಲಹೆ.
-ಎ.ಶೇಷಗಿರಿ ಭಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT