ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ ಸಂಸತ್‌ ಬಳಿ ಉಗ್ರರ ದಾಳಿ: ನಾಲ್ವರ ಸಾವು

Last Updated 22 ಮಾರ್ಚ್ 2017, 19:43 IST
ಅಕ್ಷರ ಗಾತ್ರ

ಲಂಡನ್‌ (ರಾಯಿಟರ್ಸ್‌/ ಪಿಟಿಐ): ಬ್ರಿಟನ್‌ ಸಂಸತ್‌ ಬಳಿ ಬುಧವಾರ ಏಕಕಾಲದಲ್ಲಿ ವಿವಿಧೆಡೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಪೊಲೀಸ್ ಆಧಿಕಾರಿ  ಮತ್ತು ಮೂವರು ನಾಗರಿಕರು ಮೃತಪಟ್ಟಿದ್ದಾರೆ. 20 ಜನರು ಗಾಯಗೊಂಡಿದ್ದಾರೆ.  

‘ದಾಳಿಕೋರನೊಬ್ಬ ಸಂಸತ್ತಿನ ಆವರಣಕ್ಕೆ ನುಗ್ಗಿ ಪೊಲೀಸ್‌ಗೆ ಇರಿದಿದ್ದಾನೆ. ನಂತರ ಸಂಸತ್‌ ಭವನದತ್ತ ನುಗ್ಗುತ್ತಿದ್ದ ಆತನನ್ನು ಭದ್ರತಾ ಪಡೆ ಸಿಬ್ಬಂದಿ ಗುಂಡಿಟ್ಟು ಕೊಂದಿದ್ದಾರೆ’ ಎಂದು ‘ಹೌಸ್‌ ಆಫ್‌ ಕಾಮನ್ಸ್‌’ ಸಭಾಧ್ಯಕ್ಷ ಡೇವಿಡ್‌ ಲಿಡಿಂಗ್ಟನ್‌ ತಿಳಿಸಿದ್ದಾರೆ.

‘ಇದೊಂದು ಭಯೋತ್ಪಾದಕ ದಾಳಿ’ ಎಂದು ಲಂಡನ್‌ ಮೆಟ್ರೊಪಾಲಿಟನ್‌ ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 2.30ರ ಸುಮಾರಿಗೆ ದಾಳಿ ನಡೆದಿದೆ.

‘ಹೌಸ್‌ ಆಫ್‌ ಕಾಮನ್ಸ್‌’ ನಲ್ಲಿ ನಡೆಯುತ್ತಿದ್ದ ಅಧಿವೇಶನವನ್ನು ಕೂಡಲೇ ಮೊಟಕುಗೊಳಿಸಲಾಯಿತು. ಸಂಸತ್‌ ಕಟ್ಟಡದಲ್ಲೇ ಉಳಿದುಕೊಳ್ಳುವಂತೆ ಎಲ್ಲ ಸದಸ್ಯರಿಗೆ ಸೂಚಿಸಲಾಗಿತ್ತು. ನಂತರ ಅವರನ್ನೆಲ್ಲಾ ಸುರಕ್ಷಿತವಾಗಿ ತೆರವು ಮಾಡಲಾಯಿತು’ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಸಂಸತ್‌ ಭವನದ ಬಳಿಯ ವೆಸ್ಟ್‌ಮಿನಿಸ್ಟರ್‌ ಸೇತುವೆ ಮೇಲೆ ಉಗ್ರನೊಬ್ಬ ಕಾರನ್ನು ಪಾದಚಾರಿ ಮಾರ್ಗ ಮೇಲೆ ನುಗ್ಗಿಸಿದ್ದಾನೆ.    ಆ ದಾಳಿಯಲ್ಲಿ ಮೂವರು ಮೃತಪಟ್ಟು, 20 ಜನರು ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT