ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉ.ಕೊರಿಯಾ ವಿರುದ್ಧ ಇನ್ನಷ್ಟು ನಿರ್ಬಂಧಕ್ಕೆ ಅಮೆರಿಕ ಚಿಂತನೆ

Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ವಾಷಿಂಗ್ಟನ್‌ : ಉತ್ತರ ಕೊರಿಯಾದ ಅಣ್ವಸ್ತ್ರ ಮತ್ತು ಖಂಡಾಂತರ ಕ್ಷಿಪಣಿ ಯೋಜನೆಯು ಒಡ್ಡಿರುವ ಆತಂಕವನ್ನು ದೂರಮಾಡಲು ಆ ದೇಶದ ಮೇಲೆ ಇನ್ನಷ್ಟು ನಿರ್ಬಂಧ ಹೇರಲು ಅಮೆರಿಕ ಚಿಂತನೆ ನಡೆಸಿದೆ.
 
‘ಅಮೆರಿಕವು ಮಿತ್ರ ರಾಷ್ಟ್ರಗಳ ಜತೆ ಸೇರಿಕೊಂಡು ಉ.ಕೊರಿಯಾ ವಿರುದ್ಧ ಹೊಸದಾಗಿ ರಾಜತಾಂತ್ರಿಕ, ಭದ್ರತಾ ಮತ್ತು ಆರ್ಥಿಕ ನಿರ್ಬಂಧಗಳನ್ನು ಹೇರಲಿದೆ’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸೀನ್‌ ಸ್ಪೈಸರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.
 
ಉತ್ತರ ಕೊರಿಯಾದ ಉದ್ಧಟತನದ ವರ್ತನೆ ಅಮೆರಿಕದ ತಾಳ್ಮೆಕೆಡಿಸುತ್ತಿದೆ ಎಂದು ವಿದೇಶಾಂಗಕಾರ್ಯದರ್ಶಿ ರೆಕ್ಸ್‌ ಟಿಲ್ಲೆರ್‌ಸನ್‌ ಹೇಳಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT