ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ತಿಂಗಳಲ್ಲಿ 3.7 ಲಕ್ಷ ಖಾತೆ ರದ್ದುಗೊಳಿಸಿದ ‘ಟ್ವಿಟರ್‌’

ಸಾಮಾಜಿಕ ಜಾಲತಾಣ ಕಂಪೆನಿ ‘ಟ್ವಿಟರ್‌’ ಹೇಳಿಕೆ
Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ವಾಷಿಂಗ್ಟನ್‌ (ಪಿಟಿಐ): ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದ 3.7 ಲಕ್ಷ ಖಾತೆಗಳನ್ನು ರದ್ದುಗೊಳಿಸಿರುವುದಾಗಿ ಪ್ರಮುಖ ಸಾಮಾಜಿಕ ಜಾಲತಾಣ ಕಂಪೆನಿ ‘ಟ್ವಿಟರ್‌’ ಹೇಳಿದೆ. 
 
ಕಂಪೆನಿಯು ಕಳೆದ ಒಂದೂವರೆ ವರ್ಷದಲ್ಲಿ ಆರು ಲಕ್ಷಕ್ಕೂ ಅಧಿಕ ಬಳಕೆದಾರರ ಖಾತೆಗಳನ್ನು ರದ್ದುಗೊಳಿಸಿದಂತಾಗಿದೆ.

‘2016ರ ಕೊನೆಯ ಆರು ತಿಂಗಳಲ್ಲಿ 3.76 ಲಕ್ಷ ಖಾತೆಗಳನ್ನು ರದ್ದುಗೊಳಿಸಲಾಗಿದೆ. 2015ರ ಆಗಸ್ಟ್.1ರ ಬಳಿಕ ಒಟ್ಟು 6.36 ಲಕ್ಷ ಖಾತೆಗಳನ್ನು ಟ್ವಿಟರ್‌ ರದ್ದುಗೊಳಿಸಿದೆ’ ಎಂದು ಅಮೆರಿಕದ ಸಿಎನ್‌ಇಟಿ ವೆಬ್‌ಸೈಟ್‌ ವರದಿ ಮಾಡಿದೆ. 
 
ಈ ಎಲ್ಲ ಖಾತೆಗಳಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಉಗ್ರವಾದವನ್ನು ಪ್ರೋತ್ಸಾಹಿಸುವಂತಹ ಮಾಹಿತಿಗಳನ್ನು ಪ್ರಕಟಿಸಲಾಗುತ್ತಿತ್ತು ಎಂದು ಕಂಪೆನಿ ಹೇಳಿದೆ. ಸಮಾಜವಿರೋಧಿ ಶಕ್ತಿಗಳು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಜನಾಂಗೀಯವಾದದ ಬಗ್ಗೆ ಪ್ರಚಾರ ಮಾಡಲು ಟ್ವಿಟರ್‌ ಖಾತೆಗಳನ್ನು ಬಳಸುತ್ತಲೇ ಬಂದಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT