ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ 131ನೇ ಸ್ಥಾನ

ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕ ಪಟ್ಟಿ
Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ವಿಶ್ವಸಂಸ್ಥೆ: ವಿಶ್ವಸಂಸ್ಥೆ  ಬಿಡುಗಡೆ ಮಾಡಿದ 2015ನೇ ಸಾಲಿನ ಮಾನವ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ ಭಾರತ 131ನೇ ಸ್ಥಾನ ಪಡೆದಿದೆ. 2014 ರಲ್ಲೂ ಭಾರತ ಇದೇ ಸ್ಥಾನದಲ್ಲಿತ್ತು. 
 
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಪ್ರತಿವರ್ಷವೂ ವಿವಿಧ ದೇಶಗಳ ಜನರ ಜೀವನಮಟ್ಟದ ಅಧ್ಯಯನ ನಡೆಸಿ ಪಟ್ಟಿ ಸಿದ್ಧಪಡಿಸುತ್ತದೆ. ಈ ಬಾರಿ 188 ರಾಷ್ಟ್ರಗಳಲ್ಲಿ ಅಧ್ಯಯನ ನಡೆಸಿ ತಯಾರಿಸಿದ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.
 
ಸಾರ್ಕ್‌ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಶ್ರೀಲಂಕಾ (73 ನೇ ಸ್ಥಾನ) ಮತ್ತು ಮಾಲ್ಡೀವ್ಸ್‌ (105) ಬಳಿಕ ಮೂರನೇ ಸ್ಥಾನದಲ್ಲಿದೆ. 
 
ಪಟ್ಟಿಯಲ್ಲಿರುವ ದೇಶಗಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಿದ್ದು, ಭಾರತವು ‘ಸಾಧಾರಣ ಮಾನವ ಅಭಿವೃದ್ಧಿ’ ಹೊಂದಿರುವ ದೇಶಗಳ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಬಾಂಗ್ಲಾದೇಶ, ಭೂತಾನ್‌, ಪಾಕಿಸ್ತಾನ. ಕೀನ್ಯಾ, ಮ್ಯಾನ್ಮಾರ್‌ ಮತ್ತು ನೇಪಾಳ ಕೂಡಾ ಇದೇ ಗುಂಪಿನಲ್ಲಿವೆ. 
 
2015 ರಲ್ಲಿ ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕದ ಮೌಲ್ಯ 0.624 ರಷ್ಟಿತ್ತು. 2010ಕ್ಕೆ ಹೋಲಿಸಿದರೆ (0.580) ಅಲ್ಪ ಏರಿಕೆ ಕಂಡುಬಂದಿದೆ. ಭಾರತದಲ್ಲಿ ಸರಾಸರಿ ಜೀವಿತಾವಧಿ 68 ವರ್ಷ 3 ತಿಂಗಳು ಆಗಿದೆ ಎಂದು ವರದಿ ತಿಳಿಸಿದೆ. 
 
2014–15ರ ಸಾಲಿನಲ್ಲಿ ಭಾರತದ ಶೇ 63 ರಷ್ಟು ಮಂದಿ ತಮ್ಮ ಜೀವನಮಟ್ಟದ ಬಗ್ಗೆ ‘ತೃಪ್ತಿ’ ಹೊಂದಿದ್ದರು ಎಂಬ ಅಂಶ ವರದಿಯಲ್ಲಿದೆ.
 
ಶೇ 69 ಮಂದಿ ‘ಭಾರತದಲ್ಲಿ ನಮಗೆ ಸುರಕ್ಷಿತ ಭಾವ ಇದೆ’ ಎಂದು ಹೇಳಿದ್ದರೆ,  ಶೇ 69 ಮಂದಿ ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇದೆ ಎಂದಿದ್ದಾರೆ. 
ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಜಾರಿಗೆ ತಂದಿರುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಯುಎನ್‌ಡಿಪಿ ಶ್ಲಾಘಿಸಿದೆ. 
 
****
ನಾರ್ವೆಗೆ ಅಗ್ರಸ್ಥಾನ
ಮಾನವ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ ನಾರ್ವೆ ಈ ಬಾರಿಯೂ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ಆಸ್ಟ್ರೇಲಿಯಾ ಮತ್ತು ಸ್ವಿಟ್ಜರ್‌ಲೆಂಡ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. ಅಮೆರಿಕಕ್ಕೆ 10 ಹಾಗೂ ಬ್ರಿಟನ್‌ಗೆ 16ನೇ ಸ್ಥಾನ ದೊರೆತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT