ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜ್‌ ಬಹದ್ದೂರ್‌ ಯಾದವ್‌ ಸತ್ತಿಲ್ಲ: ಯೋಧರ ಸಾವಿನ ಸುದ್ದಿ ತಳ್ಳಿಹಾಕಿದ ಬಿಎಸ್‌ಎಫ್‌ ಮತ್ತು ಯಾದವ್‌ ಪತ್ನಿ

Last Updated 23 ಮಾರ್ಚ್ 2017, 16:40 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಸೇನೆಯಲ್ಲಿನ ಹುಳುಕುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಗೊಳಿಸಿದ್ದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಯೋಧ ತೇಜ್‌ ಬಹದ್ದೂರ್‌ ಯಾದವ್‌ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಯಾದವ್‌ ಸಾವಿನ ಸುದ್ದಿಯನ್ನು ಬಿಎಸ್‌ಎಫ್‌ ಮತ್ತು ಯಾದವ್‌ ಅವರ ಪತ್ನಿ ತಳ್ಳಿಹಾಕಿದ್ದಾರೆ.

ಯಾದವ್‌ ಅವರನ್ನು ಹೋಲುವ ಯೋಧರೊಬ್ಬರು ಮೃತಪಟ್ಟಂತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ಹರಿದಾಡುತ್ತಿತ್ತು. ಯೋಧ ಕಣ್ಣು ಮುಚ್ಚಿರುವ ಹಾಗೂ ಮೂಗಿನಿಂದ ರಕ್ತ ಒಸರುತ್ತಿರುವ ಚಿತ್ರ ಫೇಸ್‌ಬುಕ್‌, ಟ್ವಿಟರ್‌ನಲ್ಲಿ ವೈರಲ್‌ ಆಗಿತ್ತು. ಈ ಚಿತ್ರದೊಂದಿಗೆ ಯಾದವ್‌ ಮೃತಪಟ್ಟಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು.

ಆದರೆ, ಈ ಸುದ್ದಿಯನ್ನು ಬಿಎಸ್‌ಎಫ್‌ ಮತ್ತು ಯಾದವ್‌ ಪತ್ನಿ ತಳ್ಳಿಹಾಕಿದ್ದಾರೆ. ಯಾದವ್‌ ಆರೋಗ್ಯವಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ‘ತೇಜ್‌ ಬಹದ್ದೂರ್ ಯಾದವ್‌ ಅವರು ಮೃತಪಟ್ಟಿದ್ದಾರೆ ಎಂಬುದು ಸುಳ್ಳು ಸುದ್ದಿ. ಅವರು ಸದ್ಯ ಆರೋಗ್ಯವಾಗಿದ್ದಾರೆ. ಅವರು ಈಗ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿದ್ದಾರೆ’ ಎಂದು ಬಿಎಸ್‌ಎಫ್‌ ವಕ್ತಾರ ಶುಭೇಂದು ಭಾರದ್ವಾಜ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT