ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳು ಲೇಖಕ ಅಶೋಕ ಮಿತ್ರನ್‌ ನಿಧನ

Last Updated 23 ಮಾರ್ಚ್ 2017, 17:11 IST
ಅಕ್ಷರ ಗಾತ್ರ

ಚೆನ್ನೈ: ತಮಿಳಿನ ಹಿರಿಯ ಲೇಖಕ ಅಶೋಕ ಮಿತ್ರನ್ (85) ಅವರು ಚೆನ್ನೈನಲ್ಲಿ ಗುರುವಾರ ನಿಧನರಾದರು.

ಮಿತ್ರನ್‌ ಅವರು 200ಕ್ಕೂ ಹೆಚ್ಚು ಸಣ್ಣ ಕತೆಗಳು, 8 ಕಾದಂಬರಿಗಳು ಹಾಗೂ ಸುಮಾರು 15 ಕಥನಗಳನ್ನು ರಚಿಸಿದ್ದಾರೆ. ಸ್ವಾತಂತ್ರ್ಯೋತ್ತರ ತಮಿಳು ಸಾಹಿತ್ಯಕ್ಕೆ ಅವರ ಕೊಡುಗೆ ಮಹತ್ವವಾದುದು ಎಂದು ವಿಮರ್ಶಕರು ಗುರುತಿಸಿದ್ದಾರೆ. ಅವರ ಕತೆಗಳು ಕನ್ನಡ, ಇಂಗ್ಲಿಷ್‌, ಹಿಂದಿ, ಮಲಯಾಳ, ತೆಲುಗು ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡಿವೆ.

1931ರಲ್ಲಿ ಸಿಕಂದರಾಬಾದ್‌ನಲ್ಲಿ ಜನಿಸಿದ ಮಿತ್ರನ್‌ 1952ರಲ್ಲಿ ಚೆನ್ನೈಗೆ ಬಂದು ನೆಲೆಸಿದರು. 1996ರಲ್ಲಿ ಅವರ ‘ಅಪ್ಪಾವಿನ್ ಸ್ನೇಗಿದರ್‌’ ಸಣ್ಣ ಕತೆಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 1977ರಲ್ಲಿ ಪ್ರಕಟಗೊಂಡ ‘ದಿ ಎಯ್ಟೀನ್ತ್‌ ಪ್ಯಾರಲಲ್‌’ ಅವರ ಜನಪ್ರಿಯ ಕಾದಂಬರಿಗಳಲ್ಲೊಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT