ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಣ್ಣೆಂದು ಹೇಳಿಕೊಳ್ಳಲು ಹೆಮ್ಮೆ’

Last Updated 23 ಮಾರ್ಚ್ 2017, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ಬಹುತೇಕ ಮಹಿಳೆಯರು ಹೆಣ್ಣು ಜನ್ಮ ಬೇಡವೇ ಬೇಡ ಎನ್ನುತ್ತಾರೆ. ಆದರೆ, ನಾನು ಹೆಣ್ಣಾಗಿ ಮತ್ತೆ ಹುಟ್ಟಲು ಬಯಸುತ್ತೇನೆ. ಹೆಣ್ಣು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ’ ಎಂದು ವಿಶ್ವಸಂಸ್ಥೆಯ ಯುವ ಶೌರ್ಯ ಪ್ರಶಸ್ತಿ ಪುರಸ್ಕೃತೆ ಅಶ್ವಿನಿ ಅಂಗಡಿ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಘಟಕವು  ನಗರದಲ್ಲಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಸವಾಲುಗಳನ್ನು ಎದುರಿಸಿಯೇ ಮುಂದೆ ಬಂದಿದ್ದೇನೆ. ಅಂದು ಬಂದ ಕಣ್ಣೀರು ಇಂದು ಹಲವರ ಕಣ್ಣೀರು ಒರೆಸುವಷ್ಟು ಶಕ್ತಿ ತುಂಬಿದೆ. 35 ಅಂಗವಿಕಲ ಮಕ್ಕಳಿಗೆ ಶಿಕ್ಷಣ ಕೊಡಿಸುವಷ್ಟು ಶಕ್ತಿ ಬಂದಿದೆ’ ಎಂದರು.ಈ ವೇಳೆ ಅಶ್ವಿನಿ ಅಂಗಡಿ ಹಾಗೂ ಸರಿಗಮಪ ಲಿಟ್ಲ್‌ ಚಾಂಪ್ಸ್‌ ಸ್ಪರ್ಧೆಯ ವಿಜೇತೆ ಅನ್ವಿತಾ ಅವರನ್ನು ಗೌರವಿಸಲಾಯಿತು.

ಬದಲಾವಣೆಗೆ ದಿಟ್ಟ ನಡಿಗೆ:  ‘ಸಾಮಾಜಿಕ ಬದಲಾವಣೆಗೆ ಮಹಿಳೆಯರ ದಿಟ್ಟ ನಡಿಗೆ’ ಜಾಗೃತಿ ಜಾಥಾಕ್ಕೆ ನಗರದ ದೂರದರ್ಶನ ಕೇಂದ್ರದ ಸಹ ನಿರ್ದೇಶಕಿ ನಿರ್ಮಲಾ ಎಲಿಗಾರ್ ಚಾಲನೆ ನೀಡಿದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ ಮಾತನಾಡಿ, ‘ನಮ್ಮ ಶಿಕ್ಷಣ ವ್ಯವಸ್ಥೆಯಿಂದ ಮಕ್ಕಳು ಒತ್ತಡ ಅನುಭವಿಸುತ್ತಿದ್ದಾರೆ. ಎಲ್ಲ ಮಕ್ಕಳಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್‌ ಮಾದರಿಯ  ಜೀವನಶೈಲಿ, ಶಿಸ್ತು ಬೆಳೆಸಬೇಕಿದೆ. ಇದಕ್ಕೆ
ಪೋಷಕರು ಪ್ರೋತ್ಸಾಹ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT