ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹುತಾತ್ಮರ ಬಲಿದಾನ ಸ್ಮರಿಸಿ’

Last Updated 24 ಮಾರ್ಚ್ 2017, 5:18 IST
ಅಕ್ಷರ ಗಾತ್ರ

ಮಂಗಳೂರು: ದೇಶಕ್ಕಾಗಿ ಬಲಿದಾನ ನೀಡಿದವರನ್ನು ಸ್ಮರಿಸಬೇಕೆ ಹೊರತು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ್ರೋಹಿಗಳನ್ನಲ್ಲ ಎಂದು ವಕೀಲ ಎಂ.ಕೆ. ಸುವ್ರತ್ ಕುಮಾರ್ ಹೇಳಿದರು.

ಗುರುವಾರ ನಗರದ ಎಸ್.ಡಿ.ಎಂ ಕಾನೂನು ಕಾಲೇಜಿನ ದೇಶಭಕ್ತ ಸಂಘದ ವತಿಯಿಂದ ಭಗತ್‌ಸಿಂಗ್, ರಾಜ್‌ಗುರು, ಸುಖ್‌ದೇವ್ ಹುತಾತ್ಮರಾದ ಅಂಗವಾಗಿ ನಡೆದ ಶಹೀದ್ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಭಗತ್‌ಸಿಂಗ್, ರಾಜ್‌ಗುರು, ಸುಖ್‌ದೇವ್‌ ಬಲಿದಾನ ವ್ಯರ್ಥವಾಗ ಬಾರದು. ಅವರ ಜೀವನ ಪ್ರತಿಯೊಬ್ಬ ಯುವಕರಿಗೂ ಸ್ಫೂರ್ತಿಯಾಗಬೇಕು. ದೇಶ ಕಾಯುತ್ತಿರುವ ಸೈನಿಕರು ಸ್ಫೂರ್ತಿ ಯಾಗಬೇಕು ಎಂದರು.

ಅಂದಿನ ಈ ಹುತಾತ್ಮರಂತೆ ಇಂದಿನ ನಮ್ಮ ಸೈನಿಕರ ತ್ಯಾಗ, ಬಲಿದಾನ ಎಲ್ಲ ರಿಗೂ ಸ್ಫೂರ್ತಿ. ಅವರ ಆದರ್ಶ ಅಳ ವಡಿಸಲಾಗದವರು ದೇಶದ್ರೋಹಿಗಳ ದಿವಸ ಆಚರಿಸಿ ಅಪಮಾನ ಮಾಡುತ್ತಿ ರುವುದು ದುರದೃಷ್ಟಕರ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ್ರೋಹದ ಕೆಲಸ ಮಾಡುವವರು ತಮ್ಮ ಮೂಲ ಭೂತ ಕರ್ತವ್ಯಗಳನ್ನು ಮರೆಯಬಾರದು ಎಂದು ಹೇಳಿದರು.

ಎಸ್.ಡಿ.ಎಂ ಉದ್ಯಮಾಡಳಿತ ಕಾಲೇಜಿನ ನಿರ್ದೇಶಕ ದೇವರಾಜ್, ಎಸ್.ಡಿ.ಎಂ. ಕಾನೂನು ಕಾಲೇಜು ಪ್ರಾಂ ಶುಪಾಲ ತಾರಾನಾಥ, ಉಪನ್ಯಾಸಕ ರಾದ ಮಹೇಶ್ಚಂದ್ರ ನಾಯಕ್, ಸಂ ತೋಷ್ ಪ್ರಭು ಉಪಸ್ಥಿತರಿದ್ದರು. ಹರಿತಾ ವರ್ಮಾ ಹಾಡಿದ ವಂದೇಮಾತರಂ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ವಂದಿತಾ ಭಟ್ ನಿರೂಪಿಸಿ ದರು. ವಿಕ್ರಂ ರಾಜ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT