ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಪಂಚದ ಸುಂದರ ಪಾರ್ಕ್‌ಗಳು

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಗೋಲ್ಡನ್‌ ಗೇಟ್‌ ಪಾರ್ಕ್‌

ಸಾವಿರ ಎಕರೆಗೂ ಹೆಚ್ಚು ವ್ಯಾಪ್ತಿಯ ಪ್ರದೇಶದಲ್ಲಿರುವ ಈ ಪಾರ್ಕ್‌ ಇರುವುದು  ಸ್ಯಾನ್‌ಫ್ರಾನ್ಸಿಸ್ಕೊ ನಗರದಲ್ಲಿ. ಒಂದೇ ದಿನದಲ್ಲಿ ಈ ಪಾರ್ಕ್‌ ಸುತ್ತುವುದು ಕಷ್ಟ.  ಈ ಉದ್ಯಾನ ಆಯತಾಕಾರದಲ್ಲಿ ಇದೆ. 1870ರಲ್ಲಿ ಈ ಪಾರ್ಕ್‌ ನಿರ್ಮಾಣವಾಯಿತು. ಡಚ್‌ ವಿಂಡ್ಮಿಲ್‌, ಗಾಲ್ಫ್‌ ಕ್ರೀಡಾಂಗಣ, ಪ್ರತಿಮೆಗಳು, ಮ್ಯೂಸಿಯಂ, ಕೆರೆ, ಆಟದ ಮೈದಾನ  ಇಲ್ಲಿದೆ.

***

ಕಿರ್‌ಸ್ಟೆನ್‌ಬಾಷ್‌ ಉದ್ಯಾನ

ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿರುವ ಕೇಪ್‌ಟೌನ್‌ನಲ್ಲಿರುವ ಉದ್ಯಾನವಿದು. 1,300 ಎಕರೆ ಪ್ರದೇಶದಲ್ಲಿರುವ ಈ ಉದ್ಯಾನದ ನಿರ್ಮಾಣವಾಗಿದ್ದು 1913ರಲ್ಲಿ.  ಇಪ್ಪತ್ತೆರಡು ಸಾವಿರಕ್ಕೂ ಹೆಚ್ಚಿನ ಸಸ್ಯಗಳು ಇಲ್ಲಿವೆ. ಇಲ್ಲಿ ಪರ್ವತವೂ ಇರುವುದರಿಂದ ಟ್ರಕಿಂಗ್‌ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ.

***

ಪಾರ್ಕ್‌ ಗೆಲ್‌

ಸ್ಪೇನ್‌ನ ಬಾರ್ಸಿಲೋನಾದಲ್ಲಿರುವ ಈ ಉದ್ಯಾನವನ್ನು ವಾಸ್ತುಶಿಲ್ಪಿ ಆ್ಯಂಟೋನಿ ಅವರು ವಿನ್ಯಾಸ ಮಾಡಿದ್ದಾರೆ.  1926ರಲ್ಲಿ ಇದರ ನಿರ್ಮಾಣವಾಯಿತು.  ಡೆಲ್ಫಿಯಲ್ಲಿರುವ ಗ್ರೀಕ್‌ ಮತ್ತು ರೋಮನ್ನರ ಸೂರ್ಯ ದೇವರ ದೇವಸ್ಥಾನದ ವಿನ್ಯಾಸದಿಂದ ಇದು ಪ್ರೇರಣೆ ಪಡೆದಿದೆ. ಉದ್ಯಾನದ ಪ್ರವೇಶದ್ವಾರದಲ್ಲಿರುವ ಡ್ರ್ಯಾಗನ್‌ ಕಣ್ಣನ್ನು ಸೆಳೆಯುತ್ತದೆ.

***

ಸ್ಟ್ಯಾಂಲೆ ಪಾರ್ಕ್‌

ನಯನ ಮನೋಹರವಾದ ಈ ಪಾರ್ಕ್ ಇರುವುದು ಕೆನಡಾದಲ್ಲಿ.  ಉದ್ಯಾನದ ವಿಸ್ತೀರ್ಣ ಒಂದು ಎಕರೆಗೂ ಹೆಚ್ಚು. ಈ ಉದ್ಯಾನ ಸಮುದ್ರದಿಂದ ಸುತ್ತುವರಿದಿದೆ. ಅಕ್ವೇರಿಯಂ, ಮೃಗಾಲಯದ ಜೊತೆಗೆ ಕೆನಡಾ ಮತ್ತು ಜಪಾನಿನ ಯುದ್ಧವನ್ನು ನೆನಪಿಸುವ ಸ್ಮಾರಕಗಳು ಇಲ್ಲಿನ ಪ್ರಮುಖ  ಆಕರ್ಷಣೆ.

***

ರಾಯಲ್‌ ಬೊಟಾನಿಕಲ್‌ ಗಾಡರ್ನ್

ಈ ಉದ್ಯಾನ ಇರುವುದು ಮೆಲ್ಬರ್ನ್‌ನಲ್ಲಿ. ಹತ್ತು ಸಾವಿರಕ್ಕೂ ಹೆಚ್ಚು ಮರಗಳು ಇಲ್ಲಿವೆ. 1846ರಲ್ಲಿ ಈ ಉದ್ಯಾನದ ನಿರ್ಮಾಣವಾಯಿತು. ‘ಚಿಲ್ಡ್ರನ್‌ ಗಾರ್ಡನ್‌’ ಇಲ್ಲಿಯ ಪ್ರಮುಖ ಆಕರ್ಷಣೆ. ಯರ್ರಾ ನದಿ ಸಮೀಪದಲ್ಲಿಯೇ ಈ ಉದ್ಯಾನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT