ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಮಂದಿ ಆರೋಪಿಗಳ ಬಂಧನ

ಅಜಿಲಮೊಗರುನಲ್ಲಿ ಚೂರಿ ಇರಿತ ಪ್ರಕರಣ
Last Updated 25 ಮಾರ್ಚ್ 2017, 7:18 IST
ಅಕ್ಷರ ಗಾತ್ರ

ಉಪ್ಪಿನಂಗಡಿ:  10 ದಿನಗಳ ಹಿಂದೆ ಅಜಿಲಮೊಗರು ಉರೂಸ್ ಸಮಾ ರಂಭ ಮುಗಿಸಿ ಬರುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಚೂರಿಯಿಂದ ಇರಿದು ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ 5 ಮಂದಿ ಆರೋ ಪಿಗಳನ್ನು ಉಪ್ಪಿನಂಗಡಿ ಪೊಲೀಸರು ಕರ್ವೇಲ್ ಎಂಬಲ್ಲಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಬಂಧಿತ ಆರೋಪಿಗಳು ಗೋಳಿ ತೊಟ್ಟು ನಿವಾಸಿ ಮಹಮ್ಮದ್ ಫಿರ್ದೋಸ್, ಕಳೆಂಜಿಬೈಲ್ ನಿವಾಸಿ ಗಳಾದ ಸಾಹುದ್ದೀನ್ ಯಾನೆ ಸಾಬು, ಮುಸ್ತಫಾ, ರಮೀಝ್ ಮತ್ತು ಶರೀಫ್ ಎಂಬವರು.

ಆರೋಪಿಗಳು ಗೋಳಿತೊಟ್ಟು ನಿವಾಸಿ ಅಬ್ದುಲ್ ಆರಿಫ್ ಎಂಬವರು ಮಾ. 13ರಂದು ಅಜಿಲಮೊಗರು ಉ ರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪ್ಪಿನಂಗಡಿ ಕಡೆ ಬರುತ್ತಿದ್ದಾಗ ತೆಕ್ಕಾರು ಗ್ರಾಮದ ಪೂಂಜಿಲ್‍ಮೊಗರು ಎಂಬಲ್ಲಿ ಅಡ್ಡಗಟ್ಟಿ ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದರು. ಈ ಬಗ್ಗೆ 5 ಮಂದಿ ವಿರುದ್ಧ ಉಪ್ಪಿನಂಗಡಿ ಪೊಲೀ ಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು, ಘಟನೆ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದರೆ.

ಗಾಂಜಾ ಮಾಫಿಯಾ?: ಹಲ್ಲೆಗೆ ಒಳ ಗಾದ ವ್ಯಕ್ತಿ ಮತ್ತು ಆರೋಪಿ ಫಿರ್ದೋಸ್ ಮಧ್ಯೆ ಹಳೇ ವೈಷಮ್ಯ ಇದ್ದು, ಇದರ ಪ್ರತಿಕಾರವಾಗಿ ಈ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಆದರೆ ಇದರ ಹಿಂದೆ ಗಾಂಜಾ ಮಾಫಿಯಾ ಇದೆ ಎಂದು ಹೇಳಲಾಗಿದ್ದು, ಆರೋಪಿ ಗಳು ಈ ಹಿಂದೆ ಗೋಳಿತೊಟ್ಟು ಪರಿಸರದಲ್ಲಿ ಗಾಂಜಾ ಮಾರಾಟ ಯತ್ನ ನಡೆಸಿದ್ದರು.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ರವಾನೆ ಆಗಿತ್ತು. ಈ ಮಾಹಿತಿ ಆರಿಫ್ ಮೂಲಕ ಪೊಲೀಸರಿಗೆ ಹೋಗಿತ್ತು ಎಂಬ ತಪ್ಪು ಕಲ್ಪನೆಯಿಂದ ಈ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಆರೋಪಿಗಳ ಬಂಧನ ಕಾರ್ಯಾಚ ರಣೆಯಲ್ಲಿ ಪೊಲೀಸ್ ಸಿಬ್ಬಂದಿ ಹರೀ ಶ್ಚಂದ್ರ, ದೇವದಾಸ್ ಗೌಡ, ಇರ್ಷಾದ್, ಜಗದೀಶ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT