ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೋಂಗಿ ಆದರ್ಶವಾದಿಗಳ ಸಂಖ್ಯೆ ಹೆಚ್ಚಳ

Last Updated 7 ಏಪ್ರಿಲ್ 2017, 5:56 IST
ಅಕ್ಷರ ಗಾತ್ರ

ಹೊಸನಗರ: ‘ವ್ಯಕ್ತಿಯಲ್ಲಿರುವ ದುರ್ಗುಣವನ್ನು ಮರೆ ಮಾಚಿ, ಆದರ್ಶರೆಂದು ಬಿಂಬಿಸುವ ವಿಕಾರ ಪ್ರವೃತ್ತಿ ಲೋಕದಲ್ಲಿ ಹೆಚ್ಚುತ್ತಿದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ರಾಮಚಂದ್ರಾಪುರ ಮಠದಲ್ಲಿ ಐದು ದಿನಗಳ ರಾಮೋತ್ಸವದ ಸಮಾರೋಪ ದಲ್ಲಿ  ಕೆಕ್ಕಾರು ರಾಯರಮನೆ ಗಣಪತಿ ಭಟ್ ಕುಟುಂಬಕ್ಕೆ ‘ಧನ್ಯ ಸೇವಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ದೊಡ್ಡವರ ಎದುರು ಚಿಕ್ಕವರಾಗಿ ಬದುಕಿದರೆ  ಜೀವನಕ್ಕೆ ಧನ್ಯತೆ ಸಿಗುತ್ತದೆ ಎಂಬುದು ಆಂಜನೇಯನ ಆದರ್ಶ.  ಆತನ ಒಳಗೂ ಹೊರಗೂ ಸೌಂದರ್ಯವಿತ್ತು. ಸಮಾಜದ ಎಲ್ಲಾ ಹಿರಿಯರಿಗೂ ಗೌರವ ದೊರೆತರೆ ಮಾತ್ರ ಉತ್ತಮ ಸಮಾಜ ರೂಪುಗೊಳ್ಳಲಿದೆ’ ಎಂದರು.

ಹುಕ್ಕೇರಿ ಮಠದ ಚಂದ್ರಶೇಖರ ಸ್ವಾಮೀಜಿ  ಮಾತನಾಡಿ, ‘ಚಂಚಲ ಮನಸ್ಸಿಗೆ ಇಚ್ಛೆ ಪಟ್ಟ ಫಲಗಳು ದೊರೆಯಲು ಸಾಧ್ಯವಿಲ್ಲ. ನಿಷ್ಠೆಯ ಭಕ್ತಿಗೆ ಭಗವಂತ ಅನುಗ್ರಹ ನೀಡುತ್ತಾನೆ. ಧರ್ಮ ಕಾರ್ಯಗಳಿಗೆ ಜೀವನವನ್ನು ಎತ್ತರಕ್ಕೇರಿಸುವ ಗುಣವಿದೆ’ ಎಂದರು.

ಹಿರಿಯೂರು ಆದಿ ಜಾಬಂವ ಮಠದ ಸ್ವಾಮೀಜಿ ಮಾತನಾಡಿ, ‘ಬರದಲ್ಲಿ ಗೋವಿನ ರಕ್ಷಣೆಗೆ ಹೊರಟ ರಾಮಚಂದ್ರಾಪುರ ಮಠದ ಸ್ವಾಮೀಜಿಗಳ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು

ಸಾಮೂಹಿಕ ಗೌರವ: ಸಂಧ್ಯಾ ಮಂಗಲ ವಿಶೇಷ ಕಾರ್ಯಕ್ರಮದಲ್ಲಿ 34 ಹಿರಿಯ ದಂಪತಿಗಳನ್ನು ಗೌರವಿಸಲಾಯಿತು.

ಪಶು ಆಹಾರ ಘಟಕ ಲೋಕಾರ್ಪಣೆ: ಗೋವುಗಳಿಗೆ ರಾಸಾಯನಿಕ ಮುಕ್ತ ಶುದ್ಧವಾದ ಪಶು ಆಹಾರ ಘಟಕವನ್ನು ಲೋಕಾರ್ಪಣೆ ಮಾಡಿದರು.
ರಾಮೋತ್ಸವ ಸಮಿತಿ ಅಧ್ಯಕ್ಷ ಭಾಗಿ ಸತ್ಯನಾರಾಯಣ, ಕಾನುಗೋಡು ಸುಬ್ರಮಣ್ಯ, ಗಣಪತಿ ಜಟ್ಟಿಮನೆ ಹಾಜರಿದ್ದರು. ರಮೇಶ ಹೆಗಡೆ ಗುಂಡೂಮನೆ, ಕೃಷ್ಣಾನಂದ ಶರ್ಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT