ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜಾ ಮಜ

Last Updated 8 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ರಜೆಯು ಬಂದಿದೆ ಮಜವ ತಂದಿದೆ
ಎಲ್ಲರು ಕಲೆತು ಸೇರೋಣ 
ನಡೆಯಿರಿ ನಡೆಯಿರಿ ಹೊರಡೋಣ
ಅಜ್ಜನಮನೆಗೆ ನಡೆಯೋಣ
 
ಬಸ್ಸಲಿ ಕುಳಿತು ಓಡುವ ಮರಗಳ
ಕಣ್ಣುಗಳರಳಿಸಿ ನೋಡೋಣ
ಕಾಲು ಹಾದಿಯಲಿ ಜಿಗಿಜಿಗಿದೋಡುತ
ಖುಷಿಯಲಿ ಮನೆಯ ಸೇರೋಣ
 
ಕಾಡನು ಅಲೆದು ಹೊಳೆಯಲಿ ಮಿಂದು
ಮರಳಿನ ಮನೆಗಳ ಕಟ್ಟೋಣ
ಕಪ್ಪೆ ಚಿಪ್ಪು ಬಣ್ಣದ ಕಲ್ಲುಗಳ
ಹೆಕ್ಕುತ ಹಿರಿಹಿರಿ ಹಿಗ್ಗೋಣ
 
ಅಜ್ಜಿಯ ಕೈರುಚಿ ಅಜ್ಜನ ಕಥೆಗಳ
ಹೂಂ ಹೂಂ ಎನ್ನುತ ಕೇಳೋಣ
ಕೈ ಬರಹಗಳ ಬಾಯಿಪಾಠಗಳ
ಮರೆಯದೆ ಮೆಲುಕನು ಹಾಕೋಣ
 
ಮರ ಮರದಲಿ ಜೋಕಾಲಿಯ ಕಟ್ಟುತ
ಜೀಕುತ ದೂರಕೆ ಸಾಗೋಣ
ಬಿಸಿಲಿನ ನಗರವ ಸ್ವಲ್ಪ ಮರೆಯುತ
ಹಳ್ಳಿಯ ತಂಪಲಿ ಆಡೋಣ
     -ಗಾಯತ್ರೀ ರಾಘವೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT