ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ದಾಖಲೆಗೆ ಸಜ್ಜಾದ ‘ಪುಲಿಮುರುಗನ್‌’: ಹಾಲಿವುಡ್‌ ಸಿನಿಮಾ ದಾಖಲೆ ಮುರಿಯಲಿದೆ ಭಾರತೀಯ ಚಿತ್ರ!

Last Updated 11 ಏಪ್ರಿಲ್ 2017, 14:15 IST
ಅಕ್ಷರ ಗಾತ್ರ
ADVERTISEMENT

ಕೇರಳ: ಮಲಯಾಳಂನ ಸೂಪರ್‌ಸ್ಟಾರ್‌ ನಟ ಮೋಹನ್‌ ಲಾಲ್‌ ನಟನೆಯ ಆ್ಯಕ್ಷನ್‌ ತ್ರಿಲ್ಲರ್‌ ಸಿನಿಮಾ ‘ಪುಲಿಮುರುಗನ್‌’ ಸಿನಿಮಾ ‘ಅತಿದೊಡ್ಡ 3ಡಿ ಸ್ಕ್ರೀನಿಂಗ್‌’ ಸಿನಿಮಾ ಎನಿಸಿಕೊಳ್ಳುವ ಮೂಲಕ ವಿಶ್ವ ದಾಖಲೆ ಬರೆಯಲು ಸಜ್ಜಾಗಿದೆ.

ಸದ್ಯ ಹಾಲಿವುಡ್‌ ಚಿತ್ರ ‘ಮೆನ್‌ ಇನ್‌ ಬ್ಲಾಕ್‌ 3’ ಹೆಸರಿನಲ್ಲಿರುವ ಆ ದಾಖಲೆಯನ್ನು ಅಳಿಸಲು ಈಗಾಗಲೇ ವೇದಿಕೆ ಸಜ್ಜಾಗಿದ್ದು, ಕೇರಳದ ಅಂಗಮಾಲಿಯಲ್ಲಿರುವ ಎಡಿಎಲ್‌ಯುಎಕ್ಸ್‌ ಕನ್ವೆನ್ಷನ್‌ ಹಾಲ್‌ನಲ್ಲಿ ಇದೇ ಏಪ್ರಿಲ್‌ 12ಕ್ಕೆ ಸಿನಿಮಾ ಪ್ರದರ್ಶನ ಕಾಣಲಿದೆ.

ಭಾರತದ ಅತಿದೊಡ್ಡ ಡಿಜಿಟಲ್‌ ಸಿನಿಮಾ ವಿತರಕ ಸಂಸ್ಥೆಯಾಗಿರುವ ಯುಎಫ್‌ಒ(ಅನ್ಐಡೆಂಟಿಫೈಡ್‌ ಫ್ಲೈಯಿಂಗ್‌ ಆಬ್ಜೆಕ್ಟ್‌) ಮೂವೀಸ್‌ ಪ್ರದರ್ಶನದ ಹೊಣೆ ಹೊತ್ತಿದೆ.

ಈ ಹಿಂದೆ ಬರ್ಲಿನ್‌ನ ಒ2 ವರ್ಲ್ಡ್‌ನಲ್ಲಿ ಪ್ರದರ್ಶಿಸಲಾಗಿದ್ದ ‘ಮೆನ್‌ ಇನ್‌ ಬ್ಲಾಕ್‌ 3’ ಸಿನಿಮಾವನ್ನು 6819 ಜನರು ವೀಕ್ಷಿಸಿದ್ದರು. ಪುಲಿ ಮುರುಗನ್‌ ಚಿತ್ರವನ್ನು 10000 ಸಿನಿಪ್ರಿಯರು ಕುಳಿತು ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT