ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಾಯಿತಿ ದರದಲ್ಲಿ ಮೇವು ವಿತರಣೆ

Last Updated 12 ಏಪ್ರಿಲ್ 2017, 6:35 IST
ಅಕ್ಷರ ಗಾತ್ರ

ಹನೂರು: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಪಶುಸಂಗೋಪನಾ ಇಲಾಖೆಯು ವಿವಿಧೆಡೆ ಮೇವು ಬ್ಯಾಂಕ್ ಸ್ಥಾಪಿಸಿ ರಿಯಾಯಿತಿ ದರದಲ್ಲಿ ರೈತರಿಗೆ ಮೇವು ವಿತರಿಸುತ್ತಿದೆ.  ರೈತರಿಗೆ ಪ್ರತಿ ಕೆಜಿ ₹ 2ರಂತೆ ಪುಡಿ ಮಾಡಿದ ಜೋಳದ ಕಡ್ಡಿಯನ್ನು ವಿತರಿಸಲಾಗುತ್ತಿದೆ.

ಆರಂಭದ ದಿನವೇ 120 ರೈತರ ಜಾನುವಾರುಗಳಿಗೆ ಸುಮಾರು 12 ಟನ್ ಮೇವು ವಿತರಿಸಲಾಗಿದೆ. ಬರುವ ದಿನ ಗಳಲ್ಲಿ  ಅವಶ್ಯವಿರುವ ಇತರ ಕಡೆಗೂ ಹಂತಹಂತವಾಗಿ ಮೇವು ಪೂರೈಸ ಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಮೊದಲ ಹಂತವಾಗಿ ಹನೂರು ಪಟ್ಟಣದಲ್ಲಿ ಮೇವು ಪೂರೈಕೆ ಆಗುತ್ತಿದೆ. ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದುಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟರಾಮು ತಿಳಿಸಿದರು.

‘ಈ ಹಿಂದೆ ಮಾರ್ಟಳ್ಳಿ ಗ್ರಾಮದಲ್ಲಿ ಮೇವು ಬ್ಯಾಂಕ್ ತೆರೆದು 82 ಟನ್ ಮೇವು ವಿತರಿಸಲಾಗಿದೆ. ಅವಶ್ಯಕತೆ ಯಿರುವ ಗ್ರಾಮಗಳಲ್ಲಿ ಮೇವುಬ್ಯಾಂಕ್ ತೆರೆದು ರಿಯಾಯಿತಿ ದರದಲ್ಲಿ ಮೇವು ವಿತರಿಸಲಾಗುವುದು. ಮೇವಿನ ಕೊರತೆ ವ್ಯಾಪಕವಾಗಿರುವುದರಿಂದ ರೈತರು ಮೇವು ಪೋಲು ಮಾಡದೆ ಸಮರ್ಪಕ ವಾಗಿ ಬಳಸಿಕೊಳ್ಳಬೇಕು’ ಎಂದರು.

ಗಾಣಿಗಮಂಗಲ, ಶಾಗ್ಯ, ಕಳ್ಳಿ ದೊಡ್ಡಿ, ಅರಬಗೆರೆ, ಹೊಸಳ್ಳಿ, ಪೊನ್ನಾಚಿ, ಮರೂರು, ಅಸ್ತೂರು, ಮಿಣ್ಯಂ, ಯರಂಬಾಡಿ, ಹಳೆಯೂರು, ಕೊಂಬುಡಿಕ್ಕಿ, ಮಲೆಮಹದೇಶ್ವರ ಬೆಟ್ಟ, ಚಂಗಡಿ, ಎಂ.ಎಸ್. ದೊಡ್ಡಿ, ವಡಕೆಹಳ್ಳಿ ಹಾಗೂ ಕೌದಳ್ಳಿ ಗ್ರಾಮಗಳಲ್ಲಿ ಮೇವು ಬ್ಯಾಂಕ್ ತೆರೆಯುವಂತೆ ರೈತರು ಮನವಿ ಮಾಡಿದ್ದಾರೆ ಎಂದು ಕೌದಳ್ಳಿ ಪಶು ವೈದ್ಯಾಧಿಕಾರಿ ಡಾ.ಸಿದ್ದರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT