ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಟ್ಟಿಯಾದ ಚಳವಳಿ ಕಟ್ಟುವ ಅವಶ್ಯಕತೆ ಇದೆ

Last Updated 13 ಏಪ್ರಿಲ್ 2017, 6:12 IST
ಅಕ್ಷರ ಗಾತ್ರ

ಮಂಡ್ಯ: ‘ಬಿ.ಆರ್‌. ಅಂಬೇಡ್ಕರ್ ಪ್ರಶಸ್ತಿ ಲಭಿಸಿರುವುದರಿಂದ ಜವಾಬ್ದಾರಿ ಹೆಚ್ಚಾಗಿದೆ. 38 ವರ್ಷಗಳಿಂದ ಚಳವಳಿ ಯಲ್ಲಿ ಇದ್ದೇನೆ. ಚಳವಳಿಯ ಆರಂಭದಲ್ಲಿ ಇದ್ದಂತಹ ನೈತಿಕತೆ, ಗಟ್ಟಿತನ, ಬದ್ಧತೆ ಗೋಚರಿಸುತ್ತಿಲ್ಲ. ಚಳವಳಿ ದಿಕ್ಕು ತಪ್ಪು ತ್ತಿರುವ ಸಂದರ್ಭದಲ್ಲಿ ಅಂಬೇಡ್ಕರ್‌ ಆದರ್ಶ ನಿಜವಾದ ಚಳವಳಿ ಕಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ಹೀಗೆಂದು ಬಿ.ಆರ್‌.ಅಂಬೇಡ್ಕರ್‌ ಪ್ರಶಸ್ತಿ ಪುರಸ್ಕೃತ ಗುರುಪ್ರಸಾದ್‌ ಕೆರೆಗೋಡು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜಕೀಯ ಕ್ಷೇತ್ರ ಬೇಡ ಎಂದು ಚಳವಳಿ ಕಟ್ಟಿದ್ದೆವು. ಕಾಂಗ್ರೆಸ್‌, ಬಿಜೆಪಿ ವಿರೋಧ ಮಾಡಿದ್ದೇವೆ. ಜನತಾ ಪಕ್ಷ ಬೆಂಬಲ ನೀಡಿದ್ದೆವು. ಅದರಲ್ಲಿ ಎಲ್ಲ ಸಮುದಾಯದ ನಾಯಕರು ಇದ್ದರು. ತೃತೀಯ ಶಕ್ತಿ ಆಗಲಿ ಎಂಬುದಿತ್ತು. ಅಧಿಕಾರವೂ ಸಿಕ್ಕಿತ್ತು. ಮುಂದೆ ಅದು ಕುಟುಂಬದ ನೆಲೆಗಟ್ಟಿಗೆ ಬಂದು ನಿಂತಿತು. ಬಿಜೆಪಿ ಪ್ರಬಲ ಆಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್‌ ಬೆಂಬಲಿಸುವಂತೆ ಆಗಿದೆ ಎಂದರು.

‘ಸೇವಾ ಕ್ಷೇತ್ರವಾಗಿದ್ದ ರಾಜಕಾರಣ ಕಲುಷಿತಗೊಂಡಿದೆ. ಜನಪರ ರಾಜಕಾರಣ ಮಾಡುವ ಅವಶ್ಯಕತೆ ಇದೆ. ಲೂಟಿಕೋರರು, ವಂಚಕರು, ಕೋಮುವಾದಿಗಳು ರಾಜಕೀಯವನ್ನು ಬಳಸಿಕೊಳ್ಳುತ್ತಿದ್ದಾರೆ. ನಿಜ ಅರ್ಥದ ಪ್ರಜಾಪ್ರಭುತ್ವ ಬರಬೇಕಿದೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಸವಾಲಿನ ಕೆಲಸ ನಮ್ಮ ಮುಂದಿದೆ’ ಎಂದರು.

ದಲಿತ ಸಂಘರ್ಷ ಸಮಿತಿಯಲ್ಲಿ ದಲಿತೇತರರನ್ನು ಒಂದಾಗಿಸಿಕೊಳ್ಳುವ ಕೆಲಸ ಮಾಡಿದ್ದೇವೆ. ಎಲ್ಲ ಗಮನದ ಲ್ಲಿ ಇಟ್ಟುಕೊಂಡು  ಆಯ್ಕೆ ಮಾಡಿ ದ್ದಾರೆ ಎನಿಸುತ್ತದೆ ಎಂದರು.ಹೋರಾಟದ ಹಾದಿ: ಕಳೆದ ನಾಲ್ಕು ದಶಕಗಳ ಕಾಲ ಜನಪರ ಹೋರಾಟ ಮಾಡಿಕೊಂಡು ಬಂದಿದ್ದಾರೆ.

ಹೋಬಳಿಗೊಂಡು ವಸತಿ ಶಾಲೆ, ಭೂಹೀನ ಬಡವರಿಗೆ ಬೂಮಿಗಾಗಿ ಹೋರಾಟ, ಚಂದ್ರಗುತ್ತಿ ಬೆತ್ತಲೆ ಸೇವೆ, ದೇವದಾಸಿ ಪದ್ಧತಿ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.ಬೆಂಡಿಗೇರಿ ಮಲ ಪ್ರಕರಣ, ಬದನ ವಾಳು, ಕಂಬಾಲಪಲ್ಲಿ, ಮೈಸೂರಿನ ಸರಗೂರು–ಹಂಚಿಪುರ ದಲಿತರ ಕಗ್ಗೊಲೆ ಪ್ರಕರಣ, ಮದ್ದೂರಿನ ಆಬಲವಾಡಿಯ ಮರ್ಯಾದೆಗೇಡು ಹತ್ಯೆ ಪ್ರಕರಣಗಳಲ್ಲಿ ಹೋರಾಟ ಮಾಡಿದ್ದಾರೆ.ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾಗಿದ್ದಾರೆ. ಸಾಕ್ಷರತಾ ಆಂದೋಲನದಲ್ಲಿ ಕೆಲಸ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT