ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ಗೆ ವಿಶ್ವವ್ಯಾಪಿ ಜನಮನ್ನಣೆ ಸಿಗುತ್ತಿದೆ: ಶಾಸಕ ಅಭಯಚಂದ್ರ ಜೈನ್‌

Last Updated 15 ಏಪ್ರಿಲ್ 2017, 6:14 IST
ಅಕ್ಷರ ಗಾತ್ರ

ಕುಂದಾಪುರ: ‘ವಿದೇಶದಲ್ಲಿ ಹುಟ್ಟಿದ ಕ್ರಿಕೆಟ್ ಇಂದು ವಿಶ್ವ ವ್ಯಾಪಿಯಾಗಿದೆ. ಎಲ್ಲ ವರ್ಗದ ಜನರ ಆಕರ್ಷಣೆಯ ಪಂದ್ಯವಾಗಿರುವ ಕ್ರಿಕೆಟ್ ಹಾಗೂ ಇತರ ಕ್ರೀಡೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದರಿಂದಾಗಿ ದೇಹಕ್ಕೆ ವ್ಯಾಯಾಮದೊಂದಿಗೆ ಇತರರಲ್ಲಿ ಪ್ರೀತಿ ಬೆಳೆಯುತ್ತದೆ’ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಅಭಯಚಂದ್ರ ಜೈನ್ ಅಭಿಪ್ರಾಯ ಪಟ್ಟರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಸ್ಥಳೀಯ ಟಾರ್ಪೆಡೋಸ್ ತಂಡದ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ ‘ಟಿಪಿಎಲ್-2017’ ಅಂತರ ರಾಷ್ಟ್ರೀಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ರಿಕೆಟ್ ಆಟಕ್ಕೆ ಹೆಸರುವಾಸಿ ಯಾಗಿದ್ದ ಕುಂದಾಪುರದ ಚಕ್ರವರ್ತಿ ಹಾಗೂ ಟಾರ್ಪೆಡೋಸ್ ಸಂಸ್ಥೆಗಳ ಕ್ರೀಡಾ ಪ್ರೋತ್ಸಾಹ ಶ್ಲಾಘನೀಯ. ವಿದೇ ಶದಲ್ಲಿ ದುಡಿಯುತ್ತಿರುವ ನಮ್ಮ ಊರಿನ ಯುವಕರನ್ನು ಈ ಪಂದ್ಯದ ಮೂಲಕ ಇಲ್ಲಿ ಸೆಳೆಯುವ ಪ್ರಯತ್ನ ಆಗಿದೆ. ದುಡಿ ಯುಮೆ ಜತೆಯಲ್ಲಿ ಕ್ರಿಕೆಟ್ ಬೆಳೆಸುವ ಯುವಕರ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸುವುದಾಗಿ’ ಅವರು ಹೇಳಿದರು.

ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಸಾರಂಗ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕುಂದಾಪುರ ಏಜುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ, ಉದ್ಯಮಿಗಳಾದ ಸದಾನಂದ ನಾವುಡ, ಗಣೇಶ್ ಕಾಮತ್, ರಮೇಶ್ ಶೆಟ್ಟಿ, ನಾಗಭೂಷಣ ರೆಡ್ಡಿ, ಶಾಂತಾ ರಾಮ್ ಶೆಟ್ಟಿ ಮಂಗಳೂರು, ಮಂಗಳೂರು ಮಹಾನಗ ರಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ, ಮೂಡಾ ಸದಸ್ಯ ವಸಂತ ಬರ್ನಾಡ್ ಮಂಗಳೂರು, ಇಬ್ರಾಹಿಂ ಮೂಲ್ಕಿ, ಡಾ.ದಿಶಾ ದಿನಕರ್, ಟಾರ್ಪೆಡೋಸ್ ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿ ಇದ್ದರು.

ಹಿರಿಯ ಕ್ರಿಕೆಟ್ ಆಟಗಾರ ಹರಿಪ್ರಸನ್ನ ಪಿ ಭಟ್ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಉದ್ಯಮಿ ಇಬ್ರಾಹಿಂ ಗಂಗೊಳ್ಳಿ ಅವರನ್ನು ಗೌರವಿಸಲಾಯಿತು.ಟಾರ್ಪೆಡೋಸ್ ಸಂಸ್ಥೆಯ ಗೌರವಾಧ್ಯಕ್ಷ ವಿಜಯನಾಥ್ ಹೆಗ್ಡೆ ಸ್ವಾಗತಿಸಿದರು, ವಿಲಾಸ್ ಹೆಗ್ಡೆ ಬೆಂಗಳೂರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT