ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣದ ಮೂಲಕ ಅಸ್ಪೃಶ್ಯತೆ ನಿವಾರಣೆ’

Last Updated 15 ಏಪ್ರಿಲ್ 2017, 6:27 IST
ಅಕ್ಷರ ಗಾತ್ರ

ಕುಂದಾಪುರ: ‘ಶಿಕ್ಷಣದಿಂದ ಸಮಾನತೆ ನಿರ್ಮಾಣ ಸಾಧ್ಯ ಎಂಬ ಪರಿಕಲ್ಪನೆ ನೀಡಿದ ಮಹಾನ್‌ ನಾಯಕ ಡಾ. ಅಂಬೇಡ್ಕರ್‌’ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಸಿ.ಟಿ ಹೇಳಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ಶಾಖೆ ಆಶ್ರಯದಲ್ಲಿ ಡಾ.ಬಾಬಾ ಸಾಹೇಬ್ ಆಂಬೇಡ್ಕರ್ ಜನ್ಮ ದಿನಾಚರಣೆ ನಿಮಿತ್ತ ಶುಕ್ರವಾರ ಇಲ್ಲಿನ ಶಾಸ್ತ್ರಿ ಸರ್ಕಲ್‌ನಲ್ಲಿ ನಮ್ಮ ಭೂಮಿ, ನಮ್ಮ ಹಕ್ಕು ಜಾಗೃತೆಗಾಗಿ ಹೊರಟ ಜೈ ಭೀಮ್ ರ್‍್ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ, ಡಿವೈಎಸ್‌ಪಿ ಪ್ರವೀಣ್ ಎಚ್.ನಾಯ್ಕ್, ತಹಶೀಲ್ದಾರ್ ಜಿ,ಎಂ.ಬೋರ್ಕರ್,  ಡಾ.ಎಂ.ವಿ. ಕುಲಾಲ್, ಡಾ.ರಂಜನ್ ಕುಮಾರ್ ಶೆಟ್ಟಿ, ಡಾ.ಭಾಸ್ಕರ್ ಆಚಾರ್ಯ, ವಕೀಲ ಸತೀಶ್ ಕಾಳಾವರ್ಕರ್, ಉದ್ಯಮಿ ಇಬ್ರಾಹಿಂ ಸಾಹೇಬ್ ಕೋಟ, ತಾಲ್ಲೂಕು ಪಂಚಾಯಿತಿ ಇ ಒ ಚೆನ್ನಪ್ಪ ಮೊಯಿಲಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕೃಷ್ಣ ಶೆಟ್ಟಿ, ದ.ಸಂ.ಸಮಿತಿ ಜಿಲ್ಲಾ ಸಂಘ ಟನಾ ಸಂಚಾಲಕ ವಾಸುದೇವ ಮುದೂರು, ತಾಲ್ಲೂಕು ಮಹಿಳಾ ಒಕ್ಕೂಟ ಸಂಚಾಲಕಿ ಗೀತಾ ಸುರೇಶ್ ಕುಮಾರ್, ಜಿಲ್ಲಾ ಸಮಿತಿ ಸದಸ್ಯ ಚಂದ್ರ ಹಳಗೇರಿ, ಉಡುಪಿ ದಲಿತ ಸಂಘರ್ಷ ಸಮಿತಿಯ ಸುರೇಶ್ ಬೈಂದೂರು, ತಾಲ್ಲೂಕು ಕಾರ್ಮಿಕ ಘಟಕದ ಧರ್ಮರಾಜ್ ಮೂದಲಿಯಾರ್ ಇದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಪ್ರಧಾನ ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರ್, ‘ಜಿಲ್ಲೆಯಲ್ಲಿ 400ಕ್ಕೂ ಮಿಕ್ಕ ಡಿಸಿ ಮನ್ನಾ ಭೂಮಿ ಯಿದ್ದು, ಎಸ್‌.ಸಿ, ಎಸ್‌.ಟಿ ಜನರಿಗೆ ಅದರ ಹಕ್ಕು ಸಿಕ್ಕಿಲ್ಲ. ಜೈ ಭೀಮ್‌ ರ್‍್ಯಾಲಿ ಮೂಲಕ ಡಿಸಿ ಮನ್ನಾ ಭೂಮಿ
ಯನ್ನು ಎಸ್‌.ಸಿ, ಎಸ್‌.ಟಿ  ಜನರಿಗೆ ನೀಡುವಂತೆ ಜಾಗೃತಿ ಮೂಡಿಸಲಾಗುತ್ತದೆ. ಎಸ್‌.ಸಿ, ಎಸ್‌.ಟಿ ಜನರ ಮೂಲ ಕಸಬು ಕೃಷಿಯಾಗಿದ್ದು, ಕೃಷಿ ನಾಶವಾಗುತ್ತಿರು ವುದರಿಂದ ಬದುಕು ಮೂರಾಬಟ್ಟೆಯಾಗುತ್ತಿದೆ. ಅಂಬೇಡ್ಕರ್‌ ಅವರ ಆಶಯದಂತೆ ಮಹಿಳೆಯರಿಗೂ ಸಮಾಜದಲ್ಲಿ ಸಮಾನ ಅವಕಾಶ, ಗೌರವ ಸಿಗಬೇಕೆಂದು ಎಂದು ನುಡಿದರು.ದಲಿತ ಸಂಘರ್ಷ ಸಮಿತಿಯ ಕುಂದಾಪುರ ತಾಲ್ಲೂಕು ಸಮಿತಿಯ ಅಧ್ಯಕ್ಷ ರಾಜು ಬೆಟ್ಟಿನಮನೆ ಅತಿಥಿಗಳನ್ನು ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT