ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದುಳಿದ ವರ್ಗಗಳ ಎಳ್ಗೆ ಅಗತ್ಯ’

Last Updated 15 ಏಪ್ರಿಲ್ 2017, 9:54 IST
ಅಕ್ಷರ ಗಾತ್ರ

ಸುರಪುರ: ‘ಸಂಗೊಳ್ಳಿ ರಾಯಣ್ಣ  ಬ್ರಿಗೇಡ್‌ ರಾಜಕಿಯೇತರ ಸಂಘಟನೆ. ಶೋಷಿತರ ಮತ್ತು ಹಿಂದುಳಿದ ವರ್ಗದ ವರ ಹಿತ ಕಾಪಾಡುವುದೇ ಸಂಘಟನೆಯ ಮೂಲ ಉದ್ದೇಶ. ಕೆ.ಎಸ್‌.ಈಶ್ವರಪ್ಪ ನೇತೃತ್ವದಲ್ಲಿ ಆರಂಭವಾದ ಈ ಸಂಘಟನೆ ಈಗ ಹೆಮ್ಮರವಾಗಿದೆ’ ಎಂದು ಬ್ರಿಗೇಡ್‌ನ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ವೇಣುಗೋಪಾಲ ಜೇವರ್ಗಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಸಂಗೊಳ್ಳಿ ರಾಯಣ್ಣ  ಬ್ರಿಗೇಡ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುರಪುರ ಸಂಸ್ಥಾನದ ಅರಸರಿಗೂ ಮತ್ತು ಸಂಗೊಳ್ಳಿ ರಾಯಣ್ಣಗೂ ಅವಿನಾ ಭಾವ ಸಂಬಂಧವಿತ್ತು. ಇಲ್ಲಿಯ ಬೇಡರ ಪಡೆ ನೆರವು ಕೋರಿದ್ದ ಸಂಗೊಳ್ಳಿ ರಾಯಣ್ಣ ನಮ್ಮ ಹೆಮ್ಮೆಯ ಯುಗ ಪುರುಷ. ಅವರ ಹೆಸರಿನಲ್ಲಿ ಬ್ರಿಗೇಡ್‌ ಆರಂಭಿಸಿರುವುದು ಸ್ತುತ್ಯಾರ್ಹ’ ಎಂದರು.

ಮುಖಂಡ ಮಲ್ಲೇಶಿ ಪಾಟೀಲ ನಾಗರಾಳ ಮಾತನಾಡಿ, ಈಶ್ವರಪ್ಪ ಅವರು ಬ್ರಿಗೇಡ್‌ನ್ನು ದೊಡ್ಡಮಟ್ಟದಲ್ಲಿ ಸಂಘಟಿಸಿದ್ದಾರೆ. ಬ್ರಿಗೇಡ್‌ನ ಕಾರ್ಯ ಕ್ರಮಗಳಲ್ಲಿ ದಾಖಲೆ ಮಟ್ಟದಲ್ಲಿ ಜನ ಸೇರುತ್ತಿರುವುದು ಸಂಘಟನೆಯ ಮಹ ತ್ವಕ್ಕೆ ಸಾಕ್ಷಿಯಾಗಿದೆ.

ಜೂನ್ ತಿಂಗಳಲ್ಲಿ ನಗರದಲ್ಲಿ ಜಿಲ್ಲಾ ಮಟ್ಟದ ಬೃಹತ್‌ ಸಮಾವೇಶ ಹಮ್ಮಿ ಕೊಳ್ಳಲಾಗುವುದು ಎಂದರು.ವನವಾಸಿ ಕಲ್ಯಾಣ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜಾ ಪಿಡ್ಡನಾಯಕ, ಭೀಮರಾವ ರಫಗಾರ್, ಮಲ್ಲಣ್ಣ ಶಾರದಹಳ್ಳಿ ಮಾತನಾಡಿದರು. ಬ್ರಿಗೇಡ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ಸಾಯಬಣ್ಣ ನಂದಿಹಳ್ಳಿ, ಪ್ರಧಾನ ಕಾರ್ಯದರ್ಶಿ ಶರಭಣ್ಣ ರಸ್ತಾಪುರ, ಮುಖಂಡರಾದ ಮಲ್ಲು ಹೂಗಾರ, ತಿಮ್ಮಪ್ಪನಾಯಕ, ತಿಪ್ಪಣ್ಣ ಮ್ಯಾಕಲ್, ವಿಠ್ಠಲಸಿಂಗ್, ಜಮಾದಾರ್ ಆಲ್ದಾಳ, ಶೇಖಪ್ಪ ಕನ್ನೆಳ್ಳಿ, ಮಲ್ಲಪ್ಪ ಕನ್ನೆಳ್ಳಿ, ತಿರುಪತಿ ದೊರೆ, ರಾಘವೇಂದ್ರನಾಯಕ ಅರಕೇರಿ.ಜೆ, ಯಂಕೋಬ, ಮೌನೇಶ, ಮರೆಪ್ಪ, ಬೊಮ್ಮನಳ್ಳಿ, ಭೀಮಣ್ಣ, ದೇವರಾಜ ನಾಯಕ, ರಾಮಣ್ಣನಾಯಕ, ಬಸವ ರಾಜ ಕವಡಿಮಟ್ಟಿ, ಅಂಬಯ್ಯ ದೊರೆ, ಹುಲಗಪ್ಪ ವಾಗಣಗೇರೆ, ಚಂದಾಸಾಬ ದೊಡ್ಡಮನಿ, ಸೋಮಣ್ಣ ದೇವತ್ಕಲ್, ಚಂದ್ರು ದೀವಳಗುಡ್ಡ, ವಿಶ್ವನಾಥ ಚಂದಲಾಪುರ ಇದ್ದರು.
ನೂತನಪದಾಧಿಕಾರಿಗಳು: ಬ್ರಿಗೇಡ್‌ನ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿ ಗಳನ್ನು ನೇಮಕ ಮಾಡಲಾಯಿತು.

ಶ್ರೀನಿವಾಸ ನಾಯಕ ಬೊಮ್ಮನಳ್ಳಿ–ಜಿಲ್ಲಾ ಘಟಕದ ಉಪಾಧ್ಯಕ್ಷ, ರಮೇಶ ನಂಬಾ–ತಾಲ್ಲೂಕು ಯುವ ಘಟಕದ ಅಧ್ಯಕ್ಷ, ಕೃಷ್ಣ ವೆಂಕಟಾಪುರ–ಪ್ರಧಾನ ಕಾರ್ಯದರ್ಶಿ, ಶಿವುಕುಮಾರ ಬಿಳ್ಹಾರ–ಕಾರ್ಯದರ್ಶಿ, ಪರಶುರಾಮ, ವಿಶ್ವನಾಥ ಮತ್ತು ಚಂದ್ಲಾಪುರ–ಕಾರ್ಯಕಾರಿಣಿ ಸದಸ್ಯರು ನೇಮಕಗೊಂಡಿದ್ದಾರೆ. ಸಭೆ ಬಳಿಕ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT