ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್ಥಿಕ ಶಕ್ತಿ ಕೇಂದ್ರವಾಗಿ ಪರಿವರ್ತನೆ’

Last Updated 16 ಏಪ್ರಿಲ್ 2017, 6:58 IST
ಅಕ್ಷರ ಗಾತ್ರ

ಮಂಗಳೂರು: ಕರ್ಣಾಟಕ ಬ್ಯಾಂಕ್‌ನ ನೂತನ ಆಡಳಿತ ನಿರ್ದೇಶಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮಹಾಬಲೇಶ್ವರ ಎಂ.ಎಸ್‌. ಅವರು, ಶನಿವಾರ ನಗರದ ಕರ್ಣಾಟಕ ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

ಬ್ಯಾಂಕ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷ ಪಿ. ಜಯರಾಮ್‌ ಭಟ್‌ ಅವ ರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ‘ಬ್ಯಾಂಕ್‌ ನಡೆಸಿಕೊಂಡು ಬರುತ್ತಿರುವ ಆರ್ಥಿಕ ಚಟುವಟಿಕೆ ಗಳನ್ನು ಮುಂದುವರಿಸಲಾಗುವುದು. ಪಿ. ಜಯರಾಮ್‌ ಭಟ್ಟರು ಹಾಕಿಕೊ ಟ್ಟಿರುವ ಯೋಜನೆಗಳನ್ನು ಸಮರ್ಪಕ  ಅನು ಷ್ಠಾನಕ್ಕೆ ತರಲಾಗುವುದು’ ಎಂದರು.

‘ಕರ್ಣಾಟಕ ಬ್ಯಾಂಕ್‌ ದೇಶದ ಅತ್ಯುತ್ತಮ ವಾಣಿಜ್ಯ ಸಂಸ್ಥೆಯಾಗಿ ಹೊರಹೊಮ್ಮಬೇಕು ಎನ್ನುವುದು ನನ್ನ ಪ್ರಥಮ ಆದ್ಯತೆ. ದೇಶದ ಶೇ 1 ರಷ್ಟು ಜನರ ಮೆಚ್ಚಿನ ಬ್ಯಾಂಕ್‌ ಆಗಿ ಪರಿವರ್ತನೆ ಆಗಬೇಕು. ಈ ನಿಟ್ಟಿನಲ್ಲಿ ಬ್ಯಾಂಕ್‌ ಅನ್ನು ಅರ್ಥಿಕ ಶಕ್ತಿ ಕೇಂದ್ರವಾಗಿ ಪರಿವರ್ತಿ ಸಲು ಶ್ರಮಿಸುತ್ತೇನೆ’ ಎಂದು ತಿಳಿಸಿದರು. 

‘ಆರ್ಥಿಕ ಕ್ಷೇತ್ರದಲ್ಲಿ ಚೇತರಿಕೆಯ ಲಕ್ಷಣಗಳು ಕಾಣುತ್ತಿದ್ದು, ಈ ಸಂದ ರ್ಭದಲ್ಲಿ ಬ್ಯಾಂಕ್‌ನ ಮಹತ್ತರ ಜವಾ ಬ್ದಾರಿ ವಹಿಸಿಕೊಳ್ಳುತ್ತಿರುವುದು ಸಂತಸ ತಂದಿದೆ. ಒಳ್ಳೆಯ ಅನುಭವ ಪಡೆಯುವ ಹಾಗೂ ಉತ್ತಮವಾಗಿ ಕಾರ್ಯನಿರ್ವ ಹಿಸುವ ಅವಕಾಶ ಒದಗಿಬಂದಿದೆ’ ಎಂದು ಹೇಳಿದರು.

ಸುಮಾರು 32 ವರ್ಷ ಕರ್ಣಾಟಕ ಬ್ಯಾಂಕಿನ ಆಡಳಿತ ಮತ್ತು ನಿರ್ವಹಣಾ ವಿಭಾಗದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಮಹಾಬಲೇಶ್ವರ ಎಂ.ಎಸ್‌. ಅವರು, ತಮ್ಮ ಮೇಲೆ ವಿಶ್ವಾಸ ಇರಿಸಿದ ಬ್ಯಾಂಕಿನ ನಿರ್ದೇಶಕ ಮಂಡಳಿ, ಬ್ಯಾಂಕ್‌ ನೌಕರರು, ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಇದಕ್ಕೂ ಮೊದಲು ಮಹಾಬಲೇ ಶ್ವರ ಎಂ.ಎಸ್‌., ಪಿ. ಜಯರಾಮ್‌ ಭಟ್‌ ಹಾಗೂ ಆಡಳಿತ ನಿರ್ದೇಶಕರು, ಬ್ಯಾಂಕಿ ನ ಸ್ಥಾಪಕರಿಗೆ ಗೌರವ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT