ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವನಿಯೋಜಿತ ಹಲ್ಲೆ: ಮಲ್ಲಿಕಾರ್ಜುನ ಆರೋಪ

Last Updated 16 ಏಪ್ರಿಲ್ 2017, 10:36 IST
ಅಕ್ಷರ ಗಾತ್ರ

ಹಾವೇರಿ: ‘ನಗರದ ಶಿವಬಸವೇಶ್ವರ ಜಾನುವಾರು ಮಾರುಕಟ್ಟೆಯಲ್ಲಿನ ಅನಧಿಕೃತ 14 ಶೆಡ್‌ಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದ ಕೆಲವು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ವರದಿ ಆಧಾರದ ಮೇಲೆ ಪರಿಶೀಲನೆಗೆ ತೆರಳಿದ ವೇಳೆ ಪೂರ್ವನಿಯೋಜಿತವಾಗಿ ಹಲ್ಲೆ ನಡೆಸಿ ದ್ದಾರೆ’ ಎಂದು ಹಾವೇರಿ ಎ.ಪಿ.ಎಂ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಹೇಳಿದರು.

ಎಪಿಎಂಸಿ ಅಧ್ಯಕ್ಷ ಮತ್ತು ಸಿಬ್ಬಂದಿ ಮೇಲಿನ ಹಲ್ಲೆಗೆ ಖಂಡನೆ ಹಾಗೂ ಎಪಿಎಂಸಿ ಆಸ್ತಿಯ ದುರ್ಬಳಕೆಗೆ ತಡೆ ಮತ್ತು ಒತ್ತುವರಿ ತೆರವಿಗೆ ಆಗ್ರಹಿಸಿ ನಗರ ದಲ್ಲಿ ಶನಿವಾರ ರೈತರು ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ನಮ್ಮ ಮೇಲೆ ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದೇನೆ. ಆದರೆ, ಅವರನ್ನು ಬಂಧಿಸುವಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ. ಅಷ್ಟೇ ಅಲ್ಲದೇ, ನನ್ನ ವಿರುದ್ಧವೇ ಸುಳ್ಳು ಆರೋಪದ ದೂರು ದಾಖಲಾಗಿದೆ. ಈಗ ಪೊಲೀಸ್‌ ಇಲಾಖೆಯೇ  ಸತ್ಯಾಸತ್ಯೆಗಳನ್ನು ಹೊರಗೆಡವ ಬೇಕಾಗಿದೆ’ ಎಂದರು.

‘ತಾಲ್ಲೂಕು ಪಂಚಾಯ್ತಿಯ ಮಾಜಿ ಸದಸ್ಯನೊಬ್ಬ ನನ್ನ ಮೇಲೆ ಪೂರ್ವ ನಿಯೋಜಿತ ಹಲ್ಲೆ ಮಾಡಿಸಿದ್ದಾನೆ. ಹಲ್ಲೆಗೆ ಪೂರ್ವ ತಯಾರಿ ಮಾಡಿಕೊಂಡ ವಿಡಿಯೋ ದೊರೆತಿದೆ. ಅದುವ್ಯಾಟ್ಸ್ ಆ್ಯಪ್‌ನಲ್ಲಿ ಹರಿದಾಡುತ್ತಿದೆ’  ಎಂದರು.ರೈತ ಸಿದ್ದಣ್ಣ ಮಲ್ಲಪ್ಪನವರ ಮಾತ ನಾಡಿ, ‘ಪ್ರಾಮಾಣಿಕವಾಗಿ ಕೆಲಸ ಮಾಡು  ಅಧ್ಯಕ್ಷರನ್ನು ಹತ್ತಿಕ್ಕುವ ರಾಜ ಕೀಯ ಹುನ್ನಾರ ಅಡಗಿದೆ’ ಎಂದರು. 

ಹಾನಗಲ್‌ ರಸ್ತೆಯ ಶಿವಬಸವೇಶ್ವರ ಜಾನುವಾರು ಮಾರುಕಟ್ಟೆಯಿಂದ ಹೊಸಮನಿ ಸಿದ್ದಪ್ಪ ವೃತ್ತದ ವರೆಗೆ ಜಾಥಾ ನಡೆಸಿದ ರೈತರು, ಬಳಿಕ ತಹಶೀಲ್ದಾರ್‌ ಜೆ.ಬಿ.ಮಜ್ಜಗಿ ಅವರಿಗೆ ಮನವಿ ನೀಡಿದರು.ರೈತ ಬೆಟ್ಟಪ್ಪ ಕುಳೇನೂರ, ಮಾರುತಿ ನಾಲ್ವಾಡಕರ, ಪರಮಪ್ಪ ಪಾಟೀಲ್‌, ಬೆಟ್ಟದಪ್ಪ ಮಲ್ಲವ್ವ, ನಾಗವ್ವ, ಶಿವನಗೌಡ, ವಿಜಯಕುಮಾರ್  ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT