ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರ ಹೆಗಲಿಗೆ ಸಮಾಜದ ಜವಾಬ್ದಾರಿ

ವಿಶ್ವಕರ್ಮ ಜಾಗೃತಿ ಸಮಾವೇಶದಲ್ಲಿ ಕೆ.ಪಿ.ನಂಜುಂಡಿ ಅಭಿಮತ
Last Updated 17 ಏಪ್ರಿಲ್ 2017, 6:16 IST
ಅಕ್ಷರ ಗಾತ್ರ
ಯಾದಗಿರಿ: ‘ಸಂಘಟನಾ ಕೊರತೆ ಯಿಂದಾಗಿ ವಿಶ್ವಕರ್ಮ ಸಮಾಜ ತುಳಿತ ಕ್ಕೊಳಗಾಗಿದ್ದು, ಪ್ರತಿ ಹಳ್ಳಿಗಳಿಂದ ಯುವ ಪಡೆಗಳ ಹೆಗಲಿಗೆ ಸಮಾಜ ಕಟ್ಟುವ ಮತ್ತು ಕಾಪಾಡುವ ಜವಾಬ್ದಾರಿಯನ್ನು ನೀಡಬೇಕು’ ಎಂದು ವಿಶ್ವಕರ್ಮ ಮಹಾ ಸಭಾ ರಾಜ್ಯ ಘಟಕದ ಅಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು.
 
ನಗರದ ವಿದ್ಯಾಮಂಗಲ ಮಂದಿರ ದಲ್ಲಿ ಭಾನವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಶ್ವಕರ್ಮ ಯುವ ಜಾಗೃತಿ ಸಮಾವೇಶ ಹಾಗೂ ರಾಜ್ಯಮಟ್ಟದ ವಧು–ವರರ ಅನ್ವೇಷಣೆಯ ಪೂರ್ವ ಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
 
‘ಸಮಾಜ ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕ ವಾಗಿ ಯೂ ಹಿಂದುಳಿದಿದೆ. ಇದರ ಜತೆಗೆ ಸಂಘಟನೆಯ ಕೊರತೆಯಿಂದಾಗಿ ಸಮಾ ಜದ ಜನರು ಏಳಿಗೆಯಾಗಲು ಸಾಧ್ಯ ವಾಗುತ್ತಿಲ್ಲ. ಸಮಾಜದಲ್ಲಿನ ನಿರಂತರ ಒಡಕುಗಳನ್ನು ಇತರರು ಸದುಪಯೋಗ ಪಡೆದುಕೊಳ್ಳುತ್ತಿರುವುದರ ಬಗ್ಗೆ ಸಮಾಜದ ನಾಗರಿಕರು ಎಚ್ಚೆತ್ತುಕೊಳ್ಳ ಬೇಕು’ ಎಂದು ಕರೆ ನೀಡಿದರು.
 
‘ಸಾಮಾಜಿಕ ಬದ್ಧತೆ ತೋರುವವರು ವಿಶ್ವಕರ್ಮ ಸಮಾಜದ ಬಗ್ಗೆ ಕಳಕಳಿ ವ್ಯಕ್ತಪಡಿಸುತ್ತಾರೆಯೇ ವಿನಾ ಎಂದೂ ಸೌಲಭ್ಯ, ಸವಲತ್ತು, ಅಧಿಕಾರ ವಹಿಸಿ ಕೊಟ್ಟಿಲ್ಲ’ ಎಂದು ಟೀಕಿಸಿದರು.
 
‘ವಿಶ್ವಕರ್ಮ ಸಮಾಜದ ಜನರು ಸ್ವಾಭಿಮಾನಿಗಳು. ಎಂದೂ ಯಾರ ಬಳಿಯೂ ಕೈಚಾಚುವವರಲ್ಲ. ಪೂಜಿಸುವವರಿಗೆ ದೇವರನ್ನು ನಿರ್ಮಿಸಿಕೊಡುವವರು ನಾವು. ಭೂಮಿಯಲ್ಲಿ ಹುದುಗಿರುವ ಲೋಹಗಳಿಗೆ ಮೆರುಗು ನೀಡಿ ಮೌಲ್ಯ ತಂದು ಕೊಡುವವರು ನಾವು.
 
ಹತ್ತಾರು ಮರಗಿಡಗಳಿಗೆ ಆಯುಷ್ಯ ಬರೆ ದಿಟ್ಟು ಪೂಜೆ ಮಾಡಿಸುವವರು ನಾವು. ಇಷ್ಟೆಲ್ಲಾ ಪ್ರತಿಭಾನ್ವಿತರಾದ ವಿಶ್ವಕ ರ್ಮ ಸಮಾಜದ ಜನರಿಗೆ ಸರ್ಕಾರಿ ಸೌಲಭ್ಯ, ಮೀಸಲಾತಿ ಸಿಕ್ಕಿದೆಯೇ ’ಎಂದು ಪ್ರಶ್ನಿಸಿದರು.
 
‘ರಾಜ್ಯದಲ್ಲಿ 45ಲಕ್ಷ ವಿಶ್ವಕರ್ಮ ಸಮಜಾದ ಜನಸಂಖ್ಯೆ ಇದೆ. ಆದರೆ, ಎಂದೂ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಸಮಾಜದಲ್ಲಿ ಒಗ್ಗಟ್ಟು ಮೂಡದೇ ಇರು ವುದು ಇಂದಿನ ಸಮಾಜದ ಸ್ಥಿತಿಗತಿಗೆ ಕಾರಣವಾಗಿದೆ. ಇನ್ನಾದರೂ ನಾವು ಬದಲಾಗಬೇಕು. ಸಮಾಜದ ಜವಾಬ್ದಾರಿ ಹೊತ್ತಾಗ ನನಗೆ 34 ವರ್ಷ ವಯಸ್ಸು. ಇಲ್ಲಿಗೆ 16 ವರ್ಷಗಳಿಂದ ಸಮಾಜ ಕಟ್ಟಲು ಹೋರಾಟ ಮಾಡಿದ್ದೇನೆ.
 
ಸಂಘಟನೆಯ ಹೋರಾಟದಿಂದಾಗಿ ಇಂದು ವಿಶ್ವಕರ್ಮ ಸಮಾಜ ನಿಗಮ, ಬೆಂಗಳೂರಿನಲ್ಲಿ ಸಮುದಾಯ ಭವನ, ಸಾರ್ವತ್ರಿಕ ವಿಶ್ವಕರ್ಮ ಜಯಂತಿ ಆಚರಣೆಯಂತಹ ಮಹತ್ವದ ಕಾರ್ಯಗಳು ನಡೆದಿವೆ.

ಆದರೂ ಸಂಘಟನೆಯ ಕೊರತೆ ಕಾಣಿಸುತ್ತಿದೆ. ಯುವಕರಿಗೂ ಸಮಾಜ ಕಟ್ಟುವ ಜವಾ ಬ್ದಾರಿ ನೀಡುವ ಉದ್ದೇಶದಿಂದಲೇ ಯುವ ಘಟಕ ಸಮಾವೇಶ ಹಮ್ಮಿಕೊಳ್ಳ ಲಾಗಿದೆ. ಅಂದು ವೇದಿಕೆಯಲ್ಲಿ 750 ಯುವಕರಿಗೆ ವೇದಿಕೆ ಕಲ್ಪಿಸುವ ಉದ್ದೇಶ ಇದೆ’ ಎಂದು ಹೇಳಿದರು.
 
ಮಾಜಿ ಶಾಸಕ ವೀರಬಸಂತರೆಡ್ಡಿ  ಮುದ್ನಾಳ ಮಾತನಾಡಿ,‘ಈ ಸಮಾಜ ಜನರು ಸ್ವಾಭಿಮಾನಿಗಳು. ಅದರೆ ಜತೆಗೆ ಸಮಾಜ ರಕ್ಷಿಸುವ ಕೆಲಸವನ್ನು ಮಾಡ ಬೇಕು’ ಎಂದು ಸಲಹೆ ನೀಡಿದರು.
 
ಮಾಜಿ ಶಾಸಕ ಚನ್ನಾರೆಡ್ಡಿಗೌಡ ತುನ್ನೂರು, ಐ.ಸಿ.ಪಂಚಾಳ ಅಫಜಲ ಪುರ, ದೇವೀಂದ್ರಪ್ಪ ಎಲ್‌.ವಿಶ್ವಕರ್ಮ, ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ, ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ತಡಿಬಿಡಿ, ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ ವಿಶ್ವಕರ್ಮ ಗುತ್ತರಗಿ, ಶೇಖರ್‌ ತಾತಾ ಮುಸ್ಟೂರು, ಮಹೇಶ್ ಶಾರದ ಹಳ್ಳಿ, ಬಸವರಾಜ, ರಮೇಶ್ ಹತ್ತಿಗೂ ಡೂರು, ಸಂತೋಷ್‌ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT