ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಮ್‌ಪಿಂಚ್‌ಗೆ 37 ವರ್ಷ!

Last Updated 17 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಈಗಂತೂ ಮನೆ ಮಂದಿಯೆಲ್ಲ ಒಂದೇ ರೀತಿಯ ಉಡುಪು ತೊಟ್ಟು ಸೇಮ್‌ ಪಿಂಚ್‌ ಎನ್ನುವ ಕಾಲ. ಆದರೆ ಇಲ್ಲೊಂದು ದಂಪತಿ ಮೂವತ್ತೇಳು ವರ್ಷಗಳಿಂದ ಒಂದೇ ತರಹದ ದಿರಿಸು  ತೊಡುವ ಮೂಲಕ ಗಮನಸೆಳೆದಿದ್ದಾರೆ. ಜಪಾನಿನ ಬೋನ್‌ ಮತ್ತು ಪೋನ್‌ ಮದುವೆಯಾದ ದಿನದಿಂದಲೂ ಒಂದೇ ರೀತಿಯ ಬಟ್ಟೆ ತೊಡುತ್ತಿರುವ ದಂಪತಿ.  

ಇವರಿಗೆ 60 ವರ್ಷವಾದರೂ ಇವರ ಮ್ಯಾಚಿಂಗ್‌ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಪ್ರೀತಿಸಿ ಮದುವೆಯಾಗಿರುವ ಇವರಿಬ್ಬರು ಒಟ್ಟಿಗೆ ಶಾಪಿಂಗ್‌ ಹೋಗಿ ಮನಮೆಚ್ಚುವ ಉಡುಪು ಕೊಂಡುಕೊಳ್ಳುತ್ತಾರೆ. ಇವರ ಜೀವನ ಪ್ರೀತಿಯನ್ನು ಕಂಡ ಮಂದಿ ಹೀಗೂ ಉಂಟೆ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. 

ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆ ತೆರೆದ ಮೇಲಂತೂ ಇವರ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. 75ಸಾವಿರಕ್ಕೂ ಹೆಚ್ಚು ಮಂದಿ ಈ ಜೋಡಿಯನ್ನು ಫಾಲೊ ಮಾಡುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT