ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗೆ ಇಓ ಹಾಜರಾಗದ್ದಕ್ಕೆ ಆಕ್ರೋಶ

Last Updated 18 ಏಪ್ರಿಲ್ 2017, 5:17 IST
ಅಕ್ಷರ ಗಾತ್ರ

ಶಿಗ್ಗಾವಿ: ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಸೋಮ­ವಾರ ಬೆಳಿಗ್ಗೆ ನಡೆಯಬೇಕಾದ ತಾಲ್ಲೂಕು ಪಂಚಾಯ್ತಿ ಸದಸ್ಯರ ಸಾಮಾನ್ಯ ಸಭೆ ಮಧ್ಯಾಹ್ನದವರೆಗೆ ಆರಂಭವಾಗಲಿಲ್ಲ. ಸಭೆಗೆ ಕಾರ್ಯನಿರ್ವಹಣಾಧಿಕಾರಿ (ಇಓ) ಜಿ.ಹನುಮಂತಪ್ಪ ಗೈರಾದ ಕಾರಣ ಸದಸ್ಯರು ಸಭಾಭವನದಲ್ಲಿ ಬಾರದೆ ಖಾಲಿ ಕುರ್ಚಿಗಳೇ ಕಾಣಿಸಿಕೊಂಡವು.

ಸಭೆ ನಡೆಸುವುದಾಗಿ 15 ದಿನಗಳ ಹಿಂದೆ ಪ್ರಕಟಿಸುವ ಮೂಲಕ ಸರ್ವ ಸದಸ್ಯರನ್ನು ಹಾಗೂ ತಾಲ್ಲೂಕು ಮಟ್ಟದ ಸರ್ವ ಅಧಿಕಾರಿಗಳನ್ನು ಕರೆಯಿಸ­ಲಾಗಿದೆ. ಆದರೆ ಸಭೆಗೆ ತಾಲ್ಲೂಕು ಪಂಚಾಯ್ತಿ ಇಓ ಗೈರುಹಾಜರಾಗಿದ್ದಾರೆ. ಕ್ಷೇತ್ರದ ಸಮಸ್ಯೆಗಳ ಕುರಿತು ಯಾರೊಂ­ದಿಗೆ ಚರ್ಚಿಸಬೇಕು ಎಂದು ತಡಸ ಕ್ಷೇತ್ರದ ಸದಸ್ಯ ರಾಜಕುಮಾರ ವೇರ್ಣೇ­ಕರ ಇಓ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ್ಯಾದಂತ ಜನರು ಬೇಸಿಗೆ ಬವಣೆ ಎದುರಿಸುತ್ತಿದ್ದಾರೆ. ಕುಡಿಯುವ ನೀರು ಸಿಗುತ್ತಿಲ್ಲ. ನೀರಿಗಾಗಿ ಹಾಹಾಕಾರ ನಡೆದಿದೆ. ಅದನ್ನು ಹೇಗೆ ನಿಭಾಯಿಸು­ವುದು ಎಂಬ ಅಂಶಗಳ ಕುರಿತು ಚರ್ಚಿಸಬೇಕಾಗಿತ್ತು. ಅಲ್ಲದೇ, ಮೂರು ತಿಂಗಳಿಂದ ಸಭೆ ನಡೆದಿಲ್ಲ. ಈ ರೀತಿ ದಿಢೀರನೆ ಇಓ ಗೈರುಹಾಜರಾದರೆ ಸದಸ್ಯರು ಮತ್ತು ಅಧಿಕಾರಿಗಳು ಏನು ಮಾಡಬೇಕು ಎಂದು ಸದಸ್ಯರಾದ ಈಶ್ವರ ಹರವಿ, ಗದಿಗೆವ್ವ ಹಿರೇಮಠ, ವಿಜಯಲಕ್ಷ್ಮಿ ಮುಂದಿನಮನಿ ಹರಿಹಾಯ್ದರು.

ಇಓ ಅವರು ತಾಲ್ಲೂಕು ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲರಾಗುತ್ತಿ­ದ್ದಾರೆ. ಅವರಿಗೆ ಆಡಳಿತ ನಡೆಸುವ ಸಾಮರ್ಥ್ಯವಿಲ್ಲ. ತಕ್ಷಣ ಅವರನ್ನು ವರ್ಗಾಯಿಸಬೇಕು ಎಂದು ಸದಸ್ಯ ಮಲ್ಲೇಶಪ್ಪ ದೊಡ್ಡಮನಿ ಆಗ್ರಹಿಸಿದರು.ಹೀಗಾಗಿ ಸಭೆ ಇದೇ 22ರಂದು ನಡೆಸುವುದಾಗಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪಾರವ್ವ ಆರೇರ್‌ ಪ್ರಕಟಿಸಿದರು. ಉಪಾಧ್ಯಕ್ಷೆ ಪದ್ಮಾವತಿ ಪಾಟೀಲ, ಸದಸ್ಯರು, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT