ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಗೆ ನಿರಾಸಕ್ತಿ: ಡಿವಿಎಸ್‌ ಬೇಸರ

ಡಾ.ನರಸಿಂಹಮೂರ್ತಿಗೆ ‘ಡಾ.ಪಾದೂರು ಗುರುರಾಜ ಭಟ್‌ ಸ್ಮಾರಕ ಪ್ರಶಸ್ತಿ’
Last Updated 18 ಏಪ್ರಿಲ್ 2017, 6:42 IST
ಅಕ್ಷರ ಗಾತ್ರ
ಉಡುಪಿ: ‘ದೇಶದಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಆದರೆ, ಯಾವುದನ್ನು ಗುರುತಿಸಬೇಕು, ಯಾವುದಕ್ಕೆ ಮಹತ್ವ ನೀಡಬೇಕು ಎನ್ನುವುದನ್ನು ನಾವು ಸರಿಯಾಗಿ ನಿರ್ವಹಿಸುತ್ತಿಲ್ಲ. ಅದೇ ನಮ್ಮ ದೊಡ್ಡ ಕೊರತೆ’ ಎಂದು ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಅಭಿಪ್ರಾಯಪಟ್ಟರು. 
 
ಡಾ.ಪಾದೂರು ಗುರುರಾಜ ಭಟ್‌ ಸ್ಮಾರಕ ಟ್ರಸ್ಟ್‌ ವತಿಯಿಂದ ನಗರದ ಪೂರ್ಣಪ್ರಜ್ಞ ಕಾಲೇಜಿನ ಸಭಾಂಗಣ ದಲ್ಲಿ ಸೋಮವಾರ ನಡೆದ ಕಾರ್ಯಕ್ರ ಮದಲ್ಲಿ ಇತಿಹಾಸ ಸಂಶೋಧಕ ಡಾ.ಎ.ವಿ. ನರಸಿಂಹಮೂರ್ತಿ ಅವರಿಗೆ ‘ಡಾ.ಪಾದೂರು ಗುರುರಾಜ ಭಟ್‌ ಸ್ಮಾರಕ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಮಾತನಾಡಿದರು. 
 
‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕೆಂಬ ನಿಟ್ಟಿನಿಂದ ಕೇಂದ್ರ ಸರ್ಕಾರ ಸಾಕಷ್ಟು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅಲ್ಲದೆ, ಪುರಾತತ್ವ ಇಲಾಖೆಯ ಸಂಶೋಧನೆ ಮತ್ತು ಅಧ್ಯಯನಕ್ಕೆ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ’ ಎಂದರು. 
 
‘ದೇಶದಲ್ಲಿ ಹಿಂದೆ ಸಂಶೋಧನೆ, ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಲಿಲ್ಲ. ಆದರೆ, ಈಗ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಹಾಗೆಯೇ ವಿಜ್ಞಾನ, ತಂತ್ರಜ್ಞಾನಕ್ಕೆ ಇನ್ನಷ್ಟು ಉತ್ತೇಜನ ನೀಡಿ, ಈ ಕ್ಷೇತ್ರದಲ್ಲಿ ದೇಶವನ್ನು ಜಗತ್ತಿನಲ್ಲಿಯೇ ಮುಂಚೂಣಿಗೆ ಕೊಂಡೊಯ್ಯಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ.
 
ಸಂಶೋಧನೆಗಳನ್ನು ನಡೆಸಿದಾಗ ಮಾತ್ರ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯ. ಆದರೆ, ಪ್ರಸ್ತುತ ವಿದ್ಯಮಾನವನ್ನು ಅವಲೋಕಿಸಿದಾಗ ಶೇ 0.15ರಷ್ಟು ವಿದ್ಯಾರ್ಥಿಗಳು ಮಾತ್ರ ಸಂಶೋಧನಾ ಕ್ಷೇತ್ರವನ್ನು ಆಯ್ದುಕೊಳ್ಳುತ್ತಿದ್ದಾರೆ.
 
ಇದು ನಮ್ಮ ದೇಶದ ದಯನೀಯ ಪರಿಸ್ಥಿತಿಯಾಗಿದ್ದು, ಈ ಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುನ್ನಡೆದಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’ ಎಂದು ತಿಳಿಸಿದರು.  
 
‘ಒಂದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು, ಅತ್ಯಂತ ಪ್ರಾಮಾಣಿಕತೆ ಮತ್ತು ಸರಳತೆಯಿಂದ ಅಧ್ಯಯನ ಕಾರ್ಯದಲ್ಲಿ ತೊಡಗಬೇಕು. ಇಲ್ಲದಿದ್ದರೆ ಧನಾತ್ಮಕ ಫಲಿತಾಂಶವನ್ನು ಕಂಡು ಕೊಳ್ಳಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಅಧ್ಯಯನ ಮಾಡಿದರೆ ಅಂತಹ ಅಧ್ಯಯನ ಪರಿಪೂರ್ಣತೆಯನ್ನು ಸಾಧಿ ಸುವುದಿಲ್ಲ. ಆಳವಾದ, ಎತ್ತರವಾದ, ಬಹಳಷ್ಟು ವಿಸ್ತಾರವಾದ ಅಧ್ಯಯನ ದಿಂದ ಮಾತ್ರ ನಿರೀಕ್ಷಿತ ಫಲಿತಾಂಶವನ್ನು ಪಡೆಯಬಹುದು’ ಎಂದರು. 
 
‘ಇಂತಹ  ಅಧ್ಯಯನವನ್ನು ಪಾದೂರು ಗುರುರಾಜ ಭಟ್‌ ಮಾಡಿ ತೋರಿಸಿದ್ದಾರೆ. ಅವರಂತಹ ಮಹಾನ್‌ ಸಂಶೋಧಕ ಪುರಾತತ್ವ ಇಲಾಖೆಗೆ ಸಿಗುವುದು ಕಷ್ಟ. ಪ್ರಶಸ್ತಿ ಯೋಗ್ಯರ ಹೆಸರಲ್ಲಿ ಯೋಗ್ಯರಿಗೆ ಹಸ್ತಾಂತರ ಆಗಬೇಕು. ಆಗ ಪ್ರಶಸ್ತಿಯ ಮೌಲ್ಯ, ಪರಿಕಲ್ಪನೆ ಇನ್ನಷ್ಟು ವಿಸ್ತಾರಗೊಳ್ಳುತ್ತದೆ. ಸಮಾಜಕ್ಕೆ ಒಳ್ಳೆಯ ಸಂಗತಿಗಳನ್ನು ಅಧ್ಯಯನದ ಮೂಲಕ ಮಾತ್ರ ತಿಳಿಸಲು ಸಾಧ್ಯ’ ಎಂದು ಅವರು ಹೇಳಿದರು. 
 
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇತಿಹಾಸ ಸಂಶೋಧಕ ಡಾ. ಎ.ವಿ. ನರಸಿಂಹಮೂರ್ತಿ, ‘ಹಿಂದಿನ ಕಾಲದಲ್ಲಿ ತುಳುನಾಡನ್ನು ಯಾರು ಗುರುತಿಸುತ್ತಿ ರಲಿಲ್ಲ. ತುಳುನಾಡಿಗೆ ಗೌರವ ಮತ್ತು ಘನತೆಯನ್ನು ತಂದುಕೊಟ್ಟವರು ಪಾದೂರು ಗುರುರಾಜ ಭಟ್‌. ಅವರಿಂದ ತುಳು ಸಂಸ್ಕೃತಿಗೆ ಉತ್ತಮ ಮನ್ನಣೆ ಲಭಿಸಿದೆ’ ಎಂದರು. 
 
ಕೇಂದ್ರ 14ನೇ ಹಣಕಾಸು ಆಯೋ ಗದ ಸದಸ್ಯ ಡಾ. ಎಂ.ಗೋವಿಂದ ರಾವ್‌, ಕರ್ನಾಟಕ ಮುಕ್ತ ವಿಶ್ವವಿದ್ಯಾಲ ಯದ ವಿಶ್ರಾಂತ ಕುಲಪತಿ ಡಾ. ಕೆ. ಸುಧಾ ರಾವ್‌, ಮಾಜಿ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್‌, ಟಸ್ಟ್‌ನ ಅಧ್ಯಕ್ಷೆ ಪಾರ್ವತಮ್ಮ ಉಪಸ್ಥಿತರಿದ್ದರು. ಟ್ರಸ್ಟ್‌ನ ಮುಖ್ಯಸ್ಥ ಪ್ರೊ. ಪಿ. ಶ್ರೀಪತಿ ತಂತ್ರಿ ಸ್ವಾಗತಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT