ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಕೊಲೇಟ್‌ ಕೊಟ್ರೆ ಕರಗುವ ಸುಶಾಂತ್‌!

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ಸುಶಾಂತ್‌ಸಿಂಗ್‌ ಅವರನ್ನು ನೀವು ಇಂಪ್ರೆಸ್‌ ಮಾಡಬೇಕಾ ಹಾಗಿದ್ದರೆ ಅವನಿಗೊಂದು ಚಾಕೊಲೇಟ್‌ ಕೊಡಿ’... ಹೀಗೆಂದು ಸುಶಾಂತ್‌ ರಹಸ್ಯವನ್ನು ಬಿಚ್ಚಿಟ್ಟವರು ನಟಿ ಕೀರ್ತಿ ಸೆನನ್‌.

‘ರಬ್ತಾ’ ಸಿನಿಮಾದ ಟ್ರೇಲರ್‌ ಬಿಡುಗಡೆ ಸಂದರ್ಭದಲ್ಲಿ ಅವರು ತಮ್ಮ ಸಹನಟನ ಇಷ್ಟ–ಕಷ್ಟಗಳ ಕುರಿತು ಮಾತನಾಡಿದರು. ‘ಸುಶಾಂತ್‌ಗೆ ಇಂಪ್ರೆಸ್‌ ಮಾಡುವುದು ಸುಲಭದ ಕೆಲಸ. ಚಾಕೊಲೇಟ್‌ ನೀಡಿದರೆ ಸಾಕು ಅವನ ಮನಸ್ಸು ಮಂಜಿನಂತೆ ಕರಗುತ್ತದೆ’ ಎಂದು ನಗೆ ಚೆಲ್ಲಿದರು ಕೀರ್ತಿ.

‘ಸಿನಿಮಾ ಚಿತ್ರೀಕರಣ ಮುಗಿದಿದ್ದರೂ, ಸುಶಾಂತ್‌ ಪಾತ್ರದೊಳಗೆ ಇದ್ದಾನೆ. ಪಾತ್ರ ನಿರ್ವಹಣೆಯಲ್ಲಿ ಆತ  ಅಷ್ಟು ತಲ್ಲೀನನಾಗಿದ್ದ’ ಎಂದು ಸುಶಾಂತ್‌ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸದ್ಯ ಬಾಲಿವುಡ್‌ನಲ್ಲಿ ಬಹು ಚರ್ಚೆಯಲ್ಲಿರುವ ಜೋಡಿ ಇದು. ರಬ್ತಾ ಸಿನಿಮಾದಲ್ಲಿ ಇವರಿಬ್ಬರ ಬಾಡಿ ಕೆಮೆಸ್ಟ್ರಿ ಸಖತ್‌ ಆಗಿ ಕೆಲಸ ಮಾಡಿದೆ ಎನ್ನುತ್ತಿದ್ದಾರೆ ಬಾಲಿವುಡ್‌ ಮಂದಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT