ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ಬೀಗ

Last Updated 19 ಏಪ್ರಿಲ್ 2017, 5:14 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ತಾಲ್ಲೂಕಿನ ಯರನಾಳ ಗ್ರಾಮದಲ್ಲಿ ಮಹಿಳೆಯರ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಗ್ರಾಮದ ಮಹಿಳೆಯರು ಮಂಗಳವಾರ ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಗ್ರಾಮದ ಬಸ್ ನಿಲ್ದಾಣದ ಮುಂಭಾಗದಿಂದ ಮೆರವಣಿಗೆ ಮೂಲಕ ಪಂಚಾಯ್ತಿ ಕಚೇರಿಗೆ ತೆರಳಿದ  ಪ್ರತಿಭಟ ನಾಕಾರರು ಬೀಗ ಹಾಕಿ ಅಹೋರಾತ್ರಿ ಧರಣಿ ಪ್ರಾರಂಭಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ಪ್ರಾಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಸರ್ಕಾರ ಪ್ರತಿ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಿಸಿ ನೈರ್ಮಲ್ಯ ಕಾಪಾಡಲು ಹೆಚ್ಚಿನ ಆದ್ಯತೆ ನೀಡುತ್ತಿದೆ. ಗ್ರಾಮದಲ್ಲಿ ಮಹಿಳೆ ಯರ ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ಸುಮಾರು 7 ವರ್ಷದಿಂದ ಗ್ರಾಮ ಪಂಚಾಯ್ತಿಗೆ ಅಲೆದಾಡಿದರು ಪ್ರಯೋ ಜನವಾಗಿಲ್ಲ. ಈ ವಿಷಯದಲ್ಲಿ ಸ್ಥಳೀಯ ವಾಗಿ ರಾಜಕಾರಣ ಮಾಡುತ್ತಿದ್ದು, ಪಿಡಿಓ ಸೇರಿದಂತೆ ಸಿಬ್ಬಂದಿ ರಾಜಕೀಯ ವ್ಯಕ್ತಿಗಳೊಂದಿಗೆ ಶ್ಯಾಮೀಲಾಗಿ ಮಹಿಳೆ ಯರ ಶೌಚಾಲಯ ನಿರ್ಮಾಣಕ್ಕೆ  ವಿಳಂಬ ನೀತಿ ಅನುಸರಿ ಸುತ್ತಿರುವುದು ಖಂಡನೀಯ ಎಂದರು.

ಅನ್ನಪೂರ್ಣ ಗುಳೇದ, ಸಾವಿತ್ರಿ ನಾಗರಾಳ ಮಾತನಾಡಿ, ಈ ಹಿಂದೆ 2017ರ ಫೆ.29 ರಂದು  ಕಾರ್ಯನಿರ್ವಾ ಹಕ ಅಧಿಕಾರಿಗಳ ನೇತೃತ್ವದಲ್ಲಿ  ಸಭೆ ಸೇರಿ ಶೌಚಾಲಯ ನಿರ್ಮಿಸಲು ಠರಾವು ಪಾಸು ಮಾಡಲಾಗಿತ್ತು. ಒಂದು ವಾರ ದಲ್ಲಿ ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರು ಅದು ಜಾರಿಗೆ ಬಂದಿಲ್ಲ ಎಂದು ಹೇಳಿದರು. ಗ್ರಾಮದಲ್ಲಿ ಮಹಿಳೆಯರಿಗೆ ಶೌಚಾ ಲಯ ಇಲ್ಲದೇ ಇರುವುದರಿಂದ ತೊಂದರೆ ಅನುಭವಿಸಬೇಕಾಗಿದೆ.

ಅಧಿಕಾರಿಗಳು ಶೌಚಾಲಯ ಕಾರ್ಯ ಆರಂಭಿಸುವವರೆಗೂ ಅಹೋ ರಾತ್ರಿ ಧರಣಿ ಮುಂದುವರೆಸುತ್ತೇವೆ ಎಂದರು. ಪ್ರತಿಭಟನೆಯಲ್ಲಿ  ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ರಾಠೋಡ, ಸಿದ್ರಾಮಪ್ಪ ಅಂಗಡಗೇರಿ, ಸೋಮನಗೌಡ ಪಾಟೀಲ, ಸಿದ್ದಪ್ಪ ನಾಗರಾಳ, ಭೀರಪ್ಪ ನಾಗರಾಳ, ಶಿವು ಕೋಣಿನ, ಚಂದ್ರಾಮ ತೆಗ್ಗಿ, ಹೊನ ಕೇರಪ್ಪ ತೆಲಗಿ, ಶರಣು ಇಟಗಿ, ಗಜಾನನ ನಾಗರಾಳ, ರುಕ್ಮಿಣಿ ನಾಗರಾಳ, ಸುಜಾತಾ ಕಾರಜೋಳ, ಸಿದ್ದವ್ವ ನಾಗ ರಾಳ, ಬೌರವ್ವ ಆಸಂಗಿ, ಮಹಾದೇವಿ ವಿವೇಕಿ, ಶಂಕ್ರೆಮ್ಮ ವಿವೇಕಿ, ಗೌರವ್ವ ಕೋಣಿನ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT