ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಟುಂಬಿಕ ಕ್ರೀಡಾಹಬ್ಬಕ್ಕೆ ಸಿದ್ಧತೆ ಪೂರ್ಣ

Last Updated 20 ಏಪ್ರಿಲ್ 2017, 6:25 IST
ಅಕ್ಷರ ಗಾತ್ರ

ಗೋಣಿಕೊಪ್ಪಲು:  ಬಾಳೆಲೆಯಲ್ಲಿ ಏ. 24ರಿಂದ ಆರಂಭವಾಗುವ ‘ಅಳ ಮೇಂಗಡ ಕಪ್’ ಕೊಡವ ಕೌಟುಂಬಿಕ ಕ್ರಿಕೆಟ್‌ ಟೂರ್ನಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ.ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಒಂದು ತಿಂಗಳ ಕಾಲ ಟೂರ್ನಿ ನಡೆಯಲಿದೆ. ಇದರ ಯಶಸ್ಸಿಗೆ ಟೂರ್ನಿ ಅಧ್ಯಕ್ಷ ಅಳ ಮೇಂಗಡ ಬೋಸ್‌ ಮಂದಣ್ಣ ಅವರ ನೇತೃತ್ವದಲ್ಲಿ ಕುಟುಂಬಸ್ಥರು ಟೊಂಕಕಟ್ಟಿ ನಿಂತಿದ್ದಾರೆ.

ಈ ಬಾರಿ ನೋಂದಾಯಿಸಿಕೊಂಡಿ ರುವ ತಂಡಗಳ ಸಂಖ್ಯೆ ಹೆಚ್ಚಿರುವುದ ರಿಂದ ಎರಡು  ನಿರಂತರವಾಗಿ ಶ್ರಮಿಸುತ್ತಿದ್ದಾರೆ. 2008ರಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಅಳ ಮೇಂಗಡ ಕುಟುಂಬಸ್ಥರು ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಯಶಸ್ವಿಯಾಗಿ ನಡೆಸಿದ್ದರು.ಟೂರ್ನಿ ಬಗ್ಗೆ ಅಪಾರ ತಿಳಿವಳಿಕೆ ಇರುವುದರಿಂದ ಮೇ 20ರ ವರೆಗೆ ನಡೆಯುವ ಕ್ರಿಕ್ರೆಟ್‌ ಟೂರ್ನಿಯನ್ನು ಬಾಳೆಲೆ ಕೇಂದ್ರದ  ಕ್ರೀಡಾ ಹಬ್ಬವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿ ಕೊಂಡಿದ್ದಾರೆ.

ಕ್ರಿಕೆಟ್‌ ಟೂರ್ನಿಯನ್ನು ಒಂದು ಕುಟುಂಬದವರು ನಡೆಸುತ್ತಿದ್ದರೂ ಇದರಲ್ಲಿ ಎಲ್ಲರೂ  ಪಾಲ್ಗೊಂಡು ಕ್ರೀಡೆಯ ಸವಿ ಅನುಭವಿಸಲು ಅವಕಾಶ ಮಾಡಿಕೊಡಲಾಗುವುದು. ಕ್ರೀಡಾ ಹಬ್ಬದಲ್ಲಿ ಸರ್ವರೂ ಭಾಗಿಯಾಗಬೇಕು ಎಂಬುದು ನಮ್ಮ ಇಚ್ಛೆಯಾಗಿದೆ ಎಂದು ಟೂರ್ನಿ ಅಧ್ಯಕ್ಷ ಅಳಮೇಂಗಡ ಬೋಸ್‌ ಮಂದಣ್ಣ ತಿಳಿಸಿದರು.ಅಳಮೇಂಗಡ ಕುಟುಂಬದಲ್ಲಿ ಸುಮಾರು 70  ಮನೆಗಳಿವೆ. ಇವರೆಲ್ಲ ಬಾಳೆಲೆ, ಕಾನೂರು, ಕೊಟ್ಟಗೇರಿ, ನಿಟ್ಟೂರು, ದೇವನೂರು, ಜಾಗಲೆ, ಚೂರಿಕಾಡ್‌ಗಳಲ್ಲಿ ನೆಲೆಸಿದ್ದಾರೆ. ಕುಟುಂಬದ  ಐನ್‌ಮನೆ ಕೊಟ್ಟಗೇರಿ ಯಲ್ಲಿದೆ. ಪ್ರತಿವರ್ಷ ಕುಟುಂಬಸ್ಥರು ಸೇರಿ ಏ. 15ರಂದು ಗುರುಕಾರೋಣನಿಗೆ ಗೌರವಸಲ್ಲಿಸುವ ಪದ್ಧತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ.

ಈ ಬಾರಿ ಸ್ವಯಂ ಇಚ್ಛೆಯಿಂದ 220  ತಂಡಗಳು ಪಾಲ್ಗೊಂಡಿವೆ. ಉದ್ಘಾಟನಾ ಸಮಾರಂಭ ಸ್ಥಳೀಯ ವಿಜಯಲಕ್ಷ್ಮೀ ಪದವಿ ಪೂರ್ವ ಕಾಲೇಜಿನ ಮೈದಾನ ದಲ್ಲಿ ಜರುಗಲಿದೆ.ಮೊದಲ 11 ದಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನ ದಲ್ಲಿಯೂ ಪಂದ್ಯಗಳು ಜರುಗಲಿವೆ. ಬಳಿಕ ಎಲ್ಲಾ ಪಂದ್ಯಗಳನ್ನು ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಮೈದಾನ ದಲ್ಲಿ ನಡೆಸಲಾಗುವುದು ಎಂದು ಟೂರ್ನಿ ಮಾಧ್ಯಮ ಸಂಚಾಲಕ ಎ.ಪಿ. ರಮೇಶ್‌ ಮಾಹಿತಿ ನೀಡಿದರು. ಅಳೆ ಮೇಂಗಡ ಕುಟುಂಬದ ಅಧ್ಯಕ್ಷ  ವಿವೇಕ್‌ ಕುಟುಂಬಸ್ಥರನ್ನು ಒಂದು ಗೂಡಿಸಿ ಟೂರ್ನಿ ಯಶಸ್ಸಿಗೆ ಮುಂದಾಗಿದ್ದಾರೆ.

2000ದಲ್ಲಿ ವಿರಾಜಪೇಟೆಯಲ್ಲಿ ಕೀತಿಯಂಡ ಕುಟುಂಬಸ್ಥರು ಟೂರ್ನಿಯನ್ನು ಮೊದಲ ಬಾರಿಗೆ ಆಯೋಜಿಸಿದ್ದರು. ಇರುವರೆಗೆ 17 ಟೂರ್ನಿಗಳು ನಡೆದಿದ್ದು ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ  4  ಟೂರ್ನಿಗಳು ನಡೆದಿವೆ. ಕಾಂಡೆರ, ಬಲ್ಲಿಮಾಡ, ಆದೇಂಗಡ, ಕೊಕ್ಕೆಂಗಡ ಕುಟುಂಬಸ್ಥರು ಟೂರ್ನಿ ಆಯೋಜಿಸಿದ್ದರು.ಇದೀಗ ಅಳಮೇಂಗಡ ಕಪ್‌ ಟೂರ್ನಿ 18 ನೆಯದಾಗಿದ್ದು ಬಾಳೆಲೆ ಯಲ್ಲಿ 5ನೆಯದ್ದಾಗಿದೆ.  ಇದುವರೆಗಿನ ಟೂರ್ನಿಯಲ್ಲಿ ಚಕ್ಕೆರ ಕುಟುಂಬಸ್ಥರು 6 ಬಾರಿ ಜಯಸಾಧಿಸಿದ್ದರೆ, ಕಾಣತಂಡ ಕುಟುಂಬಸ್ಥರು 5 ಬಾರಿ ಜಯಗಳಿಸಿ ದ್ದಾರೆ ಎನ್ನುತ್ತಾರೆ ಆಯೋಜಕರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT