ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜ್ಪೆ ವಿಮಾನ ನಿಲ್ದಾಣದಲ್ಲಿ ₹10.50 ಲಕ್ಷ ಮೌಲ್ಯದ ಚಿನ್ನದ ಬಿಸ್ಕಿಟ್‌ ವಶ

ವ್ಯಕ್ತಿಯ ಗುದದ್ವಾರದಲ್ಲಿದ್ದ ಚಿನ್ನದ ಬಿಸ್ಕಿಟ್
Last Updated 20 ಏಪ್ರಿಲ್ 2017, 11:57 IST
ಅಕ್ಷರ ಗಾತ್ರ

ಮಂಗಳೂರು: ದುಬೈನಿಂದ ಇಲ್ಲಿಯ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಾಸರಗೋಡಿನ ವ್ಯಕ್ತಿಯೊಬ್ಬರಿಂದ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಒಟ್ಟು ₹10.50 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಕಾಸರಗೋಡಿನ ಚಟ್ಟಂಚಾಲ್‌ ನಿವಾಸಿ ಅಬ್ದುಲ್‌ ರಜಾಕ್‌ ಎಂಬವರಿಂದ 24 ಕ್ಯಾರೆಟ್‌ನ 349.80 ಗ್ರಾಂ ತೂಕದ ನಾಲ್ಕು ಚಿನ್ನದ ಬಿಸ್ಕಿಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬುಧವಾರ ಸಂಜೆ 6.30ಕ್ಕೆ ಸ್ಪೈಸ್‌ ಜೆಟ್‌ ವಿಮಾನದ ಮೂಲಕ ಅಬ್ದುಲ್‌ ರಜಾಕ್‌, ನಗರಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು, ಚಿನ್ನವನ್ನು ವಶಕ್ಕೆ ಪಡೆದು, ಅಬ್ದುಲ್‌ ರಜಾಕ್‌ ಅವರನ್ನು ಬಂಧಿಸಿದ್ದಾರೆ. ಅಬ್ದುಲ್‌ ರಜಾಕ್‌ ತನ್ನ ಗುದದ್ವಾರದಲ್ಲಿ ಈ ಚಿನ್ನದ ಬಿಸ್ಕಿಟ್‌ಗಳನ್ನು ಬಚ್ಚಿಟ್ಟಿದ್ದು, ವೈದ್ಯರ ಸಹಾಯದಿಂದ ಇವುಗಳನ್ನು ಹೊರತೆಗೆಯಲಾಗಿದೆ. 

‘ನಾನು ನಿಯಮಿತವಾಗಿ ಚಿನ್ನದ ಸಾಗಾಟ ಮಾಡುತ್ತಿದ್ದೇನೆ. ವಿಮಾನ ನಿಲ್ದಾಣದಲ್ಲಿ ಬ್ಯಾಗ್‌ಗಳನ್ನು ಮಾತ್ರ ತಪಾಸಣೆ ಮಾಡುತ್ತಿದ್ದು, ಗುದದ್ವಾರದಲ್ಲಿ ಇಟ್ಟುಕೊಂಡು ಹಲವಾರು ಬಾರಿ ಚಿನ್ನದ ಕಳ್ಳಸಾಗಣೆ ಮಾಡಿದ್ದೇನೆ’ ಎಂದು ವಿಚಾರಣೆಯ ವೇಳೆ ಅಬ್ದುಲ್‌ ರಜಾಕ್‌ ಒಪ್ಪಿಕೊಂಡಿದ್ದಾರೆ. 

‘ಪಾಸ್‌ಪೋರ್ಟ್‌ ಪರಿಶೀಲಿಸಿದಾಗ, ನಿಯಮಿತವಾಗಿ ದುಬೈನಿಂದ ಮಂಗಳೂರು, ಮುಂಬೈ, ದೆಹಲಿ, ಅಹಮದಾಬಾದ್‌, ಚೆನ್ನೈ, ಕೊಚ್ಚಿ, ತಿರುವನಂತಪುರ, ಬೆಂಗಳೂರು, ಗೋವಾ ಮತ್ತು ಲಖನೌ ವಿಮಾನ ನಿಲ್ದಾಣಗಳಲ್ಲಿ ಇಳಿದಿರುವುದು ಪತ್ತೆಯಾಗಿದೆ’ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯದ ಮಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT