ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿರಿ’ ತಂದ ಮೆರುಗು

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮನೆ ನಿರ್ಮಾಣ ಮುಗಿದ ತಕ್ಷಣ ಮನೆಗೆ ಏನೆಂದು ಹೆಸರಿಡುವುದು ಎಂಬ ಚರ್ಚೆ ಆರಂಭವಾಯಿತು. ಮನೆ ಮಂದಿಯೆಲ್ಲ ಒಂದೊಂದು ಹೆಸರು ಸೂಚಿಸಿದರು. ಆದರೆ ಮನೆಗೆ ಕನ್ನಡದ್ದೇ  ಹೆಸರಿಡಬೇಕು ಜೊತೆಗೆ ಆ ಹೆಸರು ಚಿಕ್ಕದಾಗಿರಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. 

ಎಲ್ಲಾ ಸೇರಿ ‘ಸಿರಿ’ ಎಂಬ ಹೆಸರನ್ನು ಆಯ್ಕೆ ಮಾಡಿದೆವು. ಸಿರಿ ಎಂಬ ಪದಕ್ಕೆ ನಾನಾ ಅರ್ಥಗಳಿವೆ ಎಂಬುದು  ಈ ಆಯ್ಕೆಗೆ  ಕಾರಣ. 
ಮನೆಯ ಹೆಸರು ಆಕರ್ಷಕವಾಗಿ ಕಾಣಬೇಕು ಎಂಬುದನ್ನು ಮೊದಲೇ ಕಲಾವಿದನಿಗೆ ತಿಳಿಸಿದೆವು. ‘ಸಿ’ ಅಕ್ಷರಕ್ಕೆ ಮಂಡಿ ಮಡಚಿ ಮಹಿಳೆ ಕುಳಿತಿರುವ ಆಕಾರ ನೀಡಿದರು. ಆಕಾಶ, ಬೆಂಕಿ,  ಸೂರ್ಯ,  ನಕ್ಷತ್ರಗಳ ಮಧ್ಯದಲ್ಲಿರುವ ‘ಸಿರಿ’ ಮನೆಗೆ ಮತ್ತಷ್ಟು ಮೆರುಗು ನೀಡಿದೆ.

-ಡಾ.ಪದ್ಮಿನಿ ನಾಗರಾಜು, ಬನಶಂಕರಿ

ನಿಮ್ಮ ಮನೆ ಹೆಸರಿನ ಕಥೆ ನಮಗೆ ತಿಳಿಸಿ. ವಾಟ್ಸ್‌ಆ್ಯಪ್– 9513322931

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT