ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲ್ಲಿನ ಜತೆಗೆ ಸಾಲುಮರಗಳೂ ಆಹುತಿ!

Last Updated 21 ಏಪ್ರಿಲ್ 2017, 5:55 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ರಸ್ತೆ ಪಕ್ಕದ ಸಾಲುಮರಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುವ ಕೃತ್ಯ ನಡೆಸುತ್ತಿದ್ದಾರೆ. ಕಿಡಿಗೇಡಿ ಗಳ ಇಂತಹ ಕೃತ್ಯಕ್ಕೆ ಪ್ರಸಕ್ತ ಬೇಸಿಗೆಯಲ್ಲಿ ಇದುವರೆಗೂ ನೂರಾರು ಸಾಲುಮರ ಗಳು ಆಹುತಿಯಾಗಿವೆ.ಸೈದಾಪುರದಿಂದ ಆರ್.ಹೊಸಳ್ಳಿ–ಬಳಿಚಕ್ರ–ಮೈಲಾಪುರ–ವರ್ಕನಹಳ್ಳಿಯ ಸಂಪರ್ಕ ರಸ್ತೆಯುದ್ದಕ್ಕೂ ಹೊಂಗೆ, ನೀಲ ಗಿರಿ, ಹೆಬ್ಬೇವು ಮರಗಿಡಗಳು ಹಸಿರು ಹೊತ್ತು ನಳನಳಿಸುತ್ತಿದ್ದವು. ಆದರೆ, ರಾತ್ರೋರಾತ್ರಿ ರಸ್ತೆಯುದ್ದಕ್ಕೂ ಇರುವ ಈ ಸಾಲುಮರಗಳಿಗೆ ಬೆಂಕಿ ಹಚ್ಚಿದ್ದಾರೆ. ಅದೇ ರೀತಿಯಲ್ಲಿ ಹತ್ತಿಕುಣಿ, ಯರ ಗೋಳ ಸಂಪರ್ಕ ರಸ್ತೆಗಳಲ್ಲಿನ ಮರಗಿಡ ಗಳೂ ಆಹುತಿಯಾಗಿವೆ.

ಅರಣ್ಯ ಇಲಾಖೆಯ ಪ್ರಾದೇಶಿಕ, ವಲಯ, ಉಪವಲಯ, ಸಾಮಾಜಿಕ ವಿಭಾಗಗಳಿಂದ ನರೇಗಾ, ವಿಶೇಷ ಅಭಿವೃದ್ಧಿ ಯೋಜನೆ ಅಡಿ ಜಿಲ್ಲೆಯಲ್ಲಿ ಅರಣ್ಯ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ ₹1.5 ಕೋಟಿ ಅನುದಾನ ಮಂಜೂರಾ ಗಿದೆ. ಮುಖ್ಯವಾಗಿ ರಸ್ತೆ ಇಕ್ಕೆಲದಲ್ಲಿ ಮರ ಗಳನ್ನು ಬೆಳೆಸಲು ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ ಶ್ರಮಿಸಿದ್ದರೂ, ಕಿಡಿ ಗೇಡಿಗಳ  ಇಂಥಾ ಕೃತ್ಯದಿಂದಾಗಿ ಜಿಲ್ಲೆ ಯಲ್ಲಿ ಅರಣ್ಯ ಅಭಿವೃದ್ಧಿ ಯೋಜನೆಗೆ ಹಿನ್ನಡೆ ಆಗುತ್ತಿದೆ ಎನ್ನುತ್ತಾರೆ ಅರಣ್ಯ ಸಿಬ್ಬಂದಿ.

ಯಾದಗಿರಿ–ವರ್ಕನಹಳ್ಳಿ ಸಂಪ ರ್ಕಿಸುವ ಮೂರು ಕಿಲೋ ಮೀಟರ್ ಹಾಗೂ ವರ್ಕನಹಳ್ಳಿ–ಮೈಲಾಪುರ ಸಂಪರ್ಕ ಮೂರು ಕಿಲೋ ಮೀಟರ್ ಉದ್ದಕ್ಕೂ ಸಾಮಾಜಿಕ ಅರಣ್ಯ ಇಲಾಖೆ ಒಟ್ಟು 600 ಗಿಡಗಳನ್ನು ನೆಟ್ಟಿದೆ. ಆದರೆ, ಕಿಡಿಗೇಡಿಗಳು ಇವಕ್ಕೂ ಬೆಂಕಿ ಇಟ್ಟಿರು ವುದರಿಂದ ಚಿಗುರು ಸಹಿತ ಗಿಡಗಳು ಸುಟ್ಟು ಭಸ್ಮವಾಗಿವೆ!ಇಡೀ ಜಿಲ್ಲೆಯಲ್ಲಿ ಶೇ 15ರಷ್ಟು ಮಾತ್ರ ಅರಣ್ಯ ಇದೆ. ಇದರಿಂದ ಪ್ರತಿ ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚುತ್ತಿದೆ. ಬೇಸಿಗೆಯಲ್ಲಿ ಹೆಚ್ಚುತ್ತಿರುವ ಉಷ್ಣಾಂಶ ತಗ್ಗಿಸಲು ಕನಿಷ್ಠ ಶೇ 30ರಷ್ಟು ಅರಣ್ಯ ಇರಲೇಬೇಕು ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.

ನಿರ್ವಹಣೆಯ ವೈಫಲ್ಯ: ರಸ್ತೆ ಪಕ್ಕ ಗಿಡನೆಟ್ಟು ಪೋಷಿಸಲು ಅರಣ್ಯ ಇಲಾಖೆ ಪ್ರತಿವರ್ಷ ಟೆಂಡರ್ ಕರೆಯುತ್ತದೆ. ಈ ಬಾರಿ ಟೆಂಡರ್‌ ಪ್ರಕ್ರಿಯೆಯಲ್ಲಿ ಯಾರೂ ಭಾಗವಹಿಸದೇ ಇರುವುದರಿಂದ ಅರಣ್ಯ ಇಲಾಖೆಯೇ ಗಿಡನೆಟ್ಟು ಪೋಷಿಸುವ ಹೊಣೆ ಹೊತ್ತಿದೆ. ಇಲಾಖೆ ನಿರ್ಲಕ್ಷ್ಯ ದಿಂದಾಗಿ ಇಂದು ನೂರಾರು ಗಿಡಗಳು ಕಿಡಿಗೇಡಿಗಳ ಕೃತ್ಯಕ್ಕೆ ಬಲಿಯಾಗಿವೆ. ಇಂತಹ ಕೃತ್ಯ ಪ್ರತಿ ಬೇಸಿಗೆಯಲ್ಲಿ ಘಟಿ ಸುತ್ತಿದ್ದರೂ, ಇಲಾಖೆ ಕೃತ್ಯಕ್ಕೆ ಕಾರಣ ರಾದವರ ಮೇಲೆ ಒಂದೂ ಪ್ರಕರಣ ದಾಖಲಿಸಿಲ್ಲ. ರೈತರೇ ಇಂಥ ಕೃತ್ಯಕ್ಕೆ ಕಾರಣ ಎಂದು ಅರಣ್ಯ ಇಲಾಖೆ ಅಧಿಕಾ ರಿಗಳು ಹೇಳುತ್ತಾರೆ. ಆದರೆ, ಅರಣ್ಯ ಇಲಾಖೆಯ ಈ ಆರೋಪವನ್ನು ರೈತರು ಒಪ್ಪುವುದಿಲ್ಲ.

‘ನಮ್ಮ ಬದುವಿನಲ್ಲಿ ಎರಡು ಹೆಬ್ಬೇವು, ನಾಲ್ಕೈದು ಹೊಂಗೆ ಮರಗಳಿದ್ದವು. ಆದರೆ, ರಾತ್ರೋರಾತ್ರಿ ಅವಕ್ಕೆ ಬೆಂಕಿಹಚ್ಚಿದ್ದರು. ಅದನ್ನು ನೋಡಿ ವೇದನೆ ಪಟ್ಟಿದ್ದೇನೆ. ರಾತ್ರಿ ಸಂಚರಿಸುವ ವ್ಯಕ್ತಿಗಳು ಇಂಥ ಕೃತ್ಯಕ್ಕೆ ಕಾರಣರಾಗುತ್ತಿದ್ದಾರೆ’ ಎಂದು ಆರ್. ಹೊಸಳ್ಳಿಯ ರೈತ ಸಾಬಣ್ಣ ಹೇಳುತ್ತಾರೆ.
‘ಜಿಲ್ಲೆಯಲ್ಲಿ ಹಾದು ಹೋಗಿರುವ ನಾಲ್ಕು ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿನ ಬೃಹತ್‌ ಮರಗಳಿಗೂ ಬೆಂಕಿ ಇಡಲಾಗಿದೆ. ಅವುಗಳ ನಿರ್ವಹಣೆ ಮಾಡಬೇಕಿರುವ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ದಿಂದ ಸಾಲುಮರಗಳು ಬೆಂಕಿಗೆ ಆಹುತಿ ಯಾಗುತ್ತಿವೆ’ ಎಂಬುದಾಗಿ ರೈತರಾದ ರಾಜಣ್ಣ, ಹಣಮಂತರಾಯ ಭಂಗಿ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT