ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರ ಸಂಘಟನೆಗೆ ಒತ್ತು ಕೊಡಿ: ಮುದ್ನಾಳ

ಅಲ್ಪಸಂಖ್ಯಾತರ ಘಟಕದ ಕಚೇರಿ ಉದ್ಘಾಟನೆ
Last Updated 22 ಏಪ್ರಿಲ್ 2017, 5:05 IST
ಅಕ್ಷರ ಗಾತ್ರ
ಯಾದಗಿರಿ: ‘ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್‌ ಆಗಿ ಉಪಯೋಗಿಸಿ ಕೊಳ್ಳುತ್ತಾ ಬಂದಿರುವ ಕಾಂಗ್ರೆಸ್ ಕಾರಣ ಇಲ್ಲಿವ ರೆಗೂ ಅಲ್ಪಸಂಖ್ಯಾತರು ಎಲ್ಲಾ ಕ್ಷೇತ್ರ ಗಳಲ್ಲಿ ಹಿಂದುಳಿದಿದ್ದಾರೆ. ಇನ್ನಾ ದರೂ ಅಲ್ಪಸಂಖ್ಯಾತರು ಸಂಘಟಿತ ರಾಗ ಬೇಕು’ ಎಂದು ಬಿಜೆಪಿ ಮುಖಂಡ ಮುದ್ನಾಳ ಕರೆ ನೀಡಿದರು.
 
ನಗರ ಬಿಜೆಪಿ ಅಲ್ಪಸಂಖ್ಯಾತರ ಘಟಕದ ವತಿಯಿಂದ ನಗರದ ಮದನ ಪುರ ಗಲ್ಲಿಯಲ್ಲಿ ಇತ್ತೀಚೆಗೆ ಅಲ್ಪ ಸಂಖ್ಯಾತರ ಘಟಕದ ಕಚೇರಿ ಉದ್ಘಾಟಿಸಿ ಮಾತನಾಡಿದರು.
 
‘ರಾಜಕೀಯ ಶಕ್ತಿಯಾಗಿ ಅಲ್ಪ ಸಂಖ್ಯಾತರು ಗುರುತಿಸಿಕೊಳ್ಳುವ ಕಾಲ ಬಂದಿದೆ. ಯುವ ಮುಖಂಡರು ಒಡಕು ಬಿಟ್ಟು ಸೌಹಾರ್ದ ಭಾವದಿಂದ ಒಂದಾಗಿ ಸಂಘಟಿತ ಶಕ್ತಿ ತೋರಿಸಬೇಕು’ ಎಂದು ಸಲಹೆ ನೀಡಿದರು.
 
ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದಶಿ ರಿಯಾಜ್ ಅಹ್ಮದ್ ಕಲ್ಲೂರು ಮಾತನಾಡಿ,‘ಅಲ್ಪಸಂಖ್ಯಾತರ ಹೆಸರು ಹೇಳಿಕೊಂಡು ಓಟ್ ಬ್ಯಾಂಕ್ ಮಾಡಿಕೊಂಡವರನ್ನು ಇನ್ನು ಮುಂದಾದರೂ ಅರಿತುಕೊಳ್ಳಬೇಕಿದೆ.

ದೇಶ ಮತ್ತು ದೇಶದ ಜನರನ್ನು ಏಕ ಮನಸ್ಸಿನಿಂದ ಗೌರವಿಸುವ ಎಲ್ಲರ ವಿಕಾಸ ಬಯಸುವ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪಕ್ಕೆ ಅಲ್ಪಸಂಖ್ಯಾತರು ದನಿಗೂಡಿಸಬೇಕಿದೆ’ ಎಂದು ಹೇಳಿದರು.
 
ಯಾದಗಿರಿ ನಗರ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಜಾಹೇದ್ ಹುಸೇನ್ ಲಾತೂರಿ ಮಾತನಾಡಿ, ‘ ನಗರ ಘಟಕದ ವತಿಯಿಂದ ಇನ್ನು ಹಲವೆಡೆ ಅಲ್ಪ ಸಂಖ್ಯಾತರ ಮೋರ್ಚಾ ಕಚೇರಿ ಗಳನ್ನು ಆರಂಭಿಸಿ ಅಲ್ಪ ಸಂಖ್ಯಾತರಿಗೆ ಸಹಾಯ ಮಾಡಲಾಗುವುದು.   ಆ ಮೂಲಕ ಪಕ್ಷದ ಸಂಘಟ ನೆಗೆ ಒತ್ತು ನೀಡಲಾಗುವುದು’ ಎಂದು ಹೇಳಿದರು. 
 
ಉಮರಖಾನ್, ಬಷೀರ್, ಮಹಮ್ಮದ್ ಅಲಿ, ಶೇಖ್ ಹುಸೇನ್, ಸೈಯದ್, ಸದ್ದಾಂ ಇದ್ದರು. ನಗರ ಘಟಕದ ಉಪಾಧ್ಯಕ್ಷ ಮಹಮ್ಮದ್ ಗೌಸ್ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT