ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಪಿ ಹಾಕಿದವರು ಯಾರು?!

Last Updated 22 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಯಾದಗಿರಿ: ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಜಿಲ್ಲೆಯಲ್ಲಿ ‘ಮ್ಯಾರಥಾನ್’ ಎಂದರೇನು ಎಂದು ಕೇಳುವವರೇ ಹೆಚ್ಚು.

ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಈಚೆಗೆ ಜಿಲ್ಲಾ ಕೇಂದ್ರದಲ್ಲಿ ಅಂತಹ ಮ್ಯಾರಥಾನ್ ಓಟಕ್ಕೆ ವೇದಿಕೆ ಸಜ್ಜು ಗೊಂಡಿತು. ಈ ಹಿಂದೆ ಮ್ಯಾರಥಾನ್ ಓಟಕ್ಕೆ ವೇದಿಕೆ ಸಜ್ಜುಗೊಂಡಂತೆಲ್ಲಾ ಸಂಘಟಕರು ಜನರ ಸಹಭಾಗಿತ್ವದ ಕೊರತೆ ಅನುಭವಿಸುತ್ತಿದ್ದರು. ಆದರೆ ಈ ಸಲ ಮಾತ್ರ ಧೈರ್ಯ ಮಾಡಿ, ಓಟದಲ್ಲಿ ಭಾಗವಹಿಸುವವರಿಗೆ ₹ 150 ನೋಂದಣಿ ಶುಲ್ಕ ನಿಗದಿ ಮಾಡಿದ್ದರು! ಅದಕ್ಕೆ ಟೋಪಿ, ಟೀ ಶರ್ಟ್ ವಿತರಿಸುವುದಾಗಿ ಸಮಾಧಾನ ಮಾಡಿದ್ದರು.

ಮುಂಜಾನೆ ಓಟದ ಜತೆಗೆ ಟೋಪಿ, ಟೀ ಶರ್ಟ್ ಪಡೆ ಯುವ ಉತ್ಸಾಹದಲ್ಲಿದ್ದವರಿಗೆ ನಿರಾಸೆ ಕಾದಿತ್ತು. ಕೆಲವರಿಗೆ ಟೋಪಿ ಸಿಕ್ಕರೆ ಹಲವರಿಗೆ ಟೀ ಶರ್ಟ್‌ ಸಿಕ್ಕಿರಲಿಲ್ಲ. ಎಲ್ಲವನ್ನೂ ಮರೆತು ಓಡಿದ ಜನ ಕೊನೆಗೆ ಲುಂಬಿಣಿ ವನದ ಗುರಿ ಮುಟ್ಟಿದ ಮೇಲೆ ನೋಡಿದರೆ ನೆತ್ತಿಯ ಮೇಲೆ ಇದ್ದದ್ದು ಕೇಸರಿ ಟೋಪಿ! ಮ್ಯಾರಥಾನ್ ಪ್ರತೀಕವಾಗಿ ಬಿಳಿ, ನೀಲಿ ಬಣ್ಣದ ಟೋಪಿ ನೀಡುವ ಬದಲು ಕೇಸರಿ ಟೋಪಿ ಹಾಕಿದ್ದು ಯಾರು? ಜನರ ಗೊಣಗಾಟ ಕೇಳಿಬರುವ ಮುನ್ನವೇ ಸಂಘಟಕರು ನಾಪತ್ತೆಯಾಗಿದ್ದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT