ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾಲ್ಲೂಕಿಗೆ ಹೊಸದಾಗಿ 16 ಕೊಳವೆಬಾವಿ’

Last Updated 23 ಏಪ್ರಿಲ್ 2017, 6:58 IST
ಅಕ್ಷರ ಗಾತ್ರ

ಕಾರವಾರ:  ‘ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ 14ನೇ ಹಣ ಕಾಸು ಯೋಜನೆಯಡಿ ಪ್ರತಿ ಗ್ರಾಮ ಪಂಚಾಯ್ತಿಗೆ ತಲಾ ₹ 1.50 ಲಕ್ಷ ಬಿಡುಗಡೆ ಮಾಡಲಾಗಿದೆ. ಅಲ್ಲದೇ ನೀರು ಅವಶ್ಯವಿರುವ ಕಡೆಗಳಲ್ಲಿ ಒಟ್ಟು 16 ಕೊಳವೆಬಾವಿಗಳನ್ನು ಕೊರೆಸಲು ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದು ಶಾಸಕ ಸತೀಶ್‌ ಸೈಲ್‌ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಉಂಟಾಗಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಶನಿವಾರ ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕರೆಯ ಲಾಗಿದ್ದ ಪಿಡಿಓ ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜವಾಬ್ದಾರಿಯಿಂದ ಕೆಲಸ ಮಾಡಿ: ‘ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯ್ತಿಗಳಲ್ಲಿ ನೀರಿನ ಸಮಸ್ಯೆ ಎದು ರಾಗಿದೆ. ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದು, ಗ್ರಾಮ ಪಂಚಾಯ್ತಿಗಳಲ್ಲಿ ಅನುದಾನ ಇಲ್ಲ ವೆಂದು ಕೈಚೆಲ್ಲಿ ಕುಳಿತುಕೊಳ್ಳಬೇಡಿ. ಹಣ ಇಲ್ಲದಿದ್ದಲ್ಲಿ ನನ್ನ ಗಮನಕ್ಕೆ ತರಬೇಕು. ಎಲ್ಲಿಯೂ ಜನರಿಗೆ ನೀರಿನ ತೊಂದರೆ ಆಗಬಾರದು. ಆಯಾ ಗ್ರಾಮ ಪಂಚಾಯ್ತಿ ಪಿಡಿಓಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು’ ಎಂದು ತಾಕೀತು ಮಾಡಿದರು.

‘ಸದಾಶಿವಗಡದಲ್ಲಿ ಸುಮಾರು ₹ 1.25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಟ್ಯಾಂಕ್ ಉಪಯೋಗಕ್ಕೆ ಬಾರದಂತಾ ಗಿದೆ. ಪಂಚಾಯ್ತಿ ಅವರನ್ನು ಕೇಳಿದರೆ ಟ್ಯಾಂಕ್ ಎತ್ತರದಲ್ಲಿರುವುದರಿಂದ ನೀರು ಮೇಲೆ ಹತ್ತುವುದಿಲ್ಲ. ಹೀಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಟ್ಯಾಂಕ್ ಉಪಯೋಗಕ್ಕೆ ಬಾರದಂತಾಗಿದೆ. ಈ ರೀತಿ ಸಮಸ್ಯೆ ಆದರೆ ಅದಕ್ಕೆ ಬದಲೀ ವ್ಯವಸ್ಥೆ ಮಾಡಬೇಕು. ಏನು ಮಾಡಿದರೆ ನೀರು ಟ್ಯಾಂಕ್‌ಗೆ ಪೂರೈಸಲು ಸಾಧ್ಯ ಎನ್ನುವ ಬಗ್ಗೆ ಯೋಚಿಸಬೇಕು’ ಎಂದರು.

‘ತಾಲ್ಲೂಕಿನಲ್ಲಿ ಬಹುತೇಕ ಟ್ಯಾಂಕ್‌ ಗಳು ನೀರಿಲ್ಲದೇ ಅನುಪಯುಕ್ತ ವಾಗಿವೆ. ಬರಿದಾಗಿರುವ ಈ ಟ್ಯಾಂಕ್‌ಗಳಲ್ಲಿ ನೀರು ಪೂರೈಕೆ ಆಗುವಂತೆ ನೋಡಿಕೊಳ್ಳ ಬೇಕು. ಕೃಷಿ ಬಳಕೆಗಾಗಿ ಗೋಪಿಶಿಟ್ಟಾ, ಹಣಕೋಣ ಹಾಗೂ ಗೋಟೆಗಾಳಿಯಲ್ಲಿ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿತ್ತು. ಆದರೆ ಮೇಲ್ನೋಟಕ್ಕೆ ಆ ಭಾಗದಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿಲ್ಲ. ಅಲ್ಲಿ ನೀರಿನ ಲಭ್ಯತೆ ಇದ್ದು, ಕೃಷಿ ಇಲಾಖೆ ಹಾಗೂ ಚಿಕ್ಕ ನೀರಾವರಿ ಇಲಾಖೆ ಯವರು ಜಂಟಿಯಾಗಿ ಪರಿಶೀಲನೆ ನಡೆಸಿ, ಸುತ್ತಮುತ್ತಲಿನ  ಗ್ರಾಮಗಳು ನೀರನ್ನು ಬಳಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಹೇಳಿದರು.ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕೃಷ್ಣ ಮೆಹ್ತಾ, ಶಾಂತಾ ಬಾಂದೇಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT