ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಿಂಗಳಾದರೂ ಕೈಗೆಟುಕದ ಪಡಿತರ ಚೀಟಿ!

Last Updated 23 ಏಪ್ರಿಲ್ 2017, 8:33 IST
ಅಕ್ಷರ ಗಾತ್ರ

ಚಿಂಚೋಳಿ: ‘ಸಕಾರಣವಿಲ್ಲದೇ 3,000 ಬಡವರ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ. ಜತೆಗೆ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ 15 ದಿನಗಳಲ್ಲಿ ಹೊಸ ಪಡಿತರ ಚೀಟಿ ನೀಡುವುದಾಗಿ ಹೇಳುವ ಅಧಿಕಾರಿಗಳು 3 ತಿಂಗಳಾದರೂ ಪಡಿತರ ಚೀಟಿ ನೀಡಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.

ಅಧ್ಯಕ್ಷೆ ರೇಣುಕಾ ಅಶೋಕ ಚವಾಣ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಪ್ರೇಮಸಿಂಗ್‌ ಜಾಧವ್‌, ರಾಮರಾವ್‌ ರಾಠೋಡ, ವೀಣಾ ವಿಜಯಕುಮಾರ ಮಾನಕಾರ, ಅಂಜನಾದೇವಿ ಜಗನ್ನಾಥ ಮಾಳಗೆ ಮತ್ತು ಗೌರಮ್ಮ ಸುಭಾಶ್ಚಂದ್ರ ಚೇಂಗಟಿ ವಿಷಯ ಪ್ರಸ್ತಾಪಿಸಿ, ಅರ್ಜಿ ಸಲ್ಲಿಸಿದ 6,000 ಕುಟುಂಬಗಳಿಗೆ ಬೇಗ ಹೊಸದಾಗಿ ಪಡಿತರ ಚೀಟಿ ನೀಡುವಂತೆ ಒತ್ತಾಯಿಸಿದರು.

ಬಡವರಿಗೆ ಅನ್ಯಾಯ ಮಾಡುವುದು ಬೇಡ. ಸಮರ್ಪಕವಾಗಿ ಪಡಿತರ ಚೀಟಿ ಕೊಡಿ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹಮದ್‌ ಹುಸೇನ ನಾಯ್ಕೋಡಿ ಸೂಚಿಸಿದರು.‘ಸದ್ಯ ತಾಲ್ಲೂಕಿನಲ್ಲಿ 99 ಅಂಗಡಿಗಳಿದ್ದು ಇನ್ನೂ 30 ಹೊಸ ಅಂಗಡಿಗಳು ಮಂಜೂರಾಗಿವೆ. ಹೊಸ ಪಡಿತರ ಚೀಟಿಗೆ ಮ್ಯಾಪಿಂಗ್‌ ಮಾಡಿದ ನಂತರ ಅರ್ಜಿದಾರರ ಮನೆ ವಿಳಾಸಕ್ಕೆ ಪಡಿತರ ಚೀಟಿ ಅಂಚೆ ಮೂಲಕ ತಲುಪಿಸಲಾಗುವುದು’ ಎಂದು ಎಂದು ಆಹಾರ ಶಿರಸ್ತೇದಾರ ಮಾಣಿಕ್‌ ತಿಳಿಸಿದರು.

‘ಕುಡಿವ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಅಧಿಕಾರಿಗಳು ಕೊಳವೆ ಬಾವಿ ಕೊರೆಸಿ ಕೈತೊಳೆದುಕೊಳ್ಳುತ್ತಿದ್ದಾರೆ.ಆದರೆ ಹೊಸ ಕೊಳವೆ ಬಾವಿಗಳಿಗೆ ಮೋಟಾರ್‌ ಮತ್ತು ವಿದ್ಯುತ್‌ ಸಂಪರ್ಕ ಅಳವಡಿಸುತ್ತಿಲ್ಲ’ ಎಂದು ಸದಸ್ಯರು ರಾಮರಾವ್‌ ರಾಠೋಡ ದೂರಿದರು.‘ಪಸ್ತಪುರ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ನೀರು ಸರಬರಾಜಾಗುತ್ತಿದೆ. ಈ ಗ್ರಾಮಕ್ಕೆ ಶಾಸ್ವತ ಸಮಸ್ಯೆ ನಿವಾರಣೆಗೆ ಬಹುಗ್ರಾಮ ಕುಡಿವ ನೀರಿನ ಯೋಜನೆಯಿಂದ ನೀರು ಸರಬರಾಜಿಗೆ ಕ್ರಮಮಕೈಗೊಳ್ಳಲಾಗುತ್ತಿದೆ’ ಎಂದು ಎಂಜಿನಿಯರ್‌ ಯುವರಾಜ ಮತ್ತು ರಾಮಚಂದ್ರ ತಿಳಿಸಿದರು.

‘ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಸಮರ್ಪಕವಾಗಿ ಪೂರೈಸುತ್ತಿಲ್ಲ ಟ್ರಿಪ್‌ ಆದರೆ ಟ್ಯಾಂಕರ್‌ ಭರ್ತಿಯಾಗುತ್ತಿಲ್ಲ ಇದರಿಂದ ಜನರು ಪರದಾಡುತ್ತಿದ್ದಾರೆ.ನೀರಿನ ಸಮಸ್ಯೆ ಪೀಡಿತ ಹಳ್ಳಿಗಳಲ್ಲಿ ವಿದ್ಯುತ್‌ ಸಮರ್ಪಕವಾಗಿ ಪೂರೈಸಬೇಕು’ ಎಂದು ಸದಸ್ಯ ಚಿರಂಜೀವಿ ಪಾಪಯ್ಯ, ಬಸವಣಪ್ಪ ಕುಡಳ್ಳಿ ಒತ್ತಾಯಿಸಿದರು.‘ತಾಲ್ಲೂಕಿನಲ್ಲಿ ಇನ್ನೂ 14 ವಾರಗಳಿಗೆ ಅಗತ್ಯವಾದಷ್ಟು ಮೇವಿನ ಸಂಗ್ರಹವಿದೆ. ಇದು ಪ್ರಸಕ್ತ ಬೇಸಿಗೆ ಮುಗಿಯುವವರೆಗೆ ಸಾಕಾಗುತ್ತದೆ. ಈಗಾಗಲೇ 3 ದಿನಗಳಿಂದ ಕಾಲು–ಬಾಯಿ ರೋಗಕ್ಕೆ ಲಸಿಕೆ ನೀಡುವ ಅಭಿಯಾನ ಶುರುವಾಗಿದೆ’ ಎಂದು ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಧನರಾಜ ಬೊಮ್ಮಾ ಮಾಹಿತಿ ನೀಡಿದರು.

‘ದುಸ್ಥಿತಿಯಲ್ಲಿರುವ ಶಾಲಾ ಕಟ್ಟಡಗಳ ಬಗ್ಗೆ ಹೈ.ಕ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ವರದಿ ಕೇಳಿದ್ದು, ಶೀಘ್ರವೇ ಕಳಿಸಲಾಗುವುದು’ ಎಂದು ಬಿಇಒ ಜನಾರ್ದನರೆಡ್ಡಿ ಮಾಲಿ ಪಾಟೀಲ ತಿಳಿಸಿದರು.‘ತೊಗರಿ ಖರೀದಿ ಕೇಂದ್ರ ಇನ್ನೂ ಒಂದು ತಿಂಗಳು ವಿಸ್ತರಿಸಬೇಕು’ ಎಂದು ಬಸವಣಪ್ಪ ಕುಡಳ್ಳಿ, ಚಿರಂಜೀವಿ ಪಾಪಯ್ಯ, ಅಂಜನಾದೇವಿ ಮತ್ತು ಹಣಮಂತ ರಾಜಗಿರಾ ಆಗ್ರಹಿಸಿದರು.

‘ಹಲಚೇರಾ ಹೊಸಳ್ಳಿ ಮಾರ್ಗದಲ್ಲಿ ಕಳೆದ ವರ್ಷ ಉರುಳಿ ಬಿದ್ದ ವಿದ್ಯುತ್‌ ಕಂಬ ಇನ್ನೂ ಮೇಲೆತ್ತಿಲ್ಲ’ ಎಂದು ಸದಸ್ಯೆ ಗೌರಮ್ಮ ಚೇಂಗಟಿ ಮತ್ತು ವೀಣಾ ವಿಜಯಕುಮಾರ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರ ಮೂಲಕವೇ ಫಲಾನುಭವಿಗಳಿಗೆ ಯೋಜನೆ ತಲುಪಬೇಕು’ ಎಂದು ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ ಮತ್ತು ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ ಸೂಚಿಸಿದರು.ಜಗನ್ನಾಥ ಇದಲಾಯಿ, ರಾಜೇಂದ್ರ ಗೋಸುಲ್‌, ಹಣಮಂತ ರಾಜಗಿರಾ, ದತ್ತಾತ್ರೇಯ ಕುಲಕರ್ಣಿ,  ಉಮ್ಲಿಬಾಯಿ ಬನ್ಸಿಲಾಲ, ಬಲಭೀಮ ನಾಯಕ ಇದ್ದರು. ಇಒ ಅನಿಲ ರಾಠೋಡ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT