ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರ ಸ್ಥಿತಿ ಯಾರಿಗೂ ಬರಬಾರದು ನೋಡಿ...’

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಹಾಸನ: ‘ಇದು 26 ವರ್ಷದ ಹಿಂದೆ ನೆಟ್ಟ ತೆಂಗಿನ ಮರ. ನೀರಿಲ್ಲದೆ ಒಣಗಿದ ಕಾರಣ ವಿಧಿ ಇಲ್ಲದೆ ಕಡಿದು ಹಾಕಿದೆ. ರೈತರ ಸ್ಥಿತಿ ಯಾರಿಗೂ ಬರಬಾರದು ನೋಡಿ...’

ಚನ್ನರಾಯಪಟ್ಟಣ ತಾಲ್ಲೂಕಿನ ಹೊಸೂರಿನ ರೈತ ರವಿ ಅವರು ತಮ್ಮ ತೋಟದಲ್ಲಿ ಕಡಿದು ಹಾಕಿದ್ದ ಮರ ತೋರಿಸಿ ಕ್ಷಣ ಮೌನಕ್ಕೆ ಜಾರಿದರು.

‘ಬಿಸಿಲಿನ ತಾಪ, ತೇವಾಂಶದ ಕೊರತೆಯಿಂದಾಗಿ ಒಣಗಿ ಹೋಗಿದ್ದ ಹತ್ತು ಮರಗಳನ್ನು ಕಡಿದು ಹಾಕಿದ್ದೇನೆ. ಬಾಕಿ ಮರಗಳನ್ನು ಉಳಿಸಿಕೊಳ್ಳಲು 3 ದಿನದ ಹಿಂದೆ ಸಾಲ ಮಾಡಿ ಕೊಳವೆ ಬಾರಿ ಕೊರೆಸಿದ್ದೇನೆ. ನೀರಿಲ್ಲದೆ ಈಗ 200 ಮರದಿಂದ 5 ಸಾವಿರ ಕಾಯಿ ಬೀಳುತ್ತಿದೆ. ನುಸಿ, ಕಾಂಡ ಸೊರಗು ರೋಗ ತಗುಲಿ ಮರಗಳು ಹಾಳಾಗಿವೆ. ಏನು ಮಾಡಬೇಕು ಗೊತ್ತಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ಜಿಲ್ಲೆಯಲ್ಲಿ 66,602 ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆಯಲಾಗಿದೆ. ಅತಿ ಹೆಚ್ಚು ಅರಸೀಕೆರೆ ತಾಲ್ಲೂಕಿನಲ್ಲಿ 27,837 ಹೆಕ್ಟೇರ್‌, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 25,217 ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ. ಮುಂಗಾರು, ಹಿಂಗಾರು ಕೈ ಕೊಟ್ಟ ಕಾರಣ 23,218 ಹೆಕ್ಟೇರ್‌ ತೆಂಗು ನಾಶವಾಗಿದೆ. ಅರಸೀಕೆರೆಯಲ್ಲಿ 16,191 ಹೆಕ್ಟೇರ್‌, ಚನ್ನರಾಯಪಟ್ಟಣ­ದಲ್ಲಿ 14,217 ಹೆಕ್ಟೇರ್‌ನಲ್ಲಿ ಬೆಳೆ ನಾಶವಾಗಿದೆ. ಬೆಳೆ ಹಾನಿಯಿಂದ ಬೆಳೆಗಾರರಿಗೆ ₹44 ಕೋಟಿ ನಷ್ಟವಾಗಿದೆ.

ತೋಟಗಾರಿಕೆ ಇಲಾಖೆ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 18,76,77 ತೆಂಗಿನ ಮರಗಳು ಭಾಗಶಃ ಹಾನಿಯಾಗಿವೆ. 14,43,366 ಮರಗಳು ಸಂಪೂರ್ಣ ಹಾನಿಯಾಗಿವೆ. ಶೇ 60ರಷ್ಟು ಮರಗಳಲ್ಲಿ ಇಳುವರಿ ತೀವ್ರ ಕುಸಿತ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT