ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ಸಂಪರ್ಕ ರಸ್ತೆ ಸಮಸ್ಯೆಗೆ ಪರಿಹಾರ

Last Updated 25 ಏಪ್ರಿಲ್ 2017, 6:19 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಹರವಿ ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಿಸಲು ಅಗತ್ಯವಿರುವ ಜಮೀನನ್ನು ರೈತರ ಮನವೋಲಿಸಿ ನೇರ ಖರೀದಿಗೆ ಒಪ್ಪಿಸುವಲ್ಲಿ ಜಿಲ್ಲಾಧಿಕಾರಿ ಡಾ. ರಾಮಪ್ರಸಾದ್ ಯಶಸ್ವಿಯಾದರು.ತಾಲ್ಲೂಕಿನ ಹರವಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ­ಸಭೆ­ಯಲ್ಲಿ ಭೂಮಿ ಕಳೆದು­ಕೊಳ್ಳುವ ಸಂತ್ರಸ್ತ ರೈತರ ಅಹವಾಲು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ, ‘ರೈತರು ನೇರ ಖರೀದಿಗೆ ಒಪ್ಪುವುದಾದರೆ ತಮ್ಮ ಪರಿಮಿತಿಯಲ್ಲಿ ಗರಿಷ್ಠ ಭೂ ಪರಿಹಾರ ಹಾಗೂ ಮಾನವೀಯತೆ ದೃಷ್ಟಿಯಿಂದ ಪುನರ್ವಸತಿಗೆ ನೆರವು ಕಲ್ಪಿಸಲಾ­ಗುವುದು.

ಒಪ್ಪಿಗೆ ನೀಡದಿದ್ದರೆ ಕಾನೂ­ನಾತ್ಮಕ ಕ್ರಮಗಳಿಂದ ಭೂಸ್ವಾಧೀನ­ಪಡಿಸಿಕೊಳ್ಳುವುದು ಅನಿವಾರ್ಯ­ ವಾ­ಗುತ್ತದೆ’ ಎಂದು ಹೇಳಿದಾಗ ರೈತರು ನೇರ ಖರೀದಿ ಪ್ರಕ್ರಿಯೆಗೆ ಸಮ್ಮತಿಸಿದರು.ಸಂಪರ್ಕ ರಸ್ತೆಗಾಗಿ 10 ಎಕರೆ ಖಾಸಗಿ ಜಮೀನು, 11 ಎಕರೆ ಸರ್ಕಾರಿ ಜಮೀನು ವಶಕ್ಕೆ ಪಡೆಯಲಾಗುತ್ತದೆ. ಇಲ್ಲಿನ ಮಾರುಕಟ್ಟೆ ಮೌಲ್ಯ ₹2.22 ಲಕ್ಷ ಇದ್ದರೂ ಭೂಮಿ ಕಳೆದುಕೊಳ್ಳುವ ರೈತರಿಗೆ ಅನುಕೂಲ ಕಲ್ಪಿಸಲು ಉದ್ದೇ­ಶದಿಂದ ಎಕರೆಗೆ ₹10ಲಕ್ಷ  ಭೂ ಪರಿಹಾರ ನಿಗದಿಪಡಿಸಲಾಗಿದೆ. ಒಪ್ಪಿಗೆ ಕರಾರು ಮಾಡಿಕೊಂಡ ವಾರದೊಳಗೆ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಕೃಷಿ ಜಮೀನಿಗೆ ಎಕರೆವಾರು ಪರಿಹಾರದ ಜತೆಗೆ ಜಮೀನಿನಲ್ಲಿರುವ ಗಿಡಮರ, ಕೊಳವೆಬಾವಿ, ಆಸ್ತಿಪಾಸ್ತಿ­ಗಳಿಗೆ ನಿಯಮಾನುಸಾರ ಪ್ರತ್ಯೇಕ ಪರಿ­ಹಾರ ನೀಡಲಾಗುತ್ತದೆ ಎಂದರು.ಗ್ರಾಮ ಪರಿಮಿತಿಯ 62 ಮನೆಗಳು, 102 ನಿವೇಶನಗಳನ್ನು ವಶ ಪಡಿಸಿ­ಕೊಳ್ಳಲಾಗುತ್ತದೆ. ಈ ಪೈಕಿ ದಾಖಲಾತಿ ಇರುವ 52 ಪಕ್ಕಾ ಮನೆಗಳಿಗೆ ಪರಿಹಾರ ನೀಡಿ, ಬೇರೆಡೆ ನಿವೇಶನ ನೀಡಲಾ­ಗುತ್ತದೆ. 10 ದನದ ಕೊಟ್ಟಿಗೆಗಳಿಗೆ ಸಂಚಿತ ಮೌಲ್ಯ ಆಧರಿಸಿ ಪರಿಹಾರ ವಿತರಿಸಲಾಗುವುದು. ಮನೆ ಕಳೆದುಕೊಳ್ಳುವ ಸಂತ್ರಸ್ತರಿಗಾಗಿ ವಸತಿ ವಿನ್ಯಾಸ ಅಭಿವೃದ್ಧಿಪಡಿಸಿನಿವೇಶನ ಹಂಚ­ಲಾಗುವುದು  ಎಂದರು.

ಸಂತ್ರಸ್ತರಾದ ಪ್ರಭು ರಾಘ­ವೇಂದ್ರ, ಚಿದಾನಂದ, ವಿಜಯ­ಕುಮಾರ್, ಸಾರ್ವ­­ಜನಿಕ ಉದ್ದೇಶಕ್ಕೆ ಮನೆ, ಜಮೀನು ಕಳೆದುಕೊಳ್ಳುವ ರೈತರಿಗೆ ಮಾನವೀಯತೆ ದೃಷ್ಟಿಯಿಂದ ಗರಿಷ್ಠ ಪರಿಹಾರ ನೀಡುವಂತೆ ಮನವಿ ಮಾಡಿ­ದರು. ಧಾರವಾಡ ವಿಶೇಷ ಭೂ ಸ್ವಾಧೀ­ನಾಧಿಕಾರಿ ಸಿದ್ದಪ್ಪ, ರಾಷ್ಟ್ರೀಯ ಹೆದ್ದಾರಿ ಚಿತ್ರದುರ್ಗ ವಿಭಾಗದ ಕಾರ್ಯ­ನಿರ್ವಾಹಕ ಎಂಜಿನಿಯರ್ ರವಿಶಂಕರ್, ತಹಶೀಲ್ದಾರ್ ರಾಘವೇಂದ್ರ ರಾವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT