ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಕಥೆಗಳ ಪಂಚಕಜ್ಜಾಯ

Last Updated 27 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಪನ್ನಗ ಭರಣ ಚೊಚ್ಚಿಲ ನಿರ್ದೇಶನದ, ಬಹುತಾರಾಗಣದ ಸಿನಿಮಾ ‘ದ ಹ್ಯಾಪಿ ನ್ಯೂ ಇಯರ್’ ಮುಂದಿನ ವಾರ (ಮೇ 5) ತೆರೆಕಾಣುತ್ತಿದೆ. ಐದು ಭಿನ್ನ ಪ್ರೇಮಕಥೆಗಳನ್ನು ಒಂದೇ ಬಂಧದಲ್ಲಿ ಹೆಣೆದಿರುವ ಚಿತ್ರ ಇದು. ಮುಖ್ಯ ಪಾತ್ರಗಳನ್ನು ಪರಿಚಯಿಸುವ ಐದು ಪ್ರತ್ಯೇಕ ಟೀಸರ್‌ಗಳನ್ನೂ ತಂಡ ಅನಾವರಣ ಮಾಡಿದೆ.
 
‘ರಾಜ್‌ಕುಮಾರ’ ಚಿತ್ರ ಹೊರತುಪಡಿಸಿದರೆ ಈಚಿನ ದಿನಗಳಲ್ಲಿ ಒಂದೊಳ್ಳೆಯ ಕೌಟುಂಬಿಕ ಮನರಂಜನಾ ಸಿನಿಮಾ ಬಂದಿಲ್ಲ. ಆ ಕೊರತೆಯನ್ನು ‘ದ ಹ್ಯಾಪಿ ನ್ಯೂ ಇಯರ್’ ಚಿತ್ರ ತುಂಬಿಕೊಡುತ್ತದೆ ಎಂಬುದು ಪನ್ನಗ ಅವರ ವಿಶ್ವಾಸ. 
 
ಐದು ಕಥೆಗಳಿದ್ದರೂ ಇದು  ಪ್ರಯೋಗಾತ್ಮಕ ಸಿನಿಮಾ ಅಲ್ಲ, ಕಮರ್ಷಿಯಲ್ ಸಿನಿಮಾಕ್ಕೆ ಬೇಕಾದ ಎಲ್ಲ ಅಂಶಗಳು ಇವೆ ಎಂದು ಅವರು ಹೇಳುತ್ತಾರೆ. ‘ಹೊಸ ವರ್ಷಾಚರಣೆ ಎಂದರೆ ಅದು ದಿನಾಂಕದ ಮಾತಲ್ಲ. ನಮ್ಮ ವ್ಯಕ್ತಿತ್ವದಲ್ಲಿ ಹೊಸತನ ಕಂಡುಕೊಳ್ಳುವುದನ್ನೇ ಹ್ಯಾಪಿ ನ್ಯೂ ಇಯರ್.
 
ಅದು ಯಾವಾಗ ಬೇಕಾದರೂ ಆಗಬಹುದು. ಹಾಗೆ ನಮ್ಮ ಚಿತ್ರದಲ್ಲಿ ಪ್ರತಿಯೊಂದು ಪಾತ್ರವೂ ತನ್ನಲ್ಲಿ ಹೊಸತನವನ್ನು ಕಂಡುಕೊಳ್ಳುತ್ತದೆ’ ಎಂದು ಸಿನಿಮಾದ ವೈಶಿಷ್ಟ್ಯ ಹೇಳಿದರು.
 
ಬಿ.ಸಿ. ಪಾಟೀಲ್, ಸಾಯಿಕುಮಾರ್, ಧನಂಜಯ್, ವಿಜಯ್ ರಾಘವೇಂದ್ರ, ದಿಗಂತ್, ಸುಧಾರಾಣಿ, ಶ್ರುತಿ ಹರಿಹರನ್, ಸೋನು ಗೌಡ, ರಾಜ್‌ಶ್ರೀ ಪೊನ್ನಪ್ಪ, ಸೃಷ್ಠಿ ಪಾಟೀಲ್, ರಷ್ಯಾದ ಮಾರ್ಗರಿಟಾ ಮುಖ್ಯ ತಾರಾಗಣದಲ್ಲಿದ್ದಾರೆ. ರಘು ದೀಕ್ಷಿತ್ ಸಂಗೀತ, ಶ್ರೀಶ ಕೂದುವಳ್ಳಿ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.
 
‘ಬಾಹುಬಲಿ 2’ ಬಿಡುಗಡೆ ಆಗಿ ಒಂದೇ ವಾರಕ್ಕೆ ‘ದ ಹ್ಯಾಪಿ ನ್ಯೂ ಇಯರ್’ ಸಿನಿಮಾ ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ‘ಪರಭಾಷಾ ಸಿನಿಮಾಗಳ ದಬ್ಬಾಳಿಕೆ ಕನ್ನಡದ ನೆಲದಲ್ಲಿ ಹೆಚ್ಚಾಗುತ್ತಿದೆ. ಕನ್ನಡಿಗರು ಕನ್ನಡ ಸಿನಿಮಾ ಪ್ರೋತ್ಸಾಹಿಸಬೇಕು, ಗೆಲ್ಲಿಸಬೇಕು’ ಎಂಬ ಬೇಡಿಕೆಯೂ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದಿಂದ ಕೇಳಿಬಂತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT