ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಲಿದೆ ಪ್ರತಿಯೊಂದು ಆಸನದಲ್ಲೂ ಟಿವಿ ಒಳಗೊಂಡಿರುವ ಐಷಾರಾಮಿ ರೈಲು

Last Updated 30 ಏಪ್ರಿಲ್ 2017, 11:27 IST
ಅಕ್ಷರ ಗಾತ್ರ

ನವದೆಹಲಿ: ಸೆಲೆಬ್ರಿಟಿ ಬಾಣಸಿಗರು ತಯಾರಿಸಿದ ಪ್ರಯಾಣಿಕರ ಆಯ್ಕೆಯ ಆಹಾರ, ವೈಫೈ ಸಂಪರ್ಕ, ಪ್ರತಿಯೊಂದು ಬೋಗಿಯಲ್ಲೂ ಚಹಾ – ಕಾಫಿ ವಿತರಿಸುವ ಯಂತ್ರಗಳು, ಪ್ರತಿ ಆಸನದಲ್ಲೂ ಎಲ್‌ಸಿಡಿ ಟಿವಿ ಪರದೆ ಒಳಗೊಂಡ ಐಷಾರಾಮಿ ತೇಜಸ್ ಎಕ್ಸ್‌ಪ್ರೆಸ್ ರೈಲು ಜೂನ್‌ನಲ್ಲಿ ಮುಂಬೈ – ಗೋವಾ ನಡುವೆ ಸಂಚಾರ ಆರಂಭಿಸುವ ಸಾಧ್ಯತೆ ಇದೆ.

20 ಬೋಗಿಗಳನ್ನು ಒಳಗೊಂಡಿರುವ ಈ ರೈಲು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿರಲಿದೆ. ಭಾರತೀಯ ರೈಲ್ವೆಯು ರೈಲಿನಲ್ಲಿ ಸ್ವಯಂಚಾಲಿತ ಬಾಗಿಲು ಅಳವಡಿಸುತ್ತಿರುವುದು ಇದೇ ಮೊದಲಾಗಿದೆ. ಪ್ರಸ್ತುತ, ಮೆಟ್ರೊ ರೈಲುಗಳಲ್ಲಿ ಮಾತ್ರ ಸ್ವಯಂಚಾಲಿತ ಬಾಗಿಲು ಸೌಲಭ್ಯ ಇದೆ.

ಮುಂಬೈ – ಗೋವಾ ನಡುವೆ ತೇಜಸ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಎರಡನೇ ಹಂತದಲ್ಲಿ, ದೆಹಲಿ – ಚಂಡೀಗಡ ಮಾರ್ಗದಲ್ಲಿ ತೇಜಸ್ ಎಕ್ಸ್‌ಪ್ರೆಸ್ ಸಂಚರಿಸಲಿದೆ.

ಜೈವಿಕ ಶೌಚಾಲಯ, ನೀರಿನ ಪೈಪ್‌ಗಳಲ್ಲಿ ಸೆನ್ಸಾರ್ ಅಳವಡಿಸಿದ ಟ್ಯಾಪ್‌ಗಳು, ಹ್ಯಾಂಡ್ ಡ್ರೈಯರ್ಸ್ ಮತ್ತಿತರ ಸೌಲಭ್ಯಗಳನ್ನೂ ರೈಲು ಒಳಗೊಂಡಿರಲಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮನರಂಜನೆ, ಪ್ರಯಾಣಿಕರಿಗೆ ಸಂಬಂಧಿಸಿದ ಮಾಹಿತಿ ಮತ್ತು  ಸುರಕ್ಷತಾ ಸಲಹೆಗಳನ್ನು ನೀಡುವ ಸಲುವಾಗಿ ಆಸನಗಳಲ್ಲಿ ಎಲ್‌ಸಿಡಿ ಪರದೆಗಳನ್ನು ಅಳಡಿಸಲಾಗುತ್ತಿದೆ. ಮುಂಬರುವ ನಿಲ್ದಾಣದ ಬಗ್ಗೆ ಡಿಜಿಟಲ್ ಮಾಹಿತಿ, ಮುಂಗಡ ಕಾಯ್ದಿರಿಸುವಿಕೆಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಚಾರ್ಟ್ ಪ್ರತಿ ಬೋಗಿಗಳಲ್ಲಿ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT