ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತಸ ತಂದ ‘ಯಶೋಧ’

Last Updated 4 ಮೇ 2017, 19:30 IST
ಅಕ್ಷರ ಗಾತ್ರ

ನಮ್ಮನೆಯ ಹೆಸರು ‘ಯಶೋಧ’. ಈ ಹೆಸರನ್ನು ಇಡಲು ಎಷ್ಟು ಯೋಚಿಸಿದ್ದೆ ಗೊತ್ತಾ? ನನ್ನ ಸ್ವಂತ ಊರು ತುಮಕೂರು. ಇಲ್ಲಿ ಬಾಡಿಗೆ ಮನೆಯಲ್ಲಿದ್ದಾಗ ಮಾಲೀಕರ ಕಾಟ ಸಾಕಾಗಿತ್ತು.

ಸ್ವಂತದೊಂದು ಸೂರು ಹೊಂದುವ ಬಯಕೆ ಮೂಡುತ್ತಿತ್ತು. ಅಲ್ಲದೆ ಮಕ್ಕಳು ಇಲ್ಲಿಯೇ ಕೆಲಸದಲ್ಲಿ ಇದ್ದಿದ್ದರಿಂದ ಅವರು ತುಮಕೂರಿಗೆ ಬರುವುದಿಲ್ಲ ಎಂದು ಹೇಳಿದರು. ಅಲ್ಲಿದ್ದ ನಿವೇಶನವನ್ನು ಮಾರಿ, ಇಲ್ಲಿ ಅರ್ಧ ನಿವೇಶನ  ಸ್ಥಳವನ್ನು ಕೊಂಡುಕೊಂಡೆವು. ಮನೆ ನಿರ್ಮಾಣ ಅಂದುಕೊಂಡ ಸಮಯಕ್ಕೆ ಮುಗಿಯಿತು. ಆದರೆ ಅದಕ್ಕೊಂದು ಚೆಂದದ ಹೆಸರಿಡಬೇಕಲ್ವಾ.

ಮಕ್ಕಳಿಗೆ ಮುದ್ದಾದ ಹೆಸರಿಡಲು ಹುಡುಕುವ ಹಾಗೆಯೇ ಮನೆಗೆ ಹೆಸರಿಡುವಾಗಲೂ ಸಾಕಷ್ಟು ಚರ್ಚೆ, ಯೋಚನೆ ಮಾಡಿದ್ದೆ.

ಮನೆಯವರೆಲ್ಲ ಒಂದೊಂದು ಹೆಸರು ಸೂಚಿಸಿದರು. ಆದರೆ ನನಗೆ ಅದ್ಯಾವುದು ಇಷ್ಟವಾಗಲಿಲ್ಲ. ಕೊನೆಗೆ ಹೊಳೆದಿದ್ದೇ ಈ ಹೆಸರು.

ನನ್ನ ಪತ್ನಿಯ ಹೆಸರು ಯಶೋಧ. ಮನೆಯ ಗೃಹಲಕ್ಷ್ಮೀಯಾದ ನನ್ನ ಅರ್ಧಾಂಗಿಯ ಹೆಸರನ್ನೇ ಮನೆಗೆ ಇಡಲು ನಿರ್ಧರಿಸಿದೆವು. ಈ ಮನೆಯಲ್ಲಿ ನೆಮ್ಮದಿಯಿಂದ ಇದ್ದೇವೆ.
–ಪ್ರವೀಣ್‌, ಮಡಿವಾಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT